ಸಿದ್ದರಾಮಯ್ಯ ಗೌರವಯುತವಾಗಿ ರಾಜಿನಾಮೆ ನೀಡಲಿ; ಶಾಸಕ ಎಸ್ ಎನ್ ಚನ್ನಬಸಪ್ಪ(ಚನ್ನಿ)
ಸಿದ್ದರಾಮಯ್ಯ ಗೌರವಯುತವಾಗಿ ರಾಜಿನಾಮೆ ನೀಡಲಿ; ಶಾಸಕ ಎಸ್ ಎನ್ ಚನ್ನಬಸಪ್ಪ(ಚನ್ನಿ)
ಪ್ರಜಾಪ್ರಭುತ್ವ ವ್ಯವಸ್ಥೆ ಬುಡಮೇಲಿಗೆ ಕಾಂಗ್ರೆಸ್ ಕೈ ಹಾಕಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ವಿರುದ್ಧ ನಡೆ ತೋರಿಸಿ ದೇಶಕ್ಕೆ ಅಪಮಾನ ಮಾಡಿದೆ.
ಪ್ರಶ್ನಿಸಬಹುದು. ಅದಕ್ಕೊಂದು ನೈತಿಕ ನೆಲೆಗಟ್ಟಿರಬೇಕು. ರಾಜ್ಯಪಾಲರ ನಿರ್ಣಯದ ವಿರುದ್ಧ ಅಪಮಾನಿಸುವ ಕೆಲಸ ಕಾಂಗ್ರೆಸ್ ಮಾಡ್ತಿದೆ. ಇದು ದೇಶದ ನಾಗರೀಕರಿಗೆ ಮಾಡುತ್ತಿರುವ ಅಪಮಾನ
ಸಚಿವ ಕೃಷ್ಣ ಭೈರೇಗೌಡರ ಮಾತಿಂದ ಗೌರವ ಕಡಿಮೆ. ಐವಾನ್ ಡಿಸೋಜಾ ಹೈವಾನ್ ಡಿಸೋಜಾ ಥರ ಮಾತಾಡ್ತಿದ್ದಾರೆ. ಬಾಂಗ್ಲಾ ಘಟನೆ ರಾಜ್ಯಕ್ಕೆ ಹೋಲಿಸುತ್ತಿರುವವರನ್ನು ಬಂಧಿಸಬೇಕು.
ಕಾನೂನು ಸುವ್ಯವಸ್ಥೆ ಇದೆಯೋ? ರಾಜ್ಯಪಾಲರ ಫೋಟೋ ಸುಟ್ಟುಹಾಕುತ್ತಿರುವ ಕಾಂಗ್ರೆಸ್ಸಿಗರ ವಿರುದ್ಧ ಕ್ರಮ ಕೈಗೊಳ್ಳಿ. ಹೋರಾಟ ಮಾಡಲಿ…ಈ ಥರದ ಹೇಯ ಕೃತ್ಯ ಬೇಡ.
ಕಾನೂನು ಸುವ್ಯವಸ್ಥೆ ರಾಜ್ಯದಲ್ಲಿ ಸತ್ತು ಹೋಗಿದೆ. ವ್ಯವಸ್ಥೆಗೆ ಕಳಂಕ ತರುವ ಕೆಲಸ ಮಾಡುತ್ತಿರುವ ಕಾಂಗ್ರೆಸ್ ಗೆ ನೈತಿಕತೆ ಇಲ್ಲ. ಕೂಡಲೇ ಸಿಎಂ ರಾಜಿನಾಮೆ ಕೊಡಲಿ.
ತಪ್ಪು ಮಾಡಿಲ್ಲ ಎಂದರೆ ಸಿಎಂಗೆ ಭಯವೇಕೆ? ತನಿಖೆಗೆ ಸಿದ್ಧರಾಗುವ ತಾಖತ್ತಿಲ್ಲವೇ ನಿಮಗೆ? ಕೂಡಲೇ ರಾಜಿನಾಮೆ ಕೊಡಿ.
ನೀವು ಕಳಂಕಿತ ಮುಖ್ಯಮಂತ್ರಿ. ಚಕ್ರವ್ಯೂಹದಲ್ಲಿ ಯಾರು ಸಿಗಿಸಿದ್ದಾರೋ ಗೊತ್ತಿಲ್ಲ. ರಾಜ್ಯಪಾಲರ ನಡೆ ಅತ್ಯಂತ ಸ್ವಾಗತಾರ್ಹ.ತಕ್ಷಣ ಪ್ರಾಸಿಕ್ಯೂಷನ್ ತೀರ್ಮಾನವಲ್ಲ. ಅವರಿಂದ ಪ್ರಮಾಣವಚನ ಸ್ವೀಕರಿಸಿದ್ದೀರಿ. ಆಗವರು ಒಳ್ಳೆಯವರು. ಈಗ ಅವರೇ ಕೆಟ್ಟವರಾಗಿಬಿಟ್ಟರು. ನಿಮ್ಮನ್ನು ಕಿತ್ತು ಬಿಸಾಕುವ ಅಧಿಕಾರ ರಾಜ್ಯಪಾಲರಿಗಿದೆ.
ಸಿದ್ದರಾಮಯ್ಯ ಭ್ರಷ್ಟರಲ್ಲ ಎಂದು ತನಿಖೆಯಿಂದ ಸಾಬೀತಾದರೆ ನಾವೂ ನಿಮ್ಮ ಪಾದ ತೊಳೆದು ನೀರು ಕುಡೀತೀವಿ. ಹೊಸ ಶಾಸಕರಿಗೆ ಪಾಠ ಹೇಳಿದವರೆಲ್ಲ ಈಗ ಅದನ್ನು ಮರೆತಿದ್ದಾರೆ.
ಸಂವಿಧಾನದ ವ್ಯವಸ್ಥೆಗನುಗುಣವಾಗಿ ನಡೆದುಕೊಳ್ಳಿ. ಹಿಂದುಳಿದ ನಾಯಕನಿಗೆ ಅಪಮಾನ ಮಾಡುತ್ತಿರುವುದಲ್ಲ . ಭ್ರಷ್ಟರ ವಿರುದ್ಧ ನಡೆಯುತ್ತಿದ್ದೇವೆ. ಸಿದ್ದರಾಮಯ್ಯ ಹೋದ್ರೆ ಮತ್ತೊಬ್ಬರು ಬರ್ತಾರೆ. ಸರ್ಕಾರ ಹೋಗೋದಿಲ್ಲ. ಭ್ರಷ್ಟರು ಹೋಗ್ತಾರೆ ಅಷ್ಟೇ.
ಹಿಂದುಳಿದ ವರ್ಗಗಳಿಗೆ ಅನ್ಯಾಯ ಮಾಡಿದ ಅಹಿಂದ ಚಾಂಪಿಯನ್ ಸಿದ್ದರಾಮಯ್ಯ. 300 ಕೋಟಿ ಹಣ ವಾಪಸ್ ತಗೊಂಡಿದೀರಿ. 22-23 ನೇ ಸಾಲಿನ ಯೋಜನೆಗಳ ಹಣ ರದ್ದು ಮಾಡಿದ್ದೀರಿ. ಶಿವಮೊಗ್ಗ ಜಿಲ್ಲೆಯಲ್ಲಿ 99 ಸಮುದಾಯ ಭವನಗಳ ಕಾಮಗಾರಿ ರದ್ದು ಮಾಡಿದ್ದೀರಿ. ಇದು ಅನಾಗರೀಕ ವರ್ತನೆ. ಹಿಂದುಳಿದ ಸಮಾಜದವರು ಯೋಚಿಸಬೇಕಿದೆ.
ಸರ್ಕಾರ ಪಾಪರ್ ಆಗಿದೆ. ಆಡಳಿತದ ಚುಕ್ಕಾಣಿ ಹಿಡಿಯಲು ಅಸಮರ್ಥರಿದ್ದೀರಿ. 1093 ವಿದ್ಯಾರ್ಥಿ ನಿಲಯ, ಹಾಸ್ಟೆಲ್ ಗಳ ರದ್ದತಿ ತೀರಾ ಅವಮಾನಕರ.
ಅಭಿವೃದ್ಧಿ ನಿಗಮಗಳಿಗೆ ಹಣವೇ ಕೊಡದ ಸ್ಥಿತಿ ನಿರ್ಮಾಣ
ಮಾಡಿದ್ದೀರಿ. ನಾಲ್ಕಾಣೆಯೂ ಕೊಡದ ಸ್ಥಿತಿಯಲ್ಲಿ ಸರ್ಕಾರವಿದೆ.
1600 ಅರ್ಜಿಗಳು ಬಂದರೆ 3 ಅರ್ಜಿ ಸೆಲೆಕ್ಷನ್…ಹೀಗೆ, ಆಡಳಿತ ಮಾಡುತ್ತಿದ್ದಾರೆ ಸಿದ್ದರಾಮಯ್ಯ. ವಿದ್ಯಾರ್ಥಿ ವೇತನಗಳಿಲ್ಲ. 167 ಕೋಟಿಯ ವಾಲ್ಮೀಕಿ ಹಗರಣ ಸಣ್ಣದಲ್ಲ. ಸ್ವಲ್ಪವೂ ಮಾನ ಮರ್ಯಾದೆ ಇಲ್ಲ ಕಾಂಗ್ರೆಸ್ ಹೈಕಮಾಂಡಿಗೆ. ಸಿದ್ದರಾಮಯ್ಯ ಸರ್ಕಾರವೇ ಯಾಕೆ ಬೇಕು? ಬೇರೆ ನಾಯಕತ್ವವೇ ಇಲ್ಲವೇ? ಭ್ರಷ್ಟ ಸಿಎಂ ವಿರುದ್ಧ ಜನಾಂದೋಲನ ಮಾಡ್ತೀವಿ.
ಅದಃಪತನ ಹೊಂದಿದ ಸಿಎಂ. ನ್ಯಾಯಾಲಯದ ಆದೇಶ ಬರುವುದಕ್ಕಿಂತ ಮುಂಚೆ ಒಂದು ತೀರ್ಮಾನಕ್ಕೆ ಬಂದು ಬಿಡಿ ಸಿದ್ದರಾಮಯ್ಯರವರೇ. ತೆಲಂಗಾಣದ ಚುನಾವಣೆಗೆ ಕರ್ನಾಟಕ ಸರ್ಕಾರದ ಹಣ ಕೊಡಲಾಗಿದೆ. ಗೌರವಯುತವಾಗಿ ಸಿದ್ದರಾಮಯ್ಯ ರಾಜಿನಾಮೆ ಕೊಡಲಿ.
ಅವರು ಸಗಣಿ ತಿಂತಾರೆ ಅಂತ ಇವರೂ ತಿಂತಾರಾ?ಕುಮಾರಸ್ವಾಮಿ ವಿರುದ್ಧದ ಪ್ರಾಸಿಕ್ಯೂಷನ್ ನೀವೂ ಹೋರಾಟ ಮಾಡಬೇಕಿತ್ತು.
ಬಿಜೆಪಿ ನಗರ ಅಧ್ಯಕ್ಷ ಮೋಹನ್ ರೆಡ್ಡಿ, ಸೂಡಾ ಮಾಜಿ ಅಧ್ಯಕ್ಷ ನಾಗರಾಜ್, ಜಗದೀಶ್, ಶ್ರೀನಾಗ್ ಉಪಸ್ಥಿತರಿದ್ದರು.