ನನಗೆ ಅಪ್ಪ ಬಂಗಾರಪ್ಪರವರೇ ರಾಜಕೀಯ ಗುರು ದೇವಸ್ಥಾನದ ಗಂಟೆಗಿಂತ ಶಾಲೆಯ ಗಂಟೆ ಬಹುಮುಖ್ಯ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ಶಿವಮೊಗ್ಗದಲ್ಲಿ ಪತ್ರಕರ್ತರೊಂದಿಗೆ ಸಚಿವ ಮಧು ಬಂಗಾರಪ್ಪ ಸಂವಾದ* *ಶಿವಮೊಗ್ಗ ಪ್ರೆಸ್ ಟ್ರಸ್ಟ್ ನಿಂದ ಪತ್ರಿಕಾ ಭವನದಲ್ಲಿ ಸಂವಾದ ಕಾರ್ಯಕ್ರಮ*

ನನಗೆ ಅಪ್ಪ ಬಂಗಾರಪ್ಪರವರೇ ರಾಜಕೀಯ ಗುರು

ದೇವಸ್ಥಾನದ ಗಂಟೆಗಿಂತ ಶಾಲೆಯ ಗಂಟೆ ಬಹುಮುಖ್ಯ

ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ

ಶಿವಮೊಗ್ಗದಲ್ಲಿ ಪತ್ರಕರ್ತರೊಂದಿಗೆ ಸಚಿವ ಮಧು ಬಂಗಾರಪ್ಪ ಸಂವಾದ*

*ಶಿವಮೊಗ್ಗ ಪ್ರೆಸ್ ಟ್ರಸ್ಟ್ ನಿಂದ ಪತ್ರಿಕಾ ಭವನದಲ್ಲಿ ಸಂವಾದ ಕಾರ್ಯಕ್ರಮ*

ನಾನು ಇಂದು ಒಂದು ಸ್ಥಾನದಲ್ಲಿ ಇರುವುದಕ್ಕೆ ಹಿರಿಯರ, ಪತ್ರಕರ್ತರ, ಕ್ಷೇತ್ರದ ಜನರ ಮಾರ್ಗದರ್ಶನ ಕಾರಣವಾಗಿದೆ

ರಾಜಕೀಯದಲ್ಲಿ ನನಗೆ ಬಂಗಾರಪ್ಪನರೇ ಗುರು

ನಾನು ಶಿಕ್ಷಣ ಸಚಿವನಾಗಿದ್ದಕ್ಕೆ ಸಮಾಧಾನವಿದೆ

ನನ್ನ ಕೆಲಸವನ್ನು ನಾನು ಸಮರ್ಥವಾಗಿ ನಿಭಾಯಿಸುತ್ತಿದ್ದೆನೆ

ನಾನು ರಾಜ್ಯದ ಸಚಿವನಾಗಿ ಕೂತಿರುವುದು ನನಗೆ ಹೆಮ್ಮೆ

ಹೈಕಮಾಂಡ್ ನಮಗೆ ಸಚಿವ ಸಂಪುಟದ ಬಗ್ಗೆ ಮಾತನಾಡಲು ಬ್ರೇಕ್ ಹಾಕಿದೆ

ಈ ಬಗ್ಗೆ ಪ್ರಶ್ನೆ ಯಾರೂ ಕೇಳಬೇಡಿ

ಚಾಲೆಂಜ್ ಆಗಿ ಸಚಿವ ಸ್ಥಾನ ತೆಗೆದುಕೊಂಡು ಸಮರ್ಥವಾಗಿ ನಿಭಾಯಿಸುತ್ತಿದ್ದೆನೆ

ಆರಂಭದಲ್ಲಿ ನನ್ನ ಹೇರ್ ಸ್ಟೈಲ್ ಬಗ್ಗೆ ನನ್ನ ಕನ್ನಡದ ಬಗ್ಗೆ ಮಾದ್ಯಮದಲ್ಲಿ ಊಹಾಪೋಹದ ಸುದ್ಧಿಗಳು ಆದವು

ಆದರೆ ಅದಕ್ಕೆ ನಾನು ತಲೆ ಕೆಡಿಸಿಕೊಂಡಿಲ್ಲ

ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಸಮಸ್ಯೆಗಳಿವೆ

ಈಗಾಗಲೇ ಶೇ. 80 – 90 ರಷ್ಟು ಸರಿಪಡಿಸುವ ಕೆಲಸ ಮಾಡಿದ್ದೆನೆ

ಈಗಾಗಲೇ ಮಕ್ಕಳಿಗೆ ಸಮಾನತೆಗೆ ಒತ್ತು ಕೊಟ್ಟು ಊಟ, ಶೂ, ಯೂನಿಫಾರಂ ಪುಸ್ತಕಗಳನ್ನು ನೀಡಲಾಗಿದೆ

ದೇವಸ್ಥಾನದ ಗಂಟೆಗಿಂತಲೂ, ಶಾಲೆಯ ಗಂಟೆ ಅತಿ ಮುಖ್ಯ ಎಂಬುದು ನಾವು ಅರಿತು ಕೆಲಸ ಮಾಡುತ್ತಿದ್ದೆವೆ

ಈ ಜವಬ್ದಾರಿ ಅರಿತು ಸಮಾನತೆಯಿಂದ ಶಾಲೆಯಲ್ಲಿ ಮಕ್ಕಳಿಗೆ ನೋಡಿಕೊಳ್ಳಲಾಗುತ್ತಿದೆ

ಎಲ್ಲಾ ತರಹದ ಮಕ್ಕಳಿಗೆ ವಿದ್ಯೆ ನೀಡಲು ಇಲಾಖೆಯಿಂದ ಕ್ರಮ ತೆಗೆದುಕೊಳ್ಳಲಾಗಿದೆ

ತೀರ್ಥಹಳ್ಳಿಯ ಸರ್ಕಾರಿ ವಿಶೇಷ ಚೇತನ ಶಾಲೆಯಲ್ಲಿ ಶಿಕ್ಷಕರು ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ

ನಿವೃತ್ತಿ ಅವಧಿ ಬಂದಿದ್ದರೂ ಕೂಡ ಆ ಮಕ್ಕಳಿಗೆ ಬಿಟ್ಟು ಹೋಗಲಾರದೆ, ನಿವೃತ್ತಿ ಅವಧಿ ಮುಂದೂಡಿ ಎಂದು ಮನವಿ ಮಾಡಿದ್ದಾರೆ

ಮುಂದಿನ ಕ್ಯಾಬಿನೆಟ್ ನಲ್ಲಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು

ಕ್ಯಾನ್ಸರ್ ಪೀಡಿತ ಮಕ್ಕಳಿಗೆ 1 ರಿಂದ 10 ನೇ ತರಗತಿಯವರೆಗೆ ಶಾಲೆ ಆರಂಭಿಸಲು ಕ್ರಮ ವಹಿಸಲಾಗಿದೆ

ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆ ಬಳಿಯೇ ಈ ಶಾಲೆ ಆರಂಭಿಸಲಾಗುತ್ತಿದೆ

ಮುಂದಿನ ಶೈಕ್ಷಣಿಕ ವರ್ಷದಿಂದ ಈ ಶಾಲೆ ಆರಂಭಿಸಲಾಗುತ್ತಿದೆ

ವಿಶೇಷಚೇತನ ಮಕ್ಕಳಿಗೆ ಹಾಗೂ ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಶಾಲೆ ಆರಂಭಿಸುವುದು ಸವಾಲಾಗಿ ಸ್ವೀಕರಿಸಿದ್ದೆನೆ

ಈಗಾಗಲೇ ಇಲಾಖೆಯಲ್ಲಿ ಶಿಕ್ಷಕರ ಕೊರತೆ ನೀಗಿಸಲು ಕ್ರಮ ವಹಿಸಲಾಗಿದೆ

ಮುಂದಿನ ವರ್ಷದಿಂದ ಪಠ್ಯಪುಸ್ತಕಗಳು ಸರಿಯಾದ ಸಮಯಕ್ಕೆ ಸಿಗಲು ವ್ಯವಸ್ಥೆ ಮಾಡಲಾಗಿದೆ

ಮಕ್ಕಳಲ್ಲಿನ ಕ್ವಾಲಿಟಿ ಹೊರಗೆ ಬರಲು ಪೂರಕ ಪರೀಕ್ಷೆಗಳು ಸಹಕಾರಿಯಾಗಿವೆ

ಎಸ್.ಎಸ್.ಎಲ್.ಸಿ. ಪರೀಕ್ಷೆಗಳು ಮಕ್ಕಳಿಗೆ ಸಹಕಾರಿಯಾಗಿದೆ

ಸದ್ಯದಲ್ಲೇ ಟಿಇಟಿ ಪರೀಕ್ಷೆಗೆ ನೋಟಿಫಿಕೇಷನ್ ಹೊರಡಿಸಲಾಗುತ್ತಿದೆ

ಇದರ ಬೆನ್ನಲ್ಲೇ ಸಿಇಟಿ ಪರೀಕ್ಷೆ ಸಹ ಬರಲಿದೆ

ಇದಕ್ಕೆ ಪೂರಕವಾಗಿ ನಾನು ಇಲಾಖೆಯಿಂದ ಮಕ್ಕಳಿಗೆ ಸಹಕಾರಿಯಾಗಿಸಲು ಕ್ರಮ ವಹಿಸಲಾಗಿದೆ

ನನ್ನ ಇಲಾಖೆಯಲ್ಲಿ ನನ್ನ ಸಾಧನೆ, ನನ್ನ ಕರ್ತವ್ಯಕ್ಕೆ ಸಿಎಂ ಸಿದ್ಧರಾಮಯ್ಯನರು ಕಾರಣರಾಗಿದ್ದಾರೆ

ಜಿಲ್ಲೆಯ ಜವಬ್ದಾರಿ ಸಹ ಸಮರ್ಥವಾಗಿ ನಿಬವಾಯಿಸುವ ಕೆಲಸ ಮಾಡಿದ್ದೆನೆ

ಮಳೆ ನಿಂತ ಬಳಿಕ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ದೊರೆತಿದೆ

ಆರ್ಥಕವಾಗಿ ನಮ್ಮ ಸರ್ಕಾರ ಸುಭದ್ರವಾಗಿದ್ದು, ಉತ್ತಮವಾಗಿ ಕೆಲಸ ನಡೆಯುತ್ತಿದೆ

ಜಿಲ್ಲೆಯಲ್ಲಿ ರಸ್ತೆಗಳ ಗುಂಡಿ ಮುಚ್ಚುವ ಕೆಲಸ ನಡೆಯಲಿದೆ

ರಾಜ್ಯದಲ್ಲಿ 800 ಕೆಪಿಎಸ್ ಶಾಲೆಗಳು ಆರಂಭಸಲಾಗುತ್ತಿದೆ

ಆರ್.ಟಿ.ಇ., ಫುಡ್ ಆ್ಯಕ್ಟ್ ಜಾರಿಗೆ ತಂದಿದ್ದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು

ಆಗ ಇದನ್ನೆಲ್ಲಾ ವಿರೋಧಿಸಿದ್ದು ಬಿಜೆಪಿಯವರು

ಗ್ಯಾರಂಟಿ ಯೋಜನೆ ಸೇರಿದಂತೆ ಅನೇಕ ಯೋಜನೆಗಳನ್ನು ಬಿಜೆಪಿ ವಿರೋಧಿಸಿದೆ

ಸುಮಾರು 6 ಸಾವಿರ ಶಿಕ್ಷಕರಿಗೆ ಅನುದಾನಿತ ಶಾಲೆಗಳಿಗೆ ನೀಡುತ್ತಿದ್ದೆವೆ

16 ಸಾವಿರ ಶಿಕ್ಷಕರಲ್ಲಿ 6 ಸಾವಿರ ಶಿಕ್ಷಕರಿಗೆ ನೀಡಲು ಆಗದೇ ಇದ್ದಲ್ಲಿ ಅತಿಥಿ ಶಿಕ್ಷಕರಿಗೆ ತೆಗೆದುಕೊಳ್ಳಲು ಸೂಚಿಸಿದ್ದೆನೆ

ರಾಜ್ಯದಲ್ಲಿ ಯಾವ ಸರ್ಕಾರಿ ಶಾಲೆ ಮುಚ್ಚುವುದಿಲ್ಲ

ಆದರೆ ಶಾಲೆಗಳಿಗೆ ಮಕ್ಕಳೇ ಬಾರದೇ ಹೋದರೆ ಸಮೀಪದ ಶಾಲೆಗೆ ಮರ್ಜ್ ಮಾಡಲಾಗುತ್ತಿದೆ

ಶಾಲೆಗಳಿಗೆ ಮಕ್ಕಳೇ ಬಾರದೇ ಹೋದರೆ ಶಾಲೆ ಮುಚ್ಚುವುದೋ, ಬಿಡುವುದೋ !?

ಹೀಗಾಗಿ ಮಕ್ಕಳು ಶಾಲೆಗೆ ಬರಲು ಹಲವಾರು ನ್ಯೂನತೆ ಸರಿಪಡಿಸಲಾಗುತ್ತಿದೆ

ಆದರೂ ಮಕ್ಕಳು ಬಾರದೇ ಹೋದರೆ, ಶಾಲೆ ಮರ್ಜ್ ಅನಿವಾರ್ಯ

ಹೀಗಾಗಿ ಸರ್ಕಾರಿ ಶಾಲೆ ಮುಚ್ಚುವ ವಿಚಾರ ಪ್ರಶ್ನೆ ಮಾಡಬೇಡಿ

ರಾಜ್ಯದ 10 ಸಾವಿರ ಶಾಲೆಗಳಲ್ಲಿ ಎಲ್.ಕೆ.ಜಿ., ಯುಕೆಜಿ ಆರಂಭಕ್ಕೆ ಸಿಎಂ ಬಳಿ ಚರ್ಚಿಸಲಾಗಿದೆ

ಇದಕ್ಕಾಗಿ ಅನುದಾನ ತೆಗೆದಿರಿಸಲು ಮುಖ್ಯಮಂತ್ರಿಗಳು ಸೂಚನೆ ಸಹ ನೀಡಿದ್ದಾರೆ