*ಲೈಂಗಿಕ ಸಮಸ್ಯೆಗೆ ಪರಿಹಾರ;* *ಟೆಕ್ಕಿಗೆ ₹48 ಲಕ್ಷ ವಂಚಿಸಿದ್ದ ‘ಟೆಂಟ್ ಬಾಬಾ’ ಕೊನೆಗೂ ಅರೆಸ್ಟ್!*
*ಲೈಂಗಿಕ ಸಮಸ್ಯೆಗೆ ಪರಿಹಾರ;* *ಟೆಕ್ಕಿಗೆ ₹48 ಲಕ್ಷ ವಂಚಿಸಿದ್ದ ‘ಟೆಂಟ್ ಬಾಬಾ’ ಕೊನೆಗೂ ಅರೆಸ್ಟ್!* ಲೈಂಗಿಕ ಸಮಸ್ಯೆಗಳು ಸೇರಿದಂತೆ ವಿವಿಧ ಕಾಯಿಲೆಗಳಿಗೆ ಆಯುರ್ವೇದ ಔಷಧಿ ನೀಡುವುದಾಗಿ ನಂಬಿಸಿ ಸಾರ್ವಜನಿಕರಿಗೆ ವಂಚಿಸುತ್ತಿದ್ದ ನಕಲಿ ‘ಗುರೂಜಿ’ಯೊಬ್ಬನನ್ನು ಜ್ಞಾನ ಭಾರತಿ ಪೊಲೀಸರು ಬಂಧಿಸಿದ್ದಾರೆ. ಇತ್ತೀಚೆಗೆ ಟೆಕ್ಕಿಯೊಬ್ಬರಿಗೆ ಲೈಂಗಿಕ ಸಮಸ್ಯೆ ಬಗೆಹರಿಸ್ತೀನಿ ಅಂತಾ ಬರೋಬ್ಬರಿ ₹48 ಲಕ್ಷ ವಂಚಿಸಿರುವುದು ತನಿಖೆ ವೇಳೆ ಟೆಂಟ್ ಬಾಬನ ಕಥೆಗಳು ಬಯಲಾಗಿವೆ. ಬಂಧಿತ ಆರೋಪಿಯನ್ನು ವಿಜಯ್ ಗುರೂಜಿ ಎಂದು ಗುರುತಿಸಲಾಗಿದೆ. ಈತನಿಗೆ ಸಹಕರಿಸುತ್ತಿದ್ದ ಮತ್ತೊಬ್ಬ ಸಹಚರನನ್ನು ಪೊಲೀಸರು…


