*ರಸ್ತೆ ಅಪಘಾತದಲ್ಲಿ ಸಾವುಕಂಡಿದ್ದ ಮೂವರು ಆರ್ ಎಸ್ ಐ ಗಳಲ್ಲಿ ಸಚಿನ್ ಶಿವಮೊಗ್ಗ ಜಿಲ್ಲೆಯವರು…* *ಅವರ ಕುಡುವಳ್ಳಿ ಗ್ರಾಮಕ್ಕೆ ತೆರಳಿ ಶ್ರದ್ಧಾಂಜಲಿ- ಗೌರವ ವಂದನೆ ಸಲ್ಲಿಸಿದ ಎಸ್ ಪಿ ನಿಖಿಲ್*
*ರಸ್ತೆ ಅಪಘಾತದಲ್ಲಿ ಸಾವುಕಂಡಿದ್ದ ಮೂವರು ಆರ್ ಎಸ್ ಐ ಗಳಲ್ಲಿ ಸಚಿನ್ ಶಿವಮೊಗ್ಗ ಜಿಲ್ಲೆಯವರು…*
*ಅವರ ಕುಡುವಳ್ಳಿ ಗ್ರಾಮಕ್ಕೆ ತೆರಳಿ ಶ್ರದ್ಧಾಂಜಲಿ- ಗೌರವ ವಂದನೆ ಸಲ್ಲಿಸಿದ ಎಸ್ ಪಿ ನಿಖಿಲ್*

ರಸ್ತೆ ಅಪಘಾತದಲ್ಲಿ ಭಾನುವಾರದಂದು ಸಾವು ಕಂಡ ಮೂವರು ಆರ್ ಎಸ್ ಐ ಗಳಲ್ಲಿ ಓರ್ವರಾದ ಸಚಿನ್.ವಿ.ರವರ ಸ್ವಗ್ರಾಮ ಕುಡುವಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಎಸ್ ಪಿ ನಿಖಿಲ್ ಗೌರವ ವಂದನೆ ಸಲ್ಲಿಸಿ, ಮೃತರ ಕುಟುಂಬಕ್ಕೆ ಇಂದು ಸಾಂತ್ವಾನ ಸಲ್ಲಿಸಿದರು.
ಆರ್ ಎಸ್ ಐ ಗಳಾದ ಬಿ.ಅಮರೇಶ್, ಮಂಜುನಾಥ್ ದಾರಿಮನಿ ಮತ್ತು ಸಚಿನ್ ನಿನ್ನೆ ನಡೆದ ಅಪಘಾತದಲ್ಲಿ ಸಾವು ಕಂಡಿದ್ದರು.
ಇಂದು ಬೆಳಿಗ್ಗೆ ಶಿವಮೊಗ್ಗ ಜಿಲ್ಲೆಯವರೇ ಆದ ಸಚಿನ್ ಸ್ವಗ್ರಾಮ ಕುಡುವಳ್ಳಿಗೆ ಭೇಟಿ ನೀಡಿದ ಎಸ್ ಪಿ ನಿಖಿಲ್ ಮೂವರು ಆರ್ ಎಸ್ ಐ ಗಳಿಗೂ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.


