ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ
ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್ಲೈಟ್ ಸೆಂಟರ್ನವರು ವಿವಿಧ ಹುದ್ದೆಗಳಿಗಾಗಿ ಆನ್ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
*ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹಮದ್ ಪತ್ರಿಕಾಗೋಷ್ಠಿ* *ಏಪ್ರಿಲ್/ ಮೇ ತಿಂಗಳಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ* *ಪಂಚ ಗ್ಯಾರಂಟಿಗಳಿಂದ ಗೆಲುವು ಗ್ಯಾರಂಟಿ* *ಸುಳ್ಳು ಹೇಳುತ್ತಾ ಬಂದ ಮೋದಿ ಸರ್ಕಾರ ಈಗ ಗಾಂಧಿ ಹೆಸರು ಅಳಿಸುವ ಪ್ರಯತ್ನದಲ್ಲಿ* *ರಾಜ್ಯ ಸರ್ಕಾರಕ್ಕೆ ಸಾವಿರ ದಿನಗಳು- ಹಿನ್ನೆಲೆಯಲ್ಲಿ ಫೆ.12 ರಂದು ಹಾವೇರಿಯಲ್ಲಿ ಬೃಹತ್ ಸಮಾವೇಶ*
*ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹಮದ್ ಪತ್ರಿಕಾಗೋಷ್ಠಿ* *ಏಪ್ರಿಲ್/ ಮೇ ತಿಂಗಳಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ* *ಪಂಚ ಗ್ಯಾರಂಟಿಗಳಿಂದ ಗೆಲುವು ಗ್ಯಾರಂಟಿ* *ಸುಳ್ಳು ಹೇಳುತ್ತಾ ಬಂದ ಮೋದಿ ಸರ್ಕಾರ ಈಗ ಗಾಂಧಿ ಹೆಸರು ಅಳಿಸುವ ಪ್ರಯತ್ನದಲ್ಲಿ* *ರಾಜ್ಯ ಸರ್ಕಾರಕ್ಕೆ ಸಾವಿರ ದಿನಗಳು- ಹಿನ್ನೆಲೆಯಲ್ಲಿ ಫೆ.12 ರಂದು ಹಾವೇರಿಯಲ್ಲಿ ಬೃಹತ್ ಸಮಾವೇಶ* ಶಿವಮೊಗ್ಗ : ಬರುವ ಏಪ್ರಿಲ್ ಅಥವಾ ಮೇನಲ್ಲಿ ಜಿಪಂ, ತಾಪಂ ಹಾಗೂ ಗ್ರಾಪಂ ಚುನಾವಣೆಗಳು ನಡೆಯಲಿದ್ದು, ಎಲ್ಲಾ ಚುನಾವಣೆಗಳನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿದೆ ಎಂದು…
ಶ್ರೀಮತಿ ಶಕುಂತಲಾರಿಗೆ ರಾಷ್ಟ್ರಪತಿ ಪದಕ
ಶ್ರೀಮತಿ ಶಕುಂತಲಾರಿಗೆ ರಾಷ್ಟ್ರಪತಿ ಪದಕ ಪೊಲೀಸ್ ಅಧಿಕಾರಿಗಳು ತಮ್ಮ ಸೇವಾ ಅವಧಿಯಲ್ಲಿ ಸಲ್ಲಿಸಿದ ಅತ್ಯುತ್ತಮ ಶ್ಲಾಘನೀಯ ಸೇವೆಗಾಗಿ,* 2026ನೇ ಸಾಲಿನ *ಗಣರಾಜ್ಯೋತ್ಸವದ ಅಂಗವಾಗಿ ನೀಡಲಾಗುವ ರಾಷ್ಟ್ರಪತಿಗಳ ಪದಕಕ್ಕೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಕಛೇರಿಯ ಟ್ರಯಲ್ ಮಾನಿಟರಿಂಗ್ ಸೆಲ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಉಪ ನಿರೀಕ್ಷಕರಾದ ಶ್ರೀಮತಿ ಶಕುಂತಲಾ ಭಾಜನರಾಗಿದ್ದಾರೆ. ಇವರಿಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಪ್ರಶಂಸಿಸಿ ಅಭಿನಂದಿಸಲಾಗಿದೆ.
*400 ಕೋಟಿ ರೂ.,ಗಳ ಮಹಾ ರಾಬರಿ!* *ಅಕ್ಟೋಬರ್ ನಲ್ಲಿ ನಡೆದ ಮಹಾ ದರೋಡೆ ಈಗ ಬೆಳಕಿಗೆ* *ರಿಯಲ್ ಎಸ್ಟೇಟ್ ಮಹಾ ರಾಬರಿಯ ಎದೆ ಝಲ್ ಎನಿಸುವ ಸ್ಟೋರಿ*
*400 ಕೋಟಿ ರೂ.,ಗಳ ಮಹಾ ರಾಬರಿ!* *ಅಕ್ಟೋಬರ್ ನಲ್ಲಿ ನಡೆದ ಮಹಾ ದರೋಡೆ ಈಗ ಬೆಳಕಿಗೆ* *ರಿಯಲ್ ಎಸ್ಟೇಟ್ ಮಹಾ ರಾಬರಿಯ ಎದೆ ಝಲ್ ಎನಿಸುವ ಸ್ಟೋರಿ* ಬೆಳಗಾವಿಯ ಗಡಿ ಭಾಗದ ಮೂಲಕ ಗೋವಾದಿಂದ ಮಹಾರಾಷ್ಟ್ರಕ್ಕೆ 400 ಕೋಟಿ ರೂ ಹಣ ಸಾಗಿಸುತ್ತಿದ್ದ 2 ಕಂಟೇನರ್ಗಳನ್ನು ಹೈಜಾಕ್ ಮಾಡಲಾಗಿದೆ ಎನ್ನಲಾಗುತ್ತಿದೆ. 2025 ಅಕ್ಟೋಬರ್ 16ರಂದು ನಡೆದಿರುವ ದೇಶದ ಅತಿ ದೊಡ್ಡ ರಾಬರಿ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ಮೂರು ರಾಜ್ಯಗಳ ಪೊಲೀಸ್ಗೆ…
ಎಂ. ಶ್ರೀಕಾಂತ್ ರಿಂದ ರಾಷ್ಟ್ರಮಟ್ಟದ ಟಗರು ಕಾಳಗದ ಪೋಸ್ಟರ್ ಬಿಡುಗಡೆ- ಶುಭ ಹಾರೈಕೆ
ಎಂ. ಶ್ರೀಕಾಂತ್ ರಿಂದ ರಾಷ್ಟ್ರಮಟ್ಟದ ಟಗರು ಕಾಳಗದ ಪೋಸ್ಟರ್ ಬಿಡುಗಡೆ- ಶುಭ ಹಾರೈಕೆ ನಮ್ಮೂರ ಬಳಗ ಶಿವಮೊಗ್ಗದ ವತಿಯಿಂದ ಕೋಟೆ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಫೆಬ್ರವರಿ 15ರಂದು ಫ್ರೀಡಂ ಪಾರ್ಕ್ ನಲ್ಲಿ ಹಮ್ಮಿಕೊಂಡಿರುವ ರಾಷ್ಟ್ರಮಟ್ಟದ ಭಾರಿ ಟಗರು ಕಾಳಗದ ಪೋಸ್ಟರನ್ನು ಡಿಸಿಸಿ ಬ್ಯಾಂಕಿನ ನಿರ್ದೇಶಕರು, ರಾಜ್ಯ ಕಾಂಗ್ರೆಸ್ ಮುಖಂಡರಾದ ಎಂ ಶ್ರೀಕಾಂತ್ ಇಂದು ಬಿಡುಗಡೆಗೊಳಿಸಿ ಶುಭ ಕೋರಿದರು. ಈ ಸಂದರ್ಭದಲ್ಲಿ ನಮ್ಮೂರ ಬಳಗದ ಸಂಚಾಲಕರಾದ ಕೆ. ರಂಗನಾಥ್,ನಾಗರಾಜ್ ಕಂಕಾರಿ,ಎಚ್ ಪಾಲಾಕ್ಷಿ, ಐಡಿಯಲ್ ಗೋಪಿ ,…
*ಸರ್ಕಾರಿ ಆದೇಶ ಜಾರಿ;* *ಸರ್ಕಾರಿ ಅಧಿಕಾರಿಗಳು ಜನಪ್ರತಿನಿಧಿಗಳ ಕಾಲ್ ರಿಸೀವ್ ಮಾಡಲೇಬೇಕು*
*ಸರ್ಕಾರಿ ಆದೇಶ ಜಾರಿ;* *ಸರ್ಕಾರಿ ಅಧಿಕಾರಿಗಳು ಜನಪ್ರತಿನಿಧಿಗಳ ಕಾಲ್ ರಿಸೀವ್ ಮಾಡಲೇಬೇಕು* ಸರ್ಕಾರಿ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಶಾಕ್ ನೀಡಿದ್ದು ಅಧಿಕಾರಿಗಳು ಜನಪ್ರತಿನಿಧಿಗಳ ದೂರವಾಣಿ ಕರೆ ರಿಸೀವ್ ಮಾಡಲೇಬೇಕು ಎಂದು ಸುತ್ತೋಲೆ ಹೊರಡಿಸಲಾಗಿದೆ. ಸರ್ಕಾರಿ ಅಧಿಕಾರಿಗಳು ಜನಪ್ರತಿನಿಧಿಗಳ ದೂರವಾಣಿ ಕರೆಗಳನ್ನು ಸ್ವೀಕರಿಸದೆ ಇರುವ ಬಗ್ಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುತ್ತೋಲೆಯೊಂದನ್ನು ಹೊರಡಿಸಿದ್ದಾರೆ. ಶಾಸಕರು, ಪರಿಷತ್ ಸದಸ್ಯರ, ಸಂಸದರ ಫೋನ್ ಕರೆ ಸ್ವೀಕರಿಸುವ ಸಂಬಂಧ ಸರ್ಕಾರಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಸರ್ಕಾರಿ ಅಧಿಕಾರಿಗಳು ಶಾಸಕರು…
*ವೀಡಿಯೋ ವೈರಲ್; ಮನನೊಂದು ವೈದ್ಯ ಆತ್ಮಹತ್ಯೆ!*
*ವೀಡಿಯೋ ವೈರಲ್; ಮನನೊಂದು ವೈದ್ಯ ಆತ್ಮಹತ್ಯೆ!* ಕೇರಳದಲ್ಲಿ ಒಂದು ವೈರಲ್ ವಿಡಿಯೋದಿಂದ ಮನನೊಂದು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿತ್ತು. ಇದೀಗ ಆ ದುರಂತದ ಬೆನ್ನಲ್ಲೇ ಕರ್ನಾಟಕದಲ್ಲೂ ಅಂಥಹದ್ದೇ ಘಟನೆ ನಡೆದಿದೆ. ವೈರಲ್ ಆದ ಆ ಒಂದು ವಿಡಿಯೋದಿಂದ ಮನನೊಂದು ವೈದ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂಕೋಲಾ ತಾಲೂಕಿನ ಅವರ್ಸಾ ಗ್ರಾಮದ ಮನೆಯಲ್ಲೇ ಈ ದುರ್ಘಟನೆ ನಡೆದಿದ್ದು, ವೈದ್ಯ ರಾಜು ಪಿಕ್ಳೆ ಡಬಲ್ ಬ್ಯಾರಲ್ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಿಂದ ವೈದ್ಯ ಸಮುದಾಯ ಮತ್ತು…
ಶಿವಮೊಗ್ಗವೂ ಸೇರಿದಂತೆ ಕರ್ನಾಟಕದ ಮಹಾನಗರ ಪಾಲಿಕೆಗಳಲ್ಲಿ ವೈದ್ಯಕೀಯ ಆರೋಗ್ಯಾಧಿಕಾರಿ ಹುದ್ದೆ ರದ್ದು
*ಶಿವಮೊಗ್ಗವೂ ಸೇರಿದಂತೆ ಕರ್ನಾಟಕದ ಮಹಾನಗರ ಪಾಲಿಕೆಗಳಲ್ಲಿ ವೈದ್ಯಕೀಯ ಆರೋಗ್ಯಾಧಿಕಾರಿ ಹುದ್ದೆ ರದ್ದು* ಕರ್ನಾಟಕ ನಗರಾಭಿವೃದ್ಧಿ ಇಲಾಖೆಯು ಗ್ರೇಟರ್ ಬೆಂಗಳೂರು ಹೊರತುಪಡಿಸಿ, ಎಲ್ಲಾ ಮಹಾನಗರ ಪಾಲಿಕೆಗಳಲ್ಲಿ ವೈದ್ಯಕೀಯ ಆರೋಗ್ಯಾಧಿಕಾರಿ ಹುದ್ದೆ ರದ್ದುಪಡಿಸಿ, ಎಂಜಿನಿಯರ್ಗಳಿಗೆ ಜವಾಬ್ದಾರಿ ವಹಿಸಲು ನಿರ್ಧರಿಸಿದೆ. ಆರೋಗ್ಯಾಧಿಕಾರಿಗಳ ಜವಾಬ್ದಾರಿಗಳನ್ನು ವೈದ್ಯರ ಬದಲು ಅಧೀಕ್ಷಕ ಎಂಜಿನಿಯರ್ ಅಥವಾ ಕಾರ್ಯನಿರ್ವಾಹಕ ಎಂಜಿನಿಯರ್ಗಳಿಗೆ ವರ್ಗಾಯಿಸುವ ಯೋಜನೆ ರೂಪಿಸಲಾಗಿದೆ. ಈ ಸಂಬಂಧದ ಸರ್ಕಾರದ ಆದೇಶವನ್ನು ಪಾಲಿಕೆ ಆಯುಕ್ತರಿಗೆ ಈಗಾಗಲೇ ತಿಳಿಸಲಾಗಿದ್ದು, ಶೀಘ್ರದಲ್ಲೇ ಅಧಿಕೃತ ಆದೇಶ ಹೊರಡಿಸುವ ನಿರೀಕ್ಷೆಯಿದೆ. ಸಾಮಾನ್ಯವಾಗಿ ವೈದ್ಯಕೀಯ ಆರೋಗ್ಯಾಧಿಕಾರಿಗಳು ಹೋಟೆಲ್,…
ಕವಿಸಾಲು
Gm ಶುಭೋದಯ💐💐 *ಕವಿಸಾಲು* 1. ಯಾರಿಗೇನು ಹೋಲಿಸಿದರೂ ನೀನೇ ಸರ್ವಶ್ರೇಷ್ಠ! 2. ಏನಿದೆಯೋ ಪ್ರೀತಿಯಲ್ಲಿ… ಅಪರಿಚಿತರೂ ಬದುಕಿನ ಭಾಗವಾಗಿಬಿಡುವರು! 3. ಹೇಗೆ ಕಳೆಯುತ್ತೇನೆಂದು ಕೇಳಬೇಡ ದಿನವನ್ನು… ಒಮ್ಮೆ ಮಾತಾಡುವ ಆಸೆಯಿಂದ, ಇನ್ನೊಮ್ಮೆ ನೋಡುವ ಆಸೆಯಿಂದ! 4. ನಾನು ನಿನ್ನನ್ನು ಕ್ಷಮಿಸುವೆ ನೀನು ನನ್ನನ್ನು ಕ್ಷಮಿಸು ಯುದ್ಧವಾದರೆ ಕೇಳು; ಎಲ್ಲೆಡೆ ಪ್ರೇಮವು… – *ಶಿ.ಜು.ಪಾಶ* 8050112067 (24/1/2026)
ಮಂಜಮ್ಮ ನಿಧನಕ್ಕೆ ಸಚಿವ ಮಧು ಬಂಗಾರಪ್ಪ ಸಂತಾಪ
ಕಾಗೋಡು ಚಳವಳಿಯ ರೂವಾರಿ ಹಾಗೂ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಗಣಪತಿಯಪ್ಪ ಅವರ ಧರ್ಮ ಪತ್ನಿ ಶ್ರೀಮತಿ ಮಂಜಮ್ಮ ಅವರ ನಿಧನಕ್ಕೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧುಬಂಗಾರಪ್ಪ ಅವರು ತೀವ್ರ ಸಂತಾಪ ಸಲ್ಲಿಸಿದ್ದಾರೆ. ಈ ಸಂಬಂಧ ಶೋಕ ಸಂದೇಶ ಕಳಿಸಿರುವ ಅವರು, ಐತಿಹಾಸಿಕ ಕಾಗೋಡು ಚಳವಳಿಯ ರೂವಾರಿ ಗಣಪತಿಯಪ್ಪ ಅವರ ಹೋರಾಟದ ಹಿಂದಿನ ಶಕ್ತಿಯಾಗಿದ್ದ ಮಂಜಮ್ಮ ನಿಧನ ನೋವು ತಂದಿದೆ. ಅವರ ಅಗಲಿಕೆಯಿಂದ ಸಮಾಜದ ಒಬ್ಬ ಧೀರ ಮಹಿಳೆಯನ್ನು ಕಳೆದುಕೊಂಡಂತಾಗಿದೆ. ಮಂಜಮ್ಮ ಅವರ ಆತ್ಮಕ್ಕೆ…
*ಪುರದಾಳು ಗ್ರಾಮದಲ್ಲಿ ಮತ್ತೆ ಕಾಡಾನೆಗಳ ಹಾವಳಿ*
*ಪುರದಾಳು ಗ್ರಾಮದಲ್ಲಿ ಮತ್ತೆ ಕಾಡಾನೆಗಳ ಹಾವಳಿ* ಮತ್ತೆ ಕಾಡಾನೆಗಳು ಪುರದಾಳಿನಲ್ಲಿ ಕಾಣಿಸಿಕೊಂಡು ದಾಂಧಲೆ ಎಬ್ಬಿಸಿದ ಘಟನೆ ಗುರುವಾರದಂದು ರಾತ್ರಿ ನಡೆದಿದೆ. ನಿನ್ನೆ ರಾತ್ರಿ ಪುರದಾಳು ಗ್ರಾಮದ ವಸಂತ್ ಕುಮಾರ್,ಅನಂತಪ್ಪ, ವೀರಪ್ಪ ಮತ್ತು ಚಂದ್ರಮ್ಮ ರವರ ಅಡಿಕೆ ತೋಟಕ್ಕೆ ನುಗ್ಗಿದ ಕಾಡಾನೆಗಳು, ಸುಮಾರು 35ಕ್ಕೂ ಹೆಚ್ಚು ಅಡಿಕೆ ಮರಗಳನ್ನು ಹಾಗೂ ಬಾಳೆ ತೋಟವನ್ನು ನಾಶಪಡಿಸಿವೆ. ಪದೇ ಪದೇ ಆನೆ ದಾಳಿ ನಡೆಯುತ್ತಿದ್ದು, ರೈತರ ಬೆಳೆ ಕೈ ತಪ್ಪುತ್ತಿದ್ದರೂ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದ ಅರಣ್ಯ ಇಲಾಖೆಯ ವಿರುದ್ಧ…


