ಶಾಸಕ ಚೆನ್ನಿಯವರಿಂದ ಗೋಶಾಲೆಗಳ ಅಭಿವೃದ್ಧಿಗೆ ಗುದ್ದಲಿ ಪೂಜೆ;**ಶಾಸಕರ ಕಣ್ತೆರೆಸಿದ ಕಾಂಗ್ರೆಸ್ ಮುಖಂಡ ಹೆಚ್.ಸಿ.ಯೋಗೇಶ್*
*ಶಾಸಕ ಚೆನ್ನಿಯವರಿಂದ ಗೋಶಾಲೆಗಳ ಅಭಿವೃದ್ಧಿಗೆ ಗುದ್ದಲಿ ಪೂಜೆ;*
*ಶಾಸಕರ ಕಣ್ತೆರೆಸಿದ ಕಾಂಗ್ರೆಸ್ ಮುಖಂಡ ಹೆಚ್.ಸಿ.ಯೋಗೇಶ್*

ಶಿವಮೊಗ್ಗ ಶಾಸಕರಾದ ಎಸ್.ಎನ್.ಚನ್ನಬಸಪ್ಪ ಇಂದು ಶಿವಮೊಗ್ಗ ನಗರ ವಿಧಾನಸಭಾ ವ್ಯಾಪ್ತಿಯ ವಿವಿಧ ಕಡೆ ಗೋಶಾಲೆಗಳಲ್ಲಿ ವಿವಿಧ ಕಾಮಗಾರಿಗಳ ಗುದ್ದಲಿ ಪೂಜೆ ಮಾಡಿರುವುದಕ್ಕೆ ಕಾಂಗ್ರೆಸ್ 2023ರ ವಿಧಾನಸಭಾ ಅಭ್ಯರ್ಥಿ, ಮಾಜಿ ಕಾರ್ಪೊರೇಟರ್ ಹೆಚ್.ಸಿ.ಯೋಗೇಶ್ ಹೇಳಿಕೆ ನೀಡಿದ್ದು, ತಾವು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಕ್ಕೆ ಶಾಸಕರು ಎಚ್ಚೆತ್ತು ಈ ಕೆಲಸಗಳಿಗೆ ಕೈ ಹಾಕಿದ್ದಾರೆಂದು ತಿಳಿಸಿದ್ದಾರೆ.
ಶಾಸಕರು ಕೊನೆಗೂ ಕಣ್ತೆರೆದು ಗುದ್ದಲಿಪೂಜೆಗೆ ಮುಂದಾಗಿದ್ದು ಒಳ್ಳೆ ವಿಚಾರ. ಈ ಹಿಂದೆ ಕಾಂಗ್ರೆಸ್ ಶಾಸಕರಾಗಿದ್ದ ಹೆಚ್.ಎಂ.ಚಂದ್ರಶೇಖರಪ್ಪ ಗೋಶಾಲೆಗಳಿಗೆ ಜಾಗ ನೀಡಿದ್ದು, ಗೋಶಾಲೆಗಳ ಅಭಿವೃದ್ಧಿಗೆ ಸಿದ್ದರಾಮಯ್ಯರವರು ಹಣ ನೀಡಿದ್ದನ್ನು ಶಾಸಕ ಚೆನ್ನಿಯವರು ಇಂಥ ಸಂದರ್ಭಗಳಲ್ಲಿ ನೆನಪು ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದ್ದಾರೆ.
ಶಿವಮೊಗ್ಗದ ಅರವಿಂದ ನಗರ, ಶಾಂತಿನಗರ, ಕಂಟ್ರಿಕ್ಲಬ್ ಬಳಿಯ ಗೋಶಾಲೆಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಿದ್ದರೂ ಆ ಅಭಿವೃದ್ಧಿ ಕೆಲಸಗಳಿಗೆ ಕೈ ಹಾಕದೇ ಸಿದ್ದರಾಮಯ್ಯರ ಸರ್ಕಾರದ ವಿರುದ್ಧ ಗಂಡಸ್ತನದ ಮಾತಾಡಿದ್ದು ಸರಿಯಲ್ಲ. ಅವರಿಗೆ ಕಾಳಜಿ ಇದ್ದಿದ್ದೇ ಆದರೆ, ತಮ್ಮ ವ್ಯಾಪ್ತಿಯ ಗೋಶಾಲೆಗಳ ಅಭಿವೃದ್ಧಿ ಬಗ್ಗೆ ತಲೆ ಕೆಡಿಸಿಕೊಳ್ಳಲಿ ಎಂದು ಹೆಚ್.ಸಿ.ಯೋಗೇಶ್ ಶಾಸಕ ಚೆನ್ನಿಯವರಿಗೆ ತಾಕೀತು ಮಾಡಿ ಈ ಹಿಂದೆ ಪತ್ರಿಕಾಗೋಷ್ಠಿ ಮಾಡಿದ್ದರು.
ಈಗಲಾದರೂ ಶಾಸಕರಾದ ಚೆನ್ನಿ ಸುಖಾಸುಮ್ಮನೆ ಆವೇಶದಲ್ಲಿ ರಾಜ್ಯ ಸರ್ಕಾರವನ್ನು ಟೀಕಿಸುವ ಬದಲು ಸರ್ಕಾರದ ಅನುದಾನಗಳ ಸದ್ಬಳಕೆ ಮಾಡಿಕೊಂಡು ಅಭಿವೃದ್ಧಿ ಕೆಲಸ ಮಾಡಲಿ ಎಂದು ಅವರು ಹೇಳಿದ್ದಾರೆ.
*ಶಾಸಕ ಚೆನ್ನಿಯವರ ಇವತ್ತಿನ ಕೆಲಸವೇನು?*
ಇಂದು ಬೆಳಿಗ್ಗೆ ಶಿವಮೊಗ್ಗ ನಗರ ಶಾಸಕರಾದ ಎಸ್ ಎನ್ ಚನ್ನಬಸಪ್ಪ ಅವರು ಶಿವಮೊಗ್ಗ ನಗರ ವಿಧಾನಸಭಾ ವ್ಯಾಪ್ತಿಯ ಅರವಿಂದ ನಗರ, ಶಾಂತಿನಗರ ಹಾಗೂ ಕಂಟ್ರಿ ಕ್ಲಬ್ ಬಳಿ ಇರುವ ಗೋಶಾಲೆಯಲ್ಲಿ ವಿವಿಧ ಕಾಮಗಾರಿಗಳ ಗುದ್ದಲಿ ಪೂಜೆಯನ್ನು ನೆರವೇರಿಸಿದರು.
ಗುದ್ದಲಿ ಪೂಜೆ ನೆರವೇರಿಸಿದ ಕಾಮಗಾರಿಗಳ ವಿವರಗಳು –
೧. ಶಿವಮೊಗ್ಗ ನಗರದ ಅರವಿಂದ್ ನಗರದಿಂದ ಪಿ ಎನ್ ಟಿ ಕಾಲೋನಿಗೆ ಸಂಪಕ೯ ರಸ್ತೆ ಅಭಿವೃದ್ಧಿ ಕಾಮಗಾರಿ.
೨. 35 ಲಕ್ಷ ರೂ ವೆಚ್ಚದಲ್ಲಿ ಶಿವಮೊಗ್ಗದ ಮಹಾವೀರ ಗೊಶಾಲೆಯಲ್ಲಿ ಶೌಚಾಲಯ, ಒಂದು ಕೊಳವೆ ಬಾವಿ ಮತ್ತು 500 ಮೀ. ರಸ್ತೆ ನಿರ್ಮಾಣ.
೩. 18 ಲಕ್ಷ ರೂ ವೆಚ್ಚದಲ್ಲಿ ಶಾಂತಿನಗರ ರಸ್ತೆ ಚರ್ಚ ಎದುರು ನೀರಿನ ಬ್ಯಾಂಕ್ ಹತ್ತಿರ 300 ಮೀಟರ್ ರಸ್ತೆ ನಿರ್ಮಾಣ.
೪. ಶಿವಮೊಗ್ಗ ನಗರದ ಸೂರ್ಯ ಲೇಔಟ್ ಮುಖ್ಯ ರಸ್ತೆಯಲ್ಲಿ ಬಾಕ್ಸ್ ಚರಂಡಿ ಕಾಮಗಾರಿ.