ಅಕ್ರಮ ಮೀಟರ್ ಬಡ್ಡಿ ಮಾಫಿಯಾ-2**ಹೊಸ ಮನೆ ಗೃಹ ಪ್ರವೇಶ ಮಾಡಿದ್ದ ಬಡ್ಡಿ ವ್ಯವಹಾರಿ ಕುಮಾರನ ಮನೆಯಲ್ಲಿ ಸಿಕ್ಕಿದ್ದೇನು?**ಪೊಲೀಸರೇ ಇವನ ವ್ಯವಹಾರ ನೋಡಿ ಹೌಹಾರಿದ್ದೇಕೆ?**ಯಾರು ಈ ದಾಮೋದರ @ ಕುಮಾರ ಮತ್ತು ಜನಾರ್ಧನ?*ತುಂಗಾನಗರ ಸಿಪಿಐ ಗುರುರಾಜ್ ತಂಡದ ದೊಡ್ಡ ದಾಳಿಯಿದು…**ಸಂಪೂರ್ಣ ವಿವರ ಇಲ್ಲಿದೆ…*
*ಅಕ್ರಮ ಮೀಟರ್ ಬಡ್ಡಿ ಮಾಫಿಯಾ-2*
*ಹೊಸ ಮನೆ ಗೃಹ ಪ್ರವೇಶ ಮಾಡಿದ್ದ ಬಡ್ಡಿ ವ್ಯವಹಾರಿ ಕುಮಾರನ ಮನೆಯಲ್ಲಿ ಸಿಕ್ಕಿದ್ದೇನು?*
*ಪೊಲೀಸರೇ ಇವನ ವ್ಯವಹಾರ ನೋಡಿ ಹೌಹಾರಿದ್ದೇಕೆ?*
*ಯಾರು ಈ ದಾಮೋದರ @ ಕುಮಾರ ಮತ್ತು ಜನಾರ್ಧನ?*
ತುಂಗಾನಗರ ಸಿಪಿಐ ಗುರುರಾಜ್ ತಂಡದ ದೊಡ್ಡ ದಾಳಿಯಿದು…*
*ಸಂಪೂರ್ಣ ವಿವರ ಇಲ್ಲಿದೆ…*

ಶಿವಮೊಗ್ಗದಲ್ಲಿ ಅಕ್ರಮ ಮೀಡರ್ ಬಡ್ಡಿ ಮಾಫಿಯಾದವರ ವಿರುದ್ಧ ಬೀಸಿದ ಬಲೆಗೆ ಮೊನ್ನೆ ದೊಡ್ಡ ಕುಳವೇ ಸಿಕ್ಕಿಬಿತ್ತು.ಆಗಷ್ಟೇ ಕೋಟಿ ದಾಟುವ ಬೆಲೆಯ ಮನೆ ಕಟ್ಟಿಸಿ ಗೃಹ ಪ್ರವೇಶ ಮಾಡಿದ್ದ ದಾಮೋದರ @ ಕುಮಾರನ ಬಳಿ ಇದ್ದ ನಗದು ಹಣ, ದಾಖಲೆಗಳನ್ನು ನೋಡಿ ಸ್ವತಃ ಪೊಲೀಸರೇ ದಂಗಾಗಿದ್ದರು!
ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಗೋಪಶೆಟ್ಟಿ ಕೊಪ್ಪ ಚಾಲುಕ್ಯ ನಗರದಲ್ಲಿನ ಇಬ್ಬರು ಅಕ್ರಮ ಮೀಟರ್ ಬಡ್ಡಿ ಮಾಫಿಯಾದವರ ಮೇಲೆ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಮಾರ್ಗದರ್ಶನದಲ್ಲಿ ತುಂಗಾನಗರ ಸಿಪಿಐ ಕೆ.ಟಿ.ಗುರುರಾಜ್ ನೇತೃತ್ವದ ತಂಡ ದಾಳಿ ಮಾಡಿತು.
ಈ ದಾಳಿ ದಾಮೋದರ @ ಕುಮಾರ ಮತ್ತು ಜನಾರ್ಧನ ಎಂಬುವವರ ಮನೆಯ ಮೇಲೆ ನಡೆದು ಬಂಧಿಸಲಾಗಿತ್ತು. ಇವರ ಬಳಿಯಿಂದ 39 ಲಕ್ಷ ರೂ.,ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಜೊತೆಗೆ, 29 ದ್ವಿಚಕ್ರ ವಾಹನ, ಎರಡು ಕಾರು, 24 ಮೊಬೈಲ್, ಒಂದು ಲ್ಯಾಪ್ ಟಾಪ್, 5 ಚೆಕ್ ಗಳು, ಎರಡು ಆರ್ ಸಿ ಬುಕ್ ಗಳನ್ನು ಅಮಾನತು ಪಡಿಸಿಕೊಳ್ಳಲಾಯಿತು.
ಸಿಪಿಐ ಕೆ.ಟಿ.ಗುರುರಾಜ್ ರವರ ಜೊತೆ, ಪಿಎಸ್ ಐ ಗಳಾದ ಶಿವಪ್ರಸಾದ್, ಮಂಜಮ್ಮ ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು.