*ಎಲೆಕ್ಟ್ರಿಕ್ ಬೈಕ್ ನೀಡುವುದಾಗಿ ಸಾವಿರಾರು ಗ್ರಾಹಕರಿಗೆ ವಂಚನೆ!* *35 ಕೋಟಿ ರೂಪಾಯಿ ವಂಚಿಸಿರುವ ಆರೋಪ* *ಏನಿದು ವಂಚನೆಯ ಸ್ಟೋರಿ?*

*ಎಲೆಕ್ಟ್ರಿಕ್ ಬೈಕ್ ನೀಡುವುದಾಗಿ ಸಾವಿರಾರು ಗ್ರಾಹಕರಿಗೆ ವಂಚನೆ!*

*35 ಕೋಟಿ ರೂಪಾಯಿ ವಂಚಿಸಿರುವ ಆರೋಪ*

*ಏನಿದು ವಂಚನೆಯ ಸ್ಟೋರಿ?*

ಕೇಂದ್ರ ಸರ್ಕಾರದ ಸಬ್ಸಿಡಿ ಹೆಸರಿನಲ್ಲಿ ಎಲೆಕ್ಟಿಕ್ ಬೈಕ್ ನೀಡುವುದಾಗಿ ನಂಬಿಸಿ, ‘ಆಪೈ ಇವಿ’ ಮತ್ತು ‘ಬಿಲ್ಕರ್ ಟೆಕ್ನೋಲಜಿ’ ಎಂಬ ಬೈಕ್ ಶೋರೂಂಗಳು ಸಾವಿರಾರು ಗ್ರಾಹಕರಿಗೆ ವಂಚಿಸಿವೆ. ಗ್ರಾಹಕರ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಸಾಲ ಪಡೆದು, ಸುಮಾರು 35 ಕೋಟಿ ರೂಪಾಯಿ ವಂಚಿಸಿರುವ ಆರೋಪ ಕೇಳಿಬಂದಿದೆ.

ಕೇಂದ್ರ ಸರ್ಕಾರದ ಸಬ್ಸಿಡಿಯಡಿ ಎಲೆಕ್ಟಿಕ್ ಬೈಕ್ ವಿತರಿಸುವ ಆಮಿಷವೊಡ್ಡಿ ಬೈಕ್ ಶೋರೂಮ್‌ನವರು ನೂರಾರು ಗ್ರಾಹಕರಿಗೆ ಕೋಟ್ಯಂತರ ರು. ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಈ ಸಂಬಂಧ ಪೀಣ್ಯ ಮತ್ತು ಬಾಗಲಗುಂಟೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿವೆ. ಆಪೈ ಇವಿ ಶೋ ರೂಮ್ ಮತ್ತು ಬಿಲ್ಕರ್ ಟೆಕ್ನೋಲಜಿ ಎಂಬ ಬೈಕ್ ಶೋ ರೂಮ್‌ನ ಮಾಲೀಕರಾದ ರಾಕೇಶ್, ಹನುಮಂತ ಬಿಲ್ಕರ್ ಸೇರಿ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ. ಇವರ ವಿರುದ್ಧ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಗಳು 35 ಕೋಟಿ ರು. ವಂಚಿಸಿರುವ ಗಂಭೀರ ಆರೋಪ ಕೇಳಿಬಂದಿದೆ. ‘