ಮೂರು ಜೀವ ಉಳಿಸಿದ ಆ ಖಾಕಿ ಹೀರೋಗಳು*

*ಮೂರು ಜೀವ ಉಳಿಸಿದ ಆ ಖಾಕಿ ಹೀರೋಗಳು*

ಜುಲೈ 22ರ ಸೋಮವಾರ ಮಧ್ಯಾಹ್ನ ಸಾಗರ ತಾಲ್ಲೂಕಿನ ಕುಗ್ವೆ ಗ್ರಾಮದ ಹೊಳೆಯ ಹತ್ತಿರ ಮಹಿಳೆಯೊಬ್ಬರು ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದಾರೆಂಬ ಮಾಹಿತಿ ಪೊಲೀಸ್ ಇಲಾಖೆಗೆ ಸಿಗುತ್ತೆ.

112-ERSS ಸಹಾಯವಾಣಿಗೆ ಸಾರ್ವಜನಿಕರಿಂದ ಕರೆ ಬಂದ ಮೇರೆಗೆ, ERSS ವಾಹನದ ಅಧಿಕಾರಿಗಳಾದ ಶಿವರುದ್ರಯ್ಯ ಎ ಆರ್, ಹೆಚ್.ಸಿ,* ಸಾಗರ ಪೇಟೆ, ಪೊಲೀಸ್ ಠಾಣೆ ಮತ್ತು ಚಾಲಕರಾದ ಶಿವಾನಂದ್, ಎಪಿಸಿ, ಡಿಎಆರ್ ಶಿವಮೊಗ್ಗ ರವರು ಕೂಡಲೇ ಕಾರ್ಯ ಪ್ರವೃತ್ತರಾಗಿ ಸ್ಥಳಕ್ಕೆ ಹೋಗಿ ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದವರನ್ನು ತಡೆದು ಮಹಿಳೆ ಹಾಗೂ 2 ಮಕ್ಕಳು ಸೇರಿದಂತೆ 3 ಜನರನ್ನು ರಕ್ಷಿಸಿ ಪೊಲೀಸ್ ಇಲಾಖೆಯ ಗೌರವಕ್ಕೆ ಗರಿ ಮೂಡಿಸಿದ್ದಾರೆ.

ERSS ವಾಹನದ ಅಧಿಕಾರಿಗಳ ಉತ್ತಮ ಕಾರ್ಯವನ್ನು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಜಿ. ಕೆ. ರವರು ಪ್ರಶಂಸಿಸಿ ಅಭಿನಂದಿಸಿದ್ದಾರೆ.