ಸರ್ವರ ಹಿತ ಕಾಯ್ದ ಬಜೆಟ್- ಎಂ.ಶ್ರೀಕಾಂತ್ *sustainable budget*- M.Srikanth

ಸರ್ವರ ಹಿತ ಕಾಯ್ದ ಬಜೆಟ್- ಎಂ.ಶ್ರೀಕಾಂತ್
*sustainable budget*- M.Srikanth

ಬಜೆಟ್ ನಲ್ಲಿ ಉತ್ತಮ ಶಿಕ್ಷಣ, ಉತ್ತಮ ಆರೋಗ್ಯಕ್ಕೆ ಒತ್ತು ಕೊಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರು,ದಲಿತರು, ಯುವಜನರು,ಕೈಗಾರಿಕೋದ್ಯಮಿ,ವ್ಯಾಪಾರ ಕ್ಷೇತ್ರದ ಹಿತ ಕಾಯುವಲ್ಲಿ ಬದ್ಧತೆ ತೋರಿದ್ದಾರೆ.

ರಾಜ್ಯದ ಆರ್ಥಿಕ ಸುಸ್ಥಿತಿಯ ಮಿತಿಯನ್ನು ಮೀರದೆ ಎಲ್ಲ ವರ್ಗಗಳ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಕೊಡುಗೆಗಳನ್ನು ಬಜೆಟ್ ನಲ್ಲಿ ನೀಡಿದ್ದಾರೆ. ಜಿಡಿಪಿ ಶೇ 8.1ರಷ್ಟು ನೈಜ ಬೆಳವಣಿಗೆ ಆಗಿದ್ದು, ಎಲ್ಲಾ ಕ್ಷೇತ್ರಗಳಲ್ಲೂ ಸಮತೋಲಿತ ಬೆಳವಣಿಗೆ ಇದಾಗಿದೆ. ಇಂತಹ ಆರ್ಥಿಕ ಕ್ರಮದಿಂದಾಗಿ
ಆ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು
ತಾವೊಬ್ಬ ಆರ್ಥಿಕ ನಿಪುಣ ಎಂಬುದನ್ನು ಸಾಬೀತು ಪಡಿಸಿದ್ದಾರೆ.

56.432 ಹುದ್ದೆಗಳ ಭರ್ತಿಗೆ ಬದ್ಧತೆ ತೋರುವ ಮೂಲಕ ಮುಖ್ಯಮಂತ್ರಿಗಳು ನಿರುದ್ಯೋಗ ಸಮಸ್ಯೆ ಪರಿಹಾರಕ್ಕೆ ಕ್ರಾಂತಿಕಾರಿ ಹೆಜ್ಜೆ ಇಟ್ಟಿದ್ದಾರೆ.

ಶಿಕ್ಷಣ ಕ್ಷೇತ್ರದಲ್ಲೂ ಗಮನೀಯ ಬದಲಾವಣೆಗಳನ್ನು ತರಲಾಗಿದ್ದು, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಉನ್ನತೀಕರಣ ಶೈಕ್ಷಣಿಕ ಪ್ರಗತಿಯ ಪರಿಣಾಮಕಾರಿ ಹೆಜ್ಜೆ ಎನ್ನಬಹುದು.

ಗ್ಯಾರಂಟಿ ಯೋಜನೆಗಳ ಮೂಲಕ ಜನರ ಬದುಕಿನಲ್ಲಿ ತೀವ್ರ ಆರ್ಥಿಕ ಪ್ರಗತಿಯನ್ನು ಸಾಧಿಸುವಲ್ಲಿ ಸಿದ್ಧರಾಮಯ್ಯ ಅವರ ನೇತೃತ್ವದ ಸರ್ಕಾರ ಸಫಲವಾಗಿದೆ.

ಸುಸ್ಥಿರ (sustainable budget)ಬಜೆಟ್ ನೀಡಿದ ಸನ್ಮಾನ್ಯ ಸಿದ್ದರಾಮಯ್ಯ ಅವರಿಗೆ ಅಭಿನಂದನೆಗಳು.

– ಎಂ.ಶ್ರೀಕಾಂತ್
ಕಾಂಗ್ರೆಸ್ ಮುಖಂಡರು
ನಿರ್ದೇಶಕರು. ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್