*ಫುಟ್ ಪಾತ್ ತೆರವು ಕಾರ್ಯಾಚರಣೆ…* *ಶಿವಮೊಗ್ಗ ಮಿಳಘಟ್ಟ ಖಾಸಗಿ ಬಸ್ ನಿಲ್ದಾಣದ ಹೂವಿನ ಅಂಗಡಿಗಳು ಶನಿವಾರ ಸ್ಥಳಾಂತರ* *ಹೂವಿನ ಅಂಗಡಿಗಳಿರೋ ಜಾಗದಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆ ಎಂದ ಟ್ರಾಫಿಕ್ ಇನ್ಸ್ ಪೆಕ್ಟರ್ ದೇವರಾಜ್*
*ಫುಟ್ ಪಾತ್ ತೆರವು ಕಾರ್ಯಾಚರಣೆ…*
*ಶಿವಮೊಗ್ಗ ಮಿಳಘಟ್ಟ ಖಾಸಗಿ ಬಸ್ ನಿಲ್ದಾಣದ ಹೂವಿನ ಅಂಗಡಿಗಳು ಶನಿವಾರ ಸ್ಥಳಾಂತರ*
*ಹೂವಿನ ಅಂಗಡಿಗಳಿರೋ ಜಾಗದಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆ ಎಂದ ಟ್ರಾಫಿಕ್ ಇನ್ಸ್ ಪೆಕ್ಟರ್ ದೇವರಾಜ್*

ಶಿವಮೊಗ್ಗದ ಮಿಳಘಟ್ಟ ಬಳಿಯಿರುವ ಖಾಸಗಿ ಬಸ್ ನಿಲ್ದಾಣ ಹೂವಿನ ಮಾರುಕಟ್ಟೆ ಬಳಿಯ ಫುಟ್ ಪಾತ್ ತೆರವು ಕಾರ್ಯಾಚರಣೆ ಇಂದು ಶಿವಮೊಗ್ಗ ಮಹಾನಗರ ಪಾಲಿಕೆ ಮತ್ತು ಶಿವಮೊಗ್ಗ ಟ್ರಾಫಿಕ್ ಪೊಲೀಸರ ನೇತೃತ್ವದಲ್ಲಿ ನಡೆಯಿತು.
ಮಿಳಘಟ್ಟ ರಸ್ತೆ ಈಗ ಸಂಪೂರ್ಣ ತೆರವುಗೊಂಡಿದ್ದು, ಇಲ್ಲಿರುವ ಹೂವಿನ ಅಂಗಡಿಗಳನ್ನೆಲ್ಲ ಎಸ್ ಎನ್ ಮಾರ್ಕೆಟ್ ಗೆ ಮುಂದಿನ ಶನಿವಾರ ಸ್ಥಳಾಂತರಗೊಳ್ಳಲಿವೆ ಎಂದು ಟ್ರಾಫಿಕ್ ಪೊಲೀಸ್ ಇನ್ಸ್ ಪೆಕ್ಟರ್ ದೇವರಾಜ್ ತಿಳಿಸಿದ್ದಾರೆ.
ಈಗ ಹೂವಿನ ಅಂಗಡಿಗಳಿರುವ ಜಾಗವನ್ನು ಮುಂದಿನ ಸೋಮವಾರದಿಂದ ಸಾರ್ವಜನಿಕ ದ್ವಿಚಕ್ರ ವಾಹನ ನಿಲ್ದಾಣವಾಗಿ ಪರಿವರ್ತಿಸಲಾಗುವುದು ಎಂದಿದ್ದಾರೆ.


