*ಎತ್ತಂಗಡಿ ಆಗಲಿದ್ದಾರೆ ಶಿವಮೊಗ್ಗ ತಹಶೀಲ್ದಾರ್ ವಿ.ಎಸ್.ರಾಜೀವ್* *ಚುನಾವಣಾ ಆಯೋಗದ ಅನುಮತಿಗೆ ಕಾಯುತ್ತಿದೆ ರಾಜ್ಯ ಸರ್ಕಾರ* *ಪ್ರಭಾವಿಗಳ ಪರ ಕೆಲಸ- ನೊಂದವರ ಪಾಲಿಗೆ ಕಣ್ಣೀರು ಕೊಡುವ ತಹಶೀಲ್ದಾರ್ ರಾಜೀವ್ ವರ್ಗಾವಣೆ ಬೇಗ ಆಗಲಿ…*
*ಎತ್ತಂಗಡಿ ಆಗಲಿದ್ದಾರೆ ಶಿವಮೊಗ್ಗ ತಹಶೀಲ್ದಾರ್ ವಿ.ಎಸ್.ರಾಜೀವ್*
*ಚುನಾವಣಾ ಆಯೋಗದ ಅನುಮತಿಗೆ ಕಾಯುತ್ತಿದೆ ರಾಜ್ಯ ಸರ್ಕಾರ*
*ಪ್ರಭಾವಿಗಳ ಪರ ಕೆಲಸ- ನೊಂದವರ ಪಾಲಿಗೆ ಕಣ್ಣೀರು ಕೊಡುವ ತಹಶೀಲ್ದಾರ್ ರಾಜೀವ್ ವರ್ಗಾವಣೆ ಬೇಗ ಆಗಲಿ…*

ಶಿವಮೊಗ್ಗ ತಾಲ್ಲೂಕು ತಹಶೀಲ್ದಾರ್ ವಿ.ಎಸ್.ರಾಜೀವ್ ವಿರುದ್ಧ ಸಾರ್ವಜನಿಕ ದೂರುಗಳು ಬಂದ ಹಿನ್ನೆಲೆಯಲ್ಲಿ ವರ್ಗಾವಣೆ ಮಾಡಲು ಕಂದಾಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳಿಗೆ ಅನುಮತಿ ಕೋರಿ ಪತ್ರ ಬರೆದಿದ್ದಾರೆ.
ಶಿವಮೊಗ್ಗ ತಾಲ್ಲೂಕು ತಹಶೀಲ್ದಾರ್ ವಿ.ಎಸ್.ರಾಜೀವ್ ಅಧಿಕಾರವಹಿಸಿಕೊಂಡಾಗಿನಿಂದ ಜನ ಸೇವೆಗಿಂತ ಹೆಚ್ಚಾಗಿ ಅವರನ್ನು ಗೋಳುಹೊಯ್ದುಕೊಳ್ಳುವುದರಲ್ಲೇ ಕಾಲತಳ್ಳಿದ್ದು ಸುಳ್ಳೇನಲ್ಲ. ಮಣ್ಣು, ಮರಳು ಮಾಫಿಯಾದ ಪ್ರಭಾವ ಕೂಡ ಇವರ ಮೇಲೆ ಇದೆಯೆಂಬ ಘನಗಂಭೀರ ಆರೋಪಗಳು ಕೂಡ ಸಾರ್ವಜನಿಕರಿಂದ ಬಂದಿರುವ ಹಿನ್ನೆಲೆಯಲ್ಲಿ ಸರ್ಕಾರ ವಿ.ಎಸ್.ರಾಜೀವ್ ರನ್ನು ಶಿವಮೊಗ್ಗ ತಹಶೀಲ್ದಾರ್ ಹುದ್ದೆಯಿಂದ ಎತ್ತಂಗಡಿ ಮಾಡಲು ಈ ಪತ್ರ ಬರೆದಿದೆ ಎಂದೇ ಹೇಳಲಾಗುತ್ತಿದೆ.
ಸರ್ಕಾರ ನೇರವಾಗಿ ಎತ್ತಂಗಡಿ ನಿರ್ಧಾರ ತಾಳಲು ಅಡ್ಡಿಯಾಗಿರುವುದು ಎಸ್ ಐ ಆರ್ ಕೆಲಸ. ಚುನಾವಣಾ ಆಯೋಗದ ನಿರ್ದೇಶದನ್ವಯ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಕಾರ್ಯದಲ್ಲಿ ಭಾಗಿಯಾದ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡುವಂತೆ ಹಾಗೂ ಆಯೋಗದ ಪೂರ್ವಾನುಮತಿ ಇಲ್ಲದೇ ವರ್ಗಾವಣೆ ಮಾಡದಿರುವಂತೆ ಸೂಚನೆ ಇರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಈ ಪತ್ರ ಬರೆದಿದ್ದಾರೆ.
ಉಪಮುಖ್ಯಮಂತ್ರಿ ಪರಮೇಶ್ವರ್ ರವರ ಅನುಮೋದನೆಯಂತೆ ಅಪರ ಮುಖ್ಯ ಕಾರ್ಯದರ್ಶಿ ಈ ಪತ್ರ ಬರೆದಿದ್ದು, ಈ ವರ್ಗಾವಣೆ ಜಾರಿಗೊಳಿಸಲು ಚುನಾವಣಾ ಆಯೋಗದ ಪೂರ್ವಾನುಮತಿ ಕೋರಿದ್ದಾರೆ.
ಶಿವಮೊಗ್ಗ ತಹಶೀಲ್ದಾರ್ ಕಚೇರಿಯನ್ನೇ ಕಣ್ಣೀರಿನ ಕೋಡಿ ಹರಿಯುವ ಜಾಗವಾಗಿ ಪರಿವರ್ತಿಸಿರುವ ವಿ.ಎಸ್.ರಾಜೀವ್ ಜಾಗಕ್ಕೆ ಮೈಸೂರು ಜಿಲ್ಲಾಧಿಕಾರಿ ಕಚೇರಿ ಸಹಾಯಕರೂ ತಹಶೀಲ್ದಾರ್ ಗ್ರೇಡ್-1 ಆಗಿರುವ ಶಿವಕುಮಾರ್ ಕಾಸ್ನೂರ್ ಬರುವ ಸಾಧ್ಯತೆಗಳಿವೆ.
ಶಿವಮೊಗ್ಗದ ಜನ ತಹಶೀಲ್ದಾರ್ ರಾಜೀವ್ ವರ್ಗಾವಣೆಯಿಂದ ನೆಮ್ಮದಿ ಕಾಣುವುದಂತೂ ಸತ್ಯ.


