ಕವಿಸಾಲು

*ಕವಿಸಾಲು*

1.
ನಿನ್ನ
ಹೆಗಲುಗಳೇ ಸಿಗದಿರುತ್ತಿದ್ದರೆ
ದುಃಖಕ್ಕೆಲ್ಲ
ಎಲ್ಲಿ
ಕಣ್ಣೀರು ಹಾಕಬೇಕಿತ್ತು ಹೇಳು?

ದೊರೆಯುತ್ತಿರು
ಕಣ್ಣೀರು ಸುರಿಸಿ
ಹಗುರಾಗಲು…

2.
ನಾ
ಕರೆದಾಗ ಬರುವುದು
ಪ್ರೇಮವಲ್ಲ;

ನೆಪ ಮಾಡಿಕೊಂಡು
ನೀನೇ
ಸಿಗುವುದಿದೆಯಲ್ಲ
ಅದುವೇ
ಪ್ರೇಮ…

3.
ಜನ
ಹೇಳುತ್ತಿದ್ದರು
ಕಾಲ ಬದಲಾಗುತ್ತದೆಂದು…

ಕಾಲವೋ

ಜನ
ಬದಲಾಗುತ್ತಿದ್ದಾರೆಂದು
ಆತಂಕದಲ್ಲಿದೆ!

4.
ಅಂತಿಮವಾಗಿ
ನೀನೂ
ಹೋಗಿಬಿಟ್ಟೆ;

ಯಾವತ್ತೂ
ಬಿಟ್ಟು ಹೋಗುವುದಿಲ್ಲ
ಎಂಬ ಮಾತು
ಕೊಟ್ಟಿದ್ದನ್ನು
ಮರೆತು…

5
ಮರದ
ಹುಳಗಳು
ಇಡೀ ಕುರ್ಚಿಯನ್ನೇ
ತಿಂದು ಮುಗಿಸುವವು…

ಕುರ್ಚಿಯ
ಹುಳಗಳು
ಇಡೀ
ದೇಶವನ್ನೇ…

6.
ನಕಲಿಯಾಗಿಬಿಟ್ಟಿವೆ
ಕಣ್ಣೀರು ಮತ್ತು ಮುಗುಳ್ನಗು;

ಅಳುವ ಕಣ್ಣಿಗೆ ನಿಯತ್ತಿಲ್ಲ,
ಮುಗುಳ್ನಗುವ ಮನಸಿಗೆ
ಒಳ್ಳೇ ಮನಸೇ ಇಲ್ಲ…

– *ಶಿ.ಜು.ಪಾಶ*
8050112067