*ಬಸ್ ನಿಂದ ಭೀಕರ ಅಪಘಾತ;* *ಶಿವಮೊಗ್ಗದ ಇಬ್ಬರು ಯುವಕರ ಸಾವು*
*ಬಸ್ ನಿಂದ ಭೀಕರ ಅಪಘಾತ;*
*ಶಿವಮೊಗ್ಗದ ಇಬ್ಬರು ಯುವಕರ ಸಾವು*
ವೇಗವಾಗಿ ಬಂದ ಖಾಸಗಿ ಬಸ್ಸೊಂದು ಇಬ್ಬರು ಯುವಕರ ಸಾವಿಗೆ ಕಾರಣವಾದ ಘಟನೆ ಮಂಗಳವಾರದಂದು ರಾತ್ರಿ ನಡೆದಿದೆ.
ಇಫ್ತಿಯಾರ್ ಕೂಟ ಮುಗಿಸಿಕೊಂಡು ಬರುತ್ತಿದ್ದ ಯುವಕರಿಬ್ಬರ ಮೇಲೆ ಬಸ್ ಹರಿದಿದೆ. ಯುವಕರಾದ ಸಾದ್(21), ದನಿಶ್(20) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಲಕ್ಕವಳ್ಳಿ ಬ್ಯಾಕ್ ವಾಟರ್ ಬಳಿ ಘಟನೆ ನಡೆದಿದೆ.ಮೃತ ಯುವಕರು ಶಿವಮೊಗ್ಗದ ಲಷ್ಕರ್ ಮೊಹಲ್ಲಾ ಮತ್ತು ಎಂಕೆಕೆ ರಸ್ತೆ ನಿವಾಸಿಗಳಾಗಿದ್ದಾರೆ.


