*ಜುಲೈ 25- 26 ರಂದು ಎಸ್ ಐ ಆರ್(SIR) ವಿಶೇಷ ಪ್ರಚಾರ ದಿನ*

*ಜುಲೈ 25- 26 ರಂದು ಎಸ್ ಐ ಆರ್(SIR) ವಿಶೇಷ ಪ್ರಚಾರ ದಿನ*

ಶಿವಮೊಗ್ಗ ಮಹಾನಗರ ಪಾಲಿಕೆ 113- ಶಿವಮೊಗ್ಗ ವಿಧಾನಸಭಾ ಕ್ಷೇತ್ರ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(SIR)-2026 ವಿಶೇಷ ಪ್ರಚಾರ ಅಭಿಯಾನವನ್ನು ಜು.25 ಮತ್ತು 26 ರಂದು ಹಮ್ಮಿಕೊಳ್ಳಲಾಗಿದೆ ಎಂದು ಆಯುಕ್ತರಾದ ಮಾಯಣ್ಣ ಗೌಡರು ಹೇಳಿದ್ದಾರೆ.

ಈ ಎರಡೂ ದಿನಗಳ ಕಾಲ ಬೆಳಿಗ್ಗೆ 9ರಿಂದ ಸಂಜೆ 7 ರವರೆಗೆ ಶಿವಮೊಗ್ಗ ಮಹಾನಗರ ಪಾಲಿಕೆ ಆವರಣದಲ್ಲಿ ಈ ವಿಶೇಷ ಪ್ರಚಾರ ದಿನ ಹಮ್ಮಿಕೊಳ್ಳಲಾಗಿದೆ. ಮತದಾರರು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಅವರು ವಿನಂತಿಸಿದ್ದಾರೆ.