ಮಣಿಪುರದತ್ತ ಹೆಚ್.ಸಿ.ಯೋಗೇಶ್; ಮಣಿಪುರದಲ್ಲಿ ಜಿಲ್ಲಾಧ್ಯಕ್ಷರ ನೇಮಕದ ಜವಾಬ್ದಾರಿ

ಮಣಿಪುರದತ್ತ ಹೆಚ್.ಸಿ.ಯೋಗೇಶ್;

ಮಣಿಪುರದಲ್ಲಿ ಜಿಲ್ಲಾಧ್ಯಕ್ಷರ ನೇಮಕದ ಜವಾಬ್ದಾರಿ

ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಮಣಿಪುರದ ಎರಡು ಜಿಲ್ಲೆಗಳಿಗೆ *ಸಂಘಟನ್ ಸೃಜನ್ ಅಭಿಯಾನ್* ಎಂಬ ಶೀರ್ಷಿಕೆಯ ಅಡಿಯಲ್ಲಿ ಜಿಲ್ಲಾಧ್ಯಕ್ಷರುಗಳ ನೇಮಕ ಮಾಡುವ ಜವಾಬ್ದಾರಿಯನ್ನು  ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರ 2023ರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಹೆಚ್ ಸಿ ಯೋಗೇಶ್ ರವರನ್ನು ಎ ಐ ಸಿ ಸಿ ವತಿಯಿಂದ ಉಸ್ತುವಾರಿಗಳನ್ನಾಗಿ ನೇಮಿಸಿದೆ.

ಈ ಸಂಬಂಧ ಮಣಿಪುರದಲ್ಲಿನ ಟೆಮಿಂಗ್ಲಾಂಗ್ ಹಾಗೂ ಸರ್ದಾರ್ ಹಿಲ್ಸ್ ಎಂಬ ಎರಡು ಜಿಲ್ಲೆಗಳಲ್ಲಿ ಸಂಬಂಧಪಟ್ಟ ಕಾಂಗ್ರೆಸ್ ಪಕ್ಷದ ಮುಖಂಡರುಗಳೊಂದಿಗೆ ಚರ್ಚಿಸಿ ಹೊಸದಾಗಿ ಜಿಲ್ಲಾಧ್ಯಕ್ಷರುಗಳ ನೇಮಕ ಮಾಡುವ ವಿಚಾರವಾಗಿ  ಹೆಚ್ ಸಿ ಯೋಗೇಶ್ ರವರ ಮೇಲೆ ಎಐಸಿಸಿ ಇಟ್ಟಿರುವ ನಂಬಿಕೆ ಹಾಗೂ ಅವರ ಕಾಂಗ್ರೆಸ್ ಪಕ್ಷದ ಮೇಲಿನ ಗೌರವ ವಿಶ್ವಾಸದ ಬದ್ಧತೆಗೆ ಕಾಂಗ್ರೆಸ್ ಮುಖಂಡರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.