ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಹೊಸ ಜವಾಬ್ದಾರಿ ಬೇಲೂರು ಗೋಪಾಲಕೃಷ್ಣ – ವಿಧಾನಸಭೆಯ ಸರ್ಕಾರದ ಮುಖ್ಯ ಸಚೇತಕರು ಮಂಜುನಾಥ್ ಭಂಡಾರಿ – ವಿಧಾನ ಪರಿಷತ್ತಿನ ಮುಖ್ಯ ಸಚೇತಕರು
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಹೊಸ ಜವಾಬ್ದಾರಿ
ಬೇಲೂರು ಗೋಪಾಲಕೃಷ್ಣ – ವಿಧಾನಸಭೆಯ ಸರ್ಕಾರದ ಮುಖ್ಯ ಸಚೇತಕರು
ಮಂಜುನಾಥ್ ಭಂಡಾರಿ – ವಿಧಾನ ಪರಿಷತ್ತಿನ ಮುಖ್ಯ ಸಚೇತಕರು

ಬೆಂಗಳೂರು: ರಾಜ್ಯದ ವಿವಿಧ ನಿಗಮ, ಮಂಡಳಿ ಹಾಗೂ ಪ್ರಮುಖ ಹುದ್ದೆಗಳಿಗೆ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ನೇಮಕಕ್ಕೆ ಕಾಂಗ್ರೆಸ್ ಹೈಕಮಾಂಡ್ ಒಪ್ಪಿಗೆ ನೀಡಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ನೇಮಕಾತಿ ಆದೇಶ ಹೊರಡಿಸಿದ್ದು, ಈ ಸಂಬಂಧ ಮುಖ್ಯಮಂತ್ರಿಗಳಿಗೆ ಅಧಿಕೃತ ಪತ್ರ ರವಾನಿಸಿದ್ದಾರೆ.
ನೇಮಕಗೊಂಡವರ ಪಟ್ಟಿ ಹೀಗಿದೆ:
1. ಬಿ. ಶಿವಣ್ಣ – ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ಅಧ್ಯಕ್ಷರು.
2. ಕೆ. ಷಡಕ್ಷರಿ – ಕರ್ನಾಟಕ ರಾಜ್ಯ ಖನಿಜ ನಿಗಮ (KSMCL) ಅಧ್ಯಕ್ಷರು.
3. ಪಿ.ಎಂ. ಅಶೋಕ್ – ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಅಧ್ಯಕ್ಷರು.
4. ಎ.ಆರ್. ಕೃಷ್ಣಮೂರ್ತಿ – ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಅಧ್ಯಕ್ಷರು.
5. ಹಂಪನಗೌಡ ಬಾದರ್ಲಿ – ಕರ್ನಾಟಕ ರಾಜ್ಯ ಉಗ್ರಾಣ ನಿಗಮ ಅಧ್ಯಕ್ಷರು.
6. ಡಿ.ಜಿ. ಶಾಂತನ ಗೌಡ – ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ (BSWML) ಅಧ್ಯಕ್ಷರು.
7. ಜಿ.ಎಚ್. ಶ್ರೀನಿವಾಸ್ – ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಅಧ್ಯಕ್ಷರು.
8. ಮಹಾಂತೇಶ್ ಕೌಜಲಗಿ – ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ಅಧ್ಯಕ್ಷರು.
9. ಎಸ್.ಎನ್. ಸುಬ್ಬಾರೆಡ್ಡಿ – ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ (MSIL) ಅಧ್ಯಕ್ಷರು.
10. ಬೇಲೂರು ಗೋಪಾಲಕೃಷ್ಣ – ವಿಧಾನಸಭೆಯ ಸರ್ಕಾರದ ಮುಖ್ಯ ಸಚೇತಕರು.
11. ತನ್ವೀರ್ ಸೇಠ್ – ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ.
12. ಎನ್.ಎಚ್. ಕೋನರೆಡ್ಡಿ – ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರು.
13. ಬಸನಗೌಡ ದದ್ದಲ್ – ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (KKRDB) ಅಧ್ಯಕ್ಷರು.
14. ಮಂಜುನಾಥ್ ಭಂಡಾರಿ – ವಿಧಾನ ಪರಿಷತ್ತಿನ ಮುಖ್ಯ ಸಚೇತಕರು.
15. ಅಲ್ಲಂಪ್ರಭು ಪಾಟೀಲ್ – ಕರ್ನಾಟಕ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ (KSSIDC) ಅಧ್ಯಕ್ಷರು.
16. ಶ್ಯಾಮ್ ನಟೇಕರ್ – ಕರ್ನಾಟಕ ಸಾಂಬಾರ ಪದಾರ್ಥಗಳ ಅಭಿವೃದ್ಧಿ ಮಂಡಳಿ ಅಧ್ಯಕ್ಷರು.
17. ಎಚ್.ಸಿ. ಲಲಿತ್ ರಾಘವ್ – ಕರ್ನಾಟಕ ವಿದ್ಯುತ್ ಕಾರ್ಖಾನೆ ನಿಯಮಿತ (KAVIKA) ಅಧ್ಯಕ್ಷರು.
18. ಸುಭಾಷ್ ರಾಥೋಡ್ – ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರು.
ಸಚಿವ ಸಂಪುಟ ವಿಸ್ತರಣೆ ಹಾಗೂ ಪುನಾರಚನೆಯ ನಿರೀಕ್ಷೆಯಲ್ಲಿದ್ದ ಹಲವು ಕಾಂಗ್ರೆಸ್ ನಾಯಕರು ಇದೀಗ ನಿಗಮ-ಮಂಡಳಿಗಳಲ್ಲಿ ಪ್ರಮುಖ ಜವಾಬ್ದಾರಿ ಪಡೆದಿದ್ದಾರೆ. ತನ್ವೀರ್ ಸೇಠ್, ಬೇಲೂರು ಗೋಪಾಲಕೃಷ್ಣ, ಹಂಪನಗೌಡ ಬಾದರ್ಲಿ, ಮಹಾಂತೇಶ್ ಕೌಜಲಗಿ ಹಾಗೂ ಎಸ್.ಎನ್. ಸುಬ್ಬಾರೆಡ್ಡಿ ಸೇರಿದಂತೆ ಹಲವರು ಸಚಿವ ಸ್ಥಾನದ ಆಕಾಂಕ್ಷಿಗಳು.
ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ನಾಯಕರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಪಕ್ಷದ ಹೈಕಮಾಂಡ್ ರಾಜಕೀಯ ಸಮತೋಲನ ಸಾಧಿಸಲು ಮುಂದಾಗಿದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಆರಂಭವಾಗಿದೆ.


