*ಶಿವಮೊಗ್ಗದ ಬಾರ್ ಬಳಿ ಶಶಿನಾಯ್ಕ್ ನನ್ನು ಕೊಂದಿದ್ದ ಫೈರೋಜ್ ಖಾನ್ ಗೆ 7 ವರ್ಷ ಶಿಕ್ಷೆ-10ಸಾವಿರ ರೂ., ದಂಡ* *ಪಿ ಐ ರವಿಪಾಟೀಲ್ ತನಿಖೆ ನಡೆಸಿದ್ದ ಪ್ರಕರಣದಲ್ಲಿ ಶಿಕ್ಷೆ ವಿಧಿಸಿದ ಕೋರ್ಟ್*
*ಶಿವಮೊಗ್ಗದ ಬಾರ್ ಬಳಿ ಶಶಿನಾಯ್ಕ್ ನನ್ನು ಕೊಂದಿದ್ದ ಫೈರೋಜ್ ಖಾನ್ ಗೆ 7 ವರ್ಷ ಶಿಕ್ಷೆ-10ಸಾವಿರ ರೂ., ದಂಡ*
*ಪಿ ಐ ರವಿಪಾಟೀಲ್ ತನಿಖೆ ನಡೆಸಿದ್ದ ಪ್ರಕರಣದಲ್ಲಿ ಶಿಕ್ಷೆ ವಿಧಿಸಿದ ಕೋರ್ಟ್*
ಶಿವಮೊಗ್ಗದ ಬಿ.ಹೆಚ್.ರಸ್ತೆಯಲ್ಲಿರುವ ಸಿಎಂ ಬಾರ್ ಹತ್ತಿರ ಶಶಿನಾಯ್ಕನನ್ನು ಹಣದ ವಿಚಾರದಲ್ಲಿ ಕೊಲೆ ಮಾಡಿದ್ದ ಫೈರೋಜ್ ಖಾನ್(39)ಗೆ 3ನೇ ಹೆಚ್ಚುವರಿ ಘನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 7 ವರ್ಷದ ಕಠಿಣ ಸಜೆ, 10 ಸಾವಿರ ರೂ.,ಗಳ ದಂಡ ವಿಧಿಸಿ ಆದೇಶಿಸಿದೆ.
ನ್ಯಾಯಾಧೀಶರಾದ ಯಶವಂತ ಕುಮಾರ್ ರವರು ಈ ಆದೇಶ ನೀಡಿದ್ದು, ಸರ್ಕಾರಿ ಅಭಿಯೋಜಕರಾದ ಶ್ರೀಮತಿ ಮಮತಾ ಬಿ.ಎಸ್. ಸರ್ಕಾರದ ಪರ ವಾದ ಮಂಡಿಸಿದ್ದರು.
2025ರ ಏಪ್ರಿಲ್ 27 ರ ರಾತ್ರಿ ಬಾರ್ ಹತ್ತಿರ ಶಶಿನಾಯ್ಕ್ ಮತ್ತು ನಾಗೇಶ್ ನಾಯ್ಕ್ ಹೋಗುತ್ತಿದ್ದಾಗ ಆರೋಪಿ ಫೈರೋಝ್ ಖಾನ್ ಹಣ ನೀಡುವಂತೆ ಕೇಳಿದ್ದ. ಹಣವಿಲ್ಲವೆಂದಾಗ ಶಶಿನಾಯ್ಕ್ ಜೊತೆ ಜಗಳವಾಡಿದ ಫೈರೋಜ್ ತನ್ನ ಬ್ಯಾಗಿನಲ್ಲಿದ್ದ ಎರಡು ಚಾಕುಗಳಿಂದ ಕುತ್ತಿಗೆ, ಭುಜ, ಹೊಟ್ಟೆ ಹಾಗೂ ಬೆನ್ನಿಗೆ ಇರಿದು ಕೊಲೆ ಮಾಡಿದ್ದ.
ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ತನಿಖೆ ನಡೆಸಿದ ಪಿ ಐ ರವಿ ಪಾಟೀಲ್ ಪ್ರಕರಣದ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.


