ಗೋ ಹತ್ಯೆ ನಿಷೇಧ, ಗೋವಿಗೆ ರಾಷ್ಟ್ರಮಾತೆ ಸ್ಥಾನ, ದೇಸಿ ಗೋ ತಳಿಗಳ ರಕ್ಷಣೆ, ಅಭಿವೃದ್ದಿಗೆ ಪ್ರತ್ಯೇಕ ಸಚಿವಾಲಯಕ್ಕೆ ಒತ್ತಾಯಿಸಿ ಗೋವರ್ಧನ್ ಟ್ರಸ್ಟ್ ನಿಂದ ಗೋ ಸಮ್ಮಾನ್ ಆಹ್ವಾನ್ ಅಭಿಯಾನ್
ಗೋ ಹತ್ಯೆ ನಿಷೇಧ, ಗೋವಿಗೆ ರಾಷ್ಟ್ರಮಾತೆ ಸ್ಥಾನ, ದೇಸಿ ಗೋ ತಳಿಗಳ ರಕ್ಷಣೆ, ಅಭಿವೃದ್ದಿಗೆ ಪ್ರತ್ಯೇಕ ಸಚಿವಾಲಯಕ್ಕೆ ಒತ್ತಾಯಿಸಿ
ಗೋವರ್ಧನ್ ಟ್ರಸ್ಟ್ ನಿಂದ ಗೋ ಸಮ್ಮಾನ್ ಆಹ್ವಾನ್ ಅಭಿಯಾನ್
ಗೋ ಹತ್ಯೆ ನಿಷೇಧ, ಗೋವಿಗೆ ರಾಷ್ಟ್ರಮಾತೆ ಸ್ಥಾನ, ದೇಸಿ ಗೋ ತಳಿಗಳ ರಕ್ಷಣೆ, ಅಭಿವೃದ್ದಿಗೆ ಪ್ರತ್ಯೇಕ ಸಚಿವಾಲಯ ಮತ್ತು ಇತರ ಬೇಡಿಕೆಗಳ ಬಗ್ಗೆ ಭಾರತ ಸರ್ಕಾರವನ್ನು ಒತ್ತಾಯಪಡಿಸಲು ದೇಶದಾದ್ಯಂತ 31 ಕೋಟಿ ಸಹಿ ಸಂಗ್ರಹ ಕಾರ್ಯಕ್ರಮದ ಭಾಗವಾಗಿ “ಗೋವರ್ಧನ ಟ್ರಸ್ಟ್” ಶಿವಮೊಗ್ಗ ದ ಸಹಭಾಗಿತ್ವದಲ್ಲಿ “ಗೋ ಸಮ್ಮಾನ್ ಆಹ್ವಾನ್ ಅಭಿಯಾನ್” ವತಿಯಿಂದ ಶಿವಮೊಗ್ಗ ನಗರದ ಸಹಿ ಸಂಗ್ರಹ ಅಭಿಯಾನವನ್ನು ಉದ್ಘಾಟಿಸಲಾಯಿತು.
ಸಮಾರಂಭದ ದಿವ್ಯ ಸಾನಿಧ್ಯವನ್ನು ಶಿವಮೊಗ್ಗ ಬೆಕ್ಕಿನ ಕಲ್ಮಠದ ಪರಮಪೂಜ್ಯ ಶ್ರೀ ಮಲ್ಲಿಕಾರ್ಜುನ ಮುರುಗರಾಜೇಂದ್ರ ಸ್ವಾಮಿಗಳು ವಹಿಸಿದ್ದರು. ಬಿಳಕಿ ಶ್ರೀಮಠದ ರಾಚೋಟೇಶ್ವರ ಶ್ರೀಗಳು, ತಾರವರೆಕೆರೆ ಶಿಲಾಮಠದ ಅಭಿನವ ಸಿದ್ದಲಿಂಗ ಸ್ವಾಮಿಗಳು, ಗೋವರ್ಧನ ಟ್ರಸ್ಟ್ ನ ಮಹಾಪೋಷಕರಾದ ಮಾಜಿ ಉಪ ಮುಖ್ಯಮಂತ್ರಿಗಳಾದ ಕೆ ಎಸ್ ಈಶ್ವರಪ್ಪನವರು, ಅಭಿಯಾನದ ರಾಜ್ಯ ಸಹ ಸಂಚಾಲಕರಾದ ಶ್ರೀಗುರು, ರುದ್ರಾರಾಧ್ಯರು, ಮಹಾಲಿಂಗಯ್ಯ ಶಾಸ್ತ್ರಿಗಳು,
ಉಮೇಶ್ ಆರಾಧ್ಯ, ಹರ್ಷ ಕಾಮತ್, ನಟರಾಜ್ ಭಾಗವತ್ ಹಾಗೂ ಇತರರು ಹಾಜರಿದ್ದರು.


