*ಎಂಎಸ್‌ಎಂಇ ಸಬ್ಸಿಡಿ, ಯೋಜನೆಗಳ ಕುರಿತು ನಾಳೆ ಮಾಹಿತಿ ಕಾರ್ಯಕ್ರಮ* ಶಿವಮೊಗ್ಗ ಜಿಲ್ಲಾ ಕೈಗಾರಿಕಾ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಎಸ್. ವಿಶ್ವೇಶ್ವರಯ್ಯ ವಿವರಣೆ

*ಎಂಎಸ್‌ಎಂಇ ಸಬ್ಸಿಡಿ, ಯೋಜನೆಗಳ ಕುರಿತು ನಾಳೆ ಮಾಹಿತಿ ಕಾರ್ಯಕ್ರಮ*

ಶಿವಮೊಗ್ಗ ಜಿಲ್ಲಾ ಕೈಗಾರಿಕಾ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಎಸ್. ವಿಶ್ವೇಶ್ವರಯ್ಯ ವಿವರಣೆ

*ಶಿವಮೊಗ್ಗ:* ಶಿವಮೊಗ್ಗ ಜಿಲ್ಲಾ ಕೈಗಾರಿಕಾ ಸಂಘ (ರಿ.), ರಾಷ್ಟ್ರಿ ಉದ್ಯೋಗ್ ಪ್ರೈವೇಟ್ ಲಿಮಿಟೆಡ್ ಹಾಗೂ ಶಿವಮೊಗ್ಗ ಕೈಗಾರಿಕಾ ಸಂಘಗಳ ಸಹಯೋಗದಲ್ಲಿ ಎಂಎಸ್‌ಎಂಇ ಸಬ್ಸಿಡಿಗಳು ಹಾಗೂ ಯೋಜನೆಗಳ ಪ್ರಯೋಜನ ಪಡೆಯುವುದು ಹೇಗೆ? ಎಂಬ ವಿಷಯದ ಕುರಿತು ಮಾಹಿತಿ ಕಾರ್ಯಕ್ರಮವನ್ನು ನವೆಂಬರ್ 21ರ ಶನಿವಾರ ಸಂಜೆ 4 ಗಂಟೆಗೆ ನಗರದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಶಾಂತಲಾ ಸ್ಟ್ರೋಕಾಸ್ಟ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಶಿವಮೊಗ್ಗ ಜಿಲ್ಲಾ ಕೈಗಾರಿಕಾ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಎಸ್. ವಿಶ್ವೇಶ್ವರಯ್ಯ ತಿಳಿಸಿದರು.

ನಗರದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಮಾಲೀಕರು, ತಯಾರಿಕಾ ಉದ್ಯಮಿಗಳು ಹಾಗೂ ಉದ್ಯಮಶೀಲರಿಗೆ ಸರ್ಕಾರದ ಸಹಾಯಧನ ಮತ್ತು ಪ್ರೋತ್ಸಾಹಕ ಯೋಜನೆಗಳ ಕುರಿತು ಅರಿವು ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.

ಉದ್ಯಮಕ್ಕೆ ಸೂಕ್ತವಾದ ಯೋಜನೆಗಳ ಆಯ್ಕೆ, ಅರ್ಹತಾ ಮಾನದಂಡಗಳು, ಅಗತ್ಯ ದಾಖಲೆಗಳ ಸಿದ್ಧತೆ ಹಾಗೂ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಕುರಿತು ಕಾರ್ಯಕ್ರಮದಲ್ಲಿ ಮಾರ್ಗದರ್ಶನ ನೀಡಲಾಗುವುದು. ಯೋಜನೆಗಳ ಸೌಲಭ್ಯಗಳು ಆಯಾ ಯೋಜನೆಯ ನಿಯಮಗಳು ಮತ್ತು ಸಂಬಂಧಪಟ್ಟ ಪ್ರಾಧಿಕಾರದ ಅನುಮೋದನೆಗೆ ಒಳಪಟ್ಟಿರುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.
ಸುಮಾರು 9 ಸಾವಿರ ಕ್ಕೂ ಹೆಚ್ಚು ಉದ್ಯಮಿಗಳಿಗೆ ಈ ಬಗ್ಗೆ ಗೊತ್ತೆಇಲ್ಲ.ಹೊಸ ಉದ್ಯಮಿಗಳಿಗೆ,ಈಗ ಇರುವ ಉದ್ಯಮಿಗಳಿಗೆ ಈ ಕಾರ್ಯಕ್ರಮ. ಸರ್ಕಾರದಿಂದ 14 ಲಕ್ಷಕ್ಕೂ ಹೆಚ್ಚು ನೆರವು
ಸಿಗುವ ಸಾದ್ಯತೆ ಇದೆ ಎಂದರು.
ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿದ್ದು, ಮುಂಚಿತ ನೋಂದಣಿ ಕಡ್ಡಾಯವಾಗಿದೆ. ಭಾಗವಹಿಸುವವರು ತಮ್ಮ ಉದ್ಯಮ ನೋಂದಣಿ ಪ್ರಮಾಣಪತ್ರದ ಪ್ರತಿಯನ್ನು ತರಬೇಕು. ನೋಂದಣಿಗಾಗಿ https://forms.gle/d4KY6pibMwGhTK6r7 ಲಿಂಕ್‌ನಲ್ಲಿ ಹೆಸರು ನೋಂದಾಯಿಸಬಹುದು.

ಎಂಎಸ್‌ಎಂಇ ಮಾಲೀಕರು, ತಯಾರಿಕಾ ಉದ್ಯಮಿಗಳು ಹಾಗೂ ಉದ್ಯಮಶೀಲರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸದುಪಯೋಗ ಪಡಿಸಿಕೊಳ್ಳುವಂತೆ ಅವರು ಮನವಿ ಮಾಡಿದರು.
ಪತ್ರಿಕಾ ಗೊಷ್ಟಿ ಯಲ್ಲಿ ಖಜಾಂಚಿ ರಮೇಶ್ ಬಾಬು,ವಿಜಯಕುಮಾರ್ ಎಸ್ ಹೆಚ್ ಇದ್ದರು.