ಕವಿಸಾಲು

Gm ಶುಭೋದಯ💐💐

*ಕವಿಸಾಲು*

1.
ತನ್ನದೇ
ದ್ವಾರಕೆ ಸೃಷ್ಟಿಸಬೇಕಾದರೆ
ಗೆದ್ದ
ಮಥುರೆ ತೊರೆಯಬೇಕಿಲ್ಲಿ
ಹೃದಯವೇ…

2.
ಎಲ್ಲರ ಬಳಿಯೂ
ಇಲ್ಲಿ ನಾಲಗೆ ಇದೆ;

ಮಾತಾಡುತ್ತಿರುವುದು ಮಾತ್ರ
ಹಣವೇ!

3.
ಪ್ರತಿದಿನ ಪ್ರತಿಕ್ಷಣ
ಕಾಡುತ್ತೀ ನೀನು…

ನೆನಪಾಗುತ್ತಿಲ್ಲ
ಯಾವ ಸಾಲದ
ಕಂತೋ ನೀನು!

– *ಶಿ.ಜು.ಪಾಶ*
8050112067
(22/11/2026)