ಕವಿಸಾಲು

Gm ಶುಭೋದಯ💐💐

*ಕವಿಸಾಲು*

1.
ಆತ್ಮದ ಆಳದವರೆಗೂ
ಸುನಾಮಿ ಎಬ್ಬಿಸುತ್ತೆ

ಕಣ್ಣಿಂದ ಸುರಿಯದೇ
ಉಳಿದ
ಕಣ್ಣೀರು!

2.
ಒಂದಿಷ್ಟು ಅಹಂಕಾರವಿರಲಿ ಹೃದಯವೇ…

ಇಲ್ಲದಿದ್ದರೆ,
ವಿದ್ಯುತ್ ಹರಿಯದ
ತಂತಿಯ ಮೇಲೆ ಜನ
ಬಟ್ಟೆ ಒಣಹಾಕಿಬಿಡುವರು!

3.
ರಾಕ್ಷಸರಂಥ ಜನ ಸಿಕ್ಕಾಗ
ಮನುಷ್ಯನಾಗಿಬಿಡುವುದೇ
ಬ್ರಹ್ಮಾಸ್ತ್ರವೂ…

– *ಶಿ.ಜು.ಪಾಶ*
8050112067
(21/2/2026)