ಶಿವಮೊಗ್ಗ ಸಿಟಿ ಕೋ-ಆಪರೇಟಿವ್ ಬ್ಯಾಂಕಿನಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ ಬ್ಯಾಂಕಿನ ಸದಸ್ಯರ ಪ್ರತಿಭಾವಂತ ಮಕ್ಕಳು ಸದಾವಕಾಶ ಪಡೆದುಕೊಳ್ಳಿ –  ಬ್ಯಾಂಕ್ ಅಧ್ಯಕ್ಷ ಕೆ ರಂಗನಾಥ್*

ಶಿವಮೊಗ್ಗ ಸಿಟಿ ಕೋ-ಆಪರೇಟಿವ್ ಬ್ಯಾಂಕಿನಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

ಬ್ಯಾಂಕಿನ ಸದಸ್ಯರ ಪ್ರತಿಭಾವಂತ ಮಕ್ಕಳು ಸದಾವಕಾಶ ಪಡೆದುಕೊಳ್ಳಿ –  ಬ್ಯಾಂಕ್ ಅಧ್ಯಕ್ಷ ಕೆ ರಂಗನಾಥ್*

*ಪ್ರತಿವರ್ಷದಂತೆ ಸಿಟಿ ಕೋ-ಆಪರೇಟಿವ್ ಬ್ಯಾಂಕಿನಿಂದ 2025 – 26 ನೇ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಂಡಿದ್ದು. 2025-26 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ, ದ್ವಿತೀಯ ಪಿ.ಯು.ಸಿ.ಯಲ್ಲಿ ಶೇ.90% ಕ್ಕಿಂತ ಹೆಚ್ಚು ಅಂಕ ಮತ್ತು ಪದವಿ/ಇಂಜಿನೀಯರಿಂಗ್/ ಹಾಗೂ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಶೇ.70% ಅಂಕ ಹಾಗೂ ವೈದ್ಯಕೀಯ ಪದವಿ ಪರೀಕ್ಷೆಯಲ್ಲಿ ಶೇ.60% ಕ್ಕಿಂತ ಹೆಚ್ಚು ಅಂಕಗಳಿಸಿ ಉತ್ತೀರ್ಣರಾದ ಈ ಬ್ಯಾಂಕಿನಲ್ಲಿ ಎ ಷೇರು ಸದಸ್ಯತ್ವ ಪಡೆದ ಸದಸ್ಯರು ಮತ್ತು ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಬ್ಯಾಂಕ್ ಅಧ್ಯಕ್ಷರಾದ ಕೆ.ರಂಗನಾಥ್ ತಿಳಿಸಿದ್ದಾರೆ.

*ನಿಗದಿತ ಅರ್ಜಿ ನಮೂನೆಯನ್ನು ಬ್ಯಾಂಕಿನಿಂದ ಪಡೆದು, ಭರ್ತಿಮಾಡಿ ದಿನಾಂಕ:20-07-2026 ರೊಳಗೆ ಕೋಟೆ ರಸ್ತೆಯಲ್ಲಿರುವ ಈ ಬ್ಯಾಂಕಿನ ಪ್ರಧಾನ ಕಛೇರಿಗೆ ಸಲ್ಲಿಸಬೇಕು. ಆಡಳಿತ ಮಂಡಳಿ ತೀರ್ಮಾನವೇ ಅಂತಿಮವಾಗಿದ್ದು, ಆಯ್ಕೆಯಾದವರಿಗೆ ಪುರಸ್ಕರಿಸಲಾಗುವುದು. ಮಾನ್ಯ ಸದಸ್ಯರು/ಮಕ್ಕಳು ಇದರ ಸದುಪಯೋಗ ಪಡೆಯಬೇಕಾಗಿ ಬ್ಯಾಂಕಿನ ಆಡಳಿತ ಮಂಡಳಿ ಪರವಾಗಿ ವಿನಂತಿಸಿದ್ದಾರೆ.