*ಶಿವಮೊಗ್ಗ ಬ್ರೇಕಿಂಗ್ :- ಶಿಕಾರಿಪುರ ಪಿಜಿಯಲ್ಲಿ ಕೆಲಸಕ್ಕಿದ್ದ ಬಾಲಕಿ ಸಾವು ಪ್ರಕರಣ* ಶಿವಮೊಗ್ಗ ಎಸ್.ಪಿ. ನಿಖಿಲ್ ಬಿ. ಏನಂದ್ರು?

*ಶಿವಮೊಗ್ಗ ಬ್ರೇಕಿಂಗ್ :- ಶಿಕಾರಿಪುರ ಪಿಜಿಯಲ್ಲಿ ಕೆಲಸಕ್ಕಿದ್ದ ಬಾಲಕಿ ಸಾವು ಪ್ರಕರಣ*

ಶಿವಮೊಗ್ಗ ಎಸ್.ಪಿ. ನಿಖಿಲ್ ಬಿ. ಏನಂದ್ರು?

2025 ರ ಮೇ 18 ರಂದು ಶಿಕಾರಿಪುರ ಪಟ್ಟಣದ ಪಿಜಿಯಲ್ಲಿ ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಳು

ಈ ಬಗ್ಗೆ ಕಳೆದ ವಾರ ಶಿಕಾರಿಪುರ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಾಗಿತ್ತು

ಬಾಲಕಿ ಪಿಜಿಯಲ್ಲಿ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಳು

ಆತ್ಮಹತ್ಯೆ ಪ್ರಕರಣ ನಾಲ್ವರು ಆರೋಪಿಗಳು ಬಚ್ಚಿಟ್ಟದ್ದರು

ಪಿಜಿ ಮಾಲೀಕ ಸೌಭಾಗ್ಯ, ರಂಜಿತಾ. ಪೀರಾ ನಾಯ್ಕ್, ಗಂಗಾ ನಾಯ್ಕ್ ಎಂಬುವವರು ಶವವನ್ನು ಎಸೆದು ಬಂದಿದ್ದರು

ಮೃತ ಅಪ್ರಾಪ್ತ ಬಾಲಕಿ ಶವವನ್ನು ಗೌಪ್ಯವಾಗಿ ರವಾನಿಸಿದ್ದರು

ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಮಾವಿನ ಗುಂಡಿಯಲ್ಲಿ ಶವ ಎಸೆದು ಬಂದಿದ್ದರು

ಸೂಟ್ ಕೇಸ್ ನಲ್ಲಿ ಮೃತ ಬಾಲಕಿ ಶವ ತೆಗೆದುಕೊಂಡು ಹೋಗಿ ಎಸೆದು ಬಂದಿದ್ದರು

ಸೂಟ್ ಕೇಸ್ ಸಮೇತ ಬಾಲಕಿ ಶವ ಎಸೆದು ಬಂದಿದ್ದರು

ಬಳಿಕ ಈ ವಿಷಯವನ್ನು ಯಾರಿಗೂ ತಿಳಿಸದಂತೆ ಮಾತನಾಡಿಕೊಂಡಿದ್ದರು

ಒಂದು ವರ್ಷದವರೆಗೂ ಈ ವಿಚಾರ ಯಾರಿಗೂ ತಿಳಿಸಿರಲಿಲ್ಲ

ಕಳೆದೊಂದು ವರ್ಷದಿಂದ ಬಾಲಕಿ ಫೋನ್ ಬಳಸಿರಲಿಲ್ಲ

ಜೊತೆಗೆ ರಂಜಿತಾ ಎಂಬುವವರೊಂದಿಗೆ ಕಳೆದ ವರ್ಷ ಕೊನೆಯ ಬಾರಿಗೆ ಮಾತನಾಡಿದ್ದಳು

ಈ ಬಗ್ಗೆ ರಂಜಿತಾ ವಿಚಾರಣೆ ನಡೆಸಿದಾಗ ಅಸಲಿ ವಿಷಯ ಬೆಳಕಿಗೆ ಬಂದಿದೆ

ಮೃತ ಅಪ್ರಾಪ್ತ ಬಾಲಕಿ ಒಬ್ಬರ ಮೇಲೊಬ್ಬರು ಚಾಡಿ ಹೇಳುತ್ತಿದ್ದಳು ಎಂದು ಬೆದರಿಸಿದ್ದಾರೆ

ಪಿಜಿ ಕೆಳಗಿರುವ ಪಾರ್ಲರ್ ನಲ್ಲಿ ಬೆದರಿಸಿ, ಹಲ್ಲೆ ಮಾಡಿ ತಾಕಿತು ಮಾಡಿರುತ್ತಾರೆ

ಚಾಡಿ ಹೇಳುವ ಮೂಲಕ ಮರ್ಯಾದೆ ತೆಗೆಯುತ್ತಿದ್ದಿಯಾ ಎಂದು ಹೆದರಿಸಿ, ಬೈದಿದ್ದರು

ಇದರಿಂದ ಬೇಸತ್ತು ಪಿಜಿಗೆ ಹೋಗಿ ಬಾಲಕಿ ನೇಣಿಗೆ ಶರಣಾಗಿದ್ದಳು

ಬಳಿಕ ಹೆದರಿದ ನಾಲ್ವರು ಸೂಟ್ ಕೇಸಿನಲ್ಲಿ ಬಾಲಕಿ ಶವ ಹಾಕಿ ಬೀಸಾಡಿ ಬಂದಿದ್ದರು

ಶವದ ಕೆಲವು ಭಾಗಗಳು ನಮಗೆ ದೊರೆತಿದ್ದು ಅವುಗಳನ್ನು ಎಫ್.ಎಸ್.ಎಲ್. ಗೆ ಕಳಿಸಲಾಗಿದೆ

ಪಿಜಿ ಮಾಲಿಕರಾದ ಸೌಭಾಗ್ಯ ಬಾಲಕಿಯನ್ನು ತನ್ನ ಮಗಳಂತೆ ಸಾಕಿ ಸಲುಹಿದ್ದರು

8 ನೇ ತರಗತಿ ವ್ಯಾಸಂಗ ಬಳಿಕ ಬಾಲಕಿ ಸಂಗೀತ ಶಾಲೆಗೆ ತೆರಳಿರಲಿಲ್ಲ

ತಾಯಿ ಇಲ್ಲದ ಬಾಲಕಿ ತಂದೆಯೊಂದಿಗೆ ಇರಲಾಗದೇ ಕೆಲಸ ಹುಡುಕಿಕೊಂಡು ಪಿಜಿಗೆ ಬಂದು ಸೇರಿಕೊಂಡಿರುತ್ತಾಳೆ

ಸೌಭಾಗ್ಯಳ ಪತಿ ಗಂಗಾ ನಾಯ್ಕನಾಗಿದ್ದು, ಸೌಭಾಗ್ಯಳ ಗೆಳತಿ ರಂಜಿತಾ ಆಗಿದ್ದಾಳೆ

ರಂಜಿತಾ ಹಾಗೂ ಪೀರ್ಯಾನಾಯ್ಕ್ ಸ್ನೇಹಿತರಾಗಿದ್ದಾರೆ

ಈ ನಾಲ್ವರು ಸೇರಿ ಅಪ್ರಾಪ್ತ ಬಾಲಕಿ ಸಾವು ಮುಚ್ಚಿಟ್ಟಿದ್ದಾರೆ

ಶಿಕಾರಿಪುರ ಗ್ರಾಮಾಂತರ ಪೋಲಿಸ್ ಠಾಣೆಯ ಪೊಲೀಸರು ಪ್ರಕರಣವನ್ನು ಬೇಧಿಸಿದ್ದಾರೆ

ಮೃತ ಬಾಲಕಿಯ ಅವಶೇಷ ಎಫ್ ಎಸ್ ಎಲ್ ಗೆ ರವಾನೆ ಮಾಡಲಾಗಿದೆ ಎಂದ ಎಸ್.ಪಿ. ನಿಖಿಲ್