*ಶಿವಮೊಗ್ಗದ ತಹಶೀಲ್ದಾರ್ ಆಗಿದ್ದ ಗಿರೀಶ್ ಪ್ರಜ್ಞೆ ತಪ್ಪಿಸಿ ಅಸಹಜ ಲೈಂಗಿಕ ದೌರ್ಜನ್ಯ…* *ವೀಡಿಯೋ ಮಾಡಿ 10 ಲಕ್ಷಕ್ಕೆ ಬ್ಲಾಕ್ ಮೇಲ್…* *ಕೃತ್ಯದ ಹಿಂದಿನ‌ ಕರಾಳ ಸತ್ಯವೇನು?!*

*ಶಿವಮೊಗ್ಗದ ತಹಶೀಲ್ದಾರ್ ಆಗಿದ್ದ ಗಿರೀಶ್ ಪ್ರಜ್ಞೆ ತಪ್ಪಿಸಿ ಅಸಹಜ ಲೈಂಗಿಕ ದೌರ್ಜನ್ಯ…*

*ವೀಡಿಯೋ ಮಾಡಿ 10 ಲಕ್ಷಕ್ಕೆ ಬ್ಲಾಕ್ ಮೇಲ್…*

*ಕೃತ್ಯದ ಹಿಂದಿನ‌ ಕರಾಳ ಸತ್ಯವೇನು?!*

ತಹಶೀಲ್ದಾರ್ ಬಿ.ಎನ್. ಗಿರೀಶ್ ಅವರ ಸರ್ಕಾರಿ ನಿವಾಸಕ್ಕೆ ನುಗ್ಗಿ, ಜ್ಯೂಸ್‌ನಲ್ಲಿ ಮಾತ್ರೆ ಬೆರೆಸಿ ಪ್ರಜ್ಞೆ ತಪ್ಪಿಸಿ, ಅಸಹಜ ಲೈಂಗಿಕ ದೌರ್ಜನ್ಯ ಎಸಗಿ ರೂ. 10 ಲಕ್ಷಕ್ಕೆ ಬ್ಲ್ಯಾಕ್‌ಮೇಲ್ ಹಾಗೂ ಕೊಲೆ ಯತ್ನ ನಡೆಸಲಾಗಿದೆ. ಈ ಸಂಬಂಧ ಪ್ರಮುಖ ಆರೋಪಿ ಅನುಶ್‌ನನ್ನು ಪೊಲೀಸರು ಬಂಧಿಸಿದ್ದಾರೆ.

*ಘಟನೆ ನಡೆದ ಸ್ಥಳ:* ಚನ್ನಪಟ್ಟಣದ ಕುವೆಂಪು ನಗರದಲ್ಲಿರುವ ತಹಶೀಲ್ದಾರ್ ಅವರ ಸರ್ಕಾರಿ ವಸತಿ ಗೃಹ.

*ಕೃತ್ಯದ ವಿವರ:*
ಫೇಸ್‌ಬುಕ್ ಮೂಲಕ ಪರಿಚಯವಾದ ವ್ಯಕ್ತಿಯೊಬ್ಬ ವಿಡಿಯೋ ಮಾಡುವ ನೆಪದಲ್ಲಿ ಇಬ್ಬರು ಸ್ನೇಹಿತರೊಂದಿಗೆ ರಾತ್ರಿ ವೇಳೆ ತಹಶೀಲ್ದಾರ್ ನಿವಾಸಕ್ಕೆ ಬಂದಿದ್ದನು. ನಂತರ ಗಿರೀಶ್ ಅವರಿಗೆ ಮಾತ್ರೆ ಬೆರೆಸಿದ ಜ್ಯೂಸ್ ನೀಡಿ ಪ್ರಜ್ಞೆ ತಪ್ಪಿಸಿ, ಬೆತ್ತಲೆಗೊಳಿಸಿ ಹಲ್ಲೆ ನಡೆಸಿ ದರೋಡೆ ಮಾಡಲು ಯತ್ನಿಸಿದ್ದಾನೆ.

ಪೊಲೀಸ್ ಕ್ರಮ: ತಹಶೀಲ್ದಾರ್ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಎ1 ಆರೋಪಿ ಅನುಶ್‌ನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಉಳಿದ ಇಬ್ಬರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಈ ಘಟನೆ ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.