*ಪತ್ರಿಕಾಗೋಷ್ಠಿಯಲ್ಲಿ ಕೆ.ಇ.ಕಾಂತೇಶ್ ಎಚ್ಚರಿಕೆ* *ಆರ್ ಎಂ ಎಲ್ ನಗರ ಘಟನೆ;* *ಬಂಧಿಸದಿದ್ದರೆ ನ.21 ರಂದು ಪ್ರತಿಭಟನೆ*

*ಪತ್ರಿಕಾಗೋಷ್ಠಿಯಲ್ಲಿ ಕೆ.ಇ.ಕಾಂತೇಶ್ ಎಚ್ಚರಿಕೆ*

*ಆರ್ ಎಂ ಎಲ್ ನಗರ ಘಟನೆ;*

*ಬಂಧಿಸದಿದ್ದರೆ ನ.21 ರಂದು ಪ್ರತಿಭಟನೆ*

ಶಿವಮೊಗ್ಗ ನಗರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು ನಗರದಲ್ಲಿ ದೌರ್ಜನ್ಯ, ದರೋಡೆ, ಕೊಲೆ, ಕೊಲೆ ಯತ್ನದಂತಹ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ ಎಂದು ರಾಷ್ಟ್ರಭಕ್ತರ ಬಳಗದ ಪ್ರಮುಖರಾದ ಕೆ.ಇ.ಕಾಂತೇಶ್ ಟೀಕಿಸಿದರು.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ.20 ರ ಒಳಗೆ ಗೂಂಡಾಗಳನ್ನು ಬಂಧಿಸದಿದ್ದರೆ ಮಾರನೇ ದಿನ ಎಸ್ ಪಿ ಕಚೇರಿ ಮುಂದೆ ಧರಣಿ ಮಾಡಲಾಗುವುದೆಂದರು.

ಇತ್ತೀಚೆಗೆ ಆರ್‌ಎಮ್‌ಎಲ್‌ ನಗರದಲ್ಲಿ ಹರೀಶ್ ಎಂಬುವರ ಮೇಲೆ ಮತಾಂದ ಮುಸಲ್ಮಾನ್ ಗುಂಡಾಗಳು ನಡೆದಸಿರುವಂತಹ ಮಾರಾಣಾಂತಿಕ ಹಲ್ಲೆ. ಈ ಪ್ರಕರಣದಲ್ಲಿ ದುಷ್ಕರ್ಮಿಗಳು ಹರೀಶ್ ಅವರ ಧರ್ಮವನ್ನು ಕೇಳಿ ಅವರು ಹಿಂದೂ ಎಂದು ತಿಳಿದು ದಾಳಿ ಮಾಡಿರುವುದು ಪಹಲ್ಲಾವ್ ಉಗ್ರರು ಧರ್ಮವನ್ನು ಕೇಳಿ ಹಿಂದೂಗಳ ಮಾರಣ ಹೋಮ ನಡೆಸಿದ ಭಯೋತ್ಪಾದಕ ಘಟನೆಯನ್ನು ನೆನಪಿಸುವಂತಿದೆ ಎಂದರು.

ಇಂತಹ ಘಟನೆಯಿಂದ ನಗರದ ಮುಸ್ಲಿಮ್ ಬಾಹುಳ್ಯದ ಬಡಾವಣೆಗಳಲ್ಲಿ ಬಹುಸಂಖ್ಯಾತ ಹಿಂದೂಗಳು ಭಯದ ವಾತಾವರಣದಲ್ಲಿ ಜೀವಿಸುವಂತಾಗಿದೆ. ಘಟನೆ ನಡೆದು ಮೂರು ದಿನಗಳಾದರೂ ಆಗಂತುಕರನ್ನು ಇನ್ನೂ ಬಂಧಿಸದೇ ಇರುವುದನ್ನು ಗಮನಿಸಿದರೆ ಶಿವಮೊಗ್ಗದ ಪೋಲೀಸ್ ಇಲಾಖೆಯ ಕಾರ್ಯವೈಖರಿಯು ಸಂಪೂರ್ಣ ನಿಷ್ಕ್ರಿಯೆಗೊಂಡಿರುವುದು ಮನವರಿಕೆಯಾಗುತ್ತಿದೆ.

ನಗರದಲ್ಲಿ ಹೇರಳವಾಗಿ ದೊರೆಯುತ್ತಿರುವ ಮಾದಕ ವಸ್ತು ಮತ್ತು ಗಾಂಜಾ ಸೇವನೆಯಿಂದ ಯುವಕರು ದಾರಿ ತಪ್ಪುತ್ತಿದ್ದು ಪೋಲೀಸ್ ಇಲಾಖೆ ಗಾಂಜಾ ಮಾಫಿಯಾವನ್ನು ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ರಾಜ್ಯದ ಕಾಂಗ್ರೇಸ್ ನೇತೃತ್ವದ ಸರ್ಕಾರ ಮುಸ್ಲಿಮರ ಓಲೈಕೆಯಲ್ಲಿ ತೊಡಗಿದ್ದು ಬಹುಸಂಖ್ಯಾತ ಹಿಂದೂಗಳ ಮೇಲಿನ ದೌರ್ಜನ್ಯ ಪ್ರಕರಣಗಳು ನಿರಂತರವಾಗಿ ನಡೆಯುತ್ತಿವೆ. ಪರಿಸ್ಥಿತಿ ನಿಭಾಯಿಸಬೇಕಾಗಿದ್ದ ಮುಖ್ಯಮಂತ್ರಿಗಳು ತಮ್ಮ ಖುರ್ಚಿ ಉಳಿಸಿಕೊಳ್ಳುವ ಕಾದಾಟದಲ್ಲಿ ಮೈಮರೆತಿದ್ದಾರೆ. ಇನ್ನು ರಾಜ್ಯದಲ್ಲಿ ಯಾವುದೇ ಘಟನೆಗಳು ನಡೆದರೂ ನಂಗೊತ್ತಿಲ್ಲಪ್ಪಾ” ಎಂದು ಹೇಳುವ ಗೊತ್ತಿಲ್ಲ ಗೃಹಮಂತ್ರಗಳು” ಯಥಾ ಪ್ರಕಾರ ಗೊತ್ತಿಲ್ಲಕ್ಕೆ ಶರಣಾಗಿದ್ದಾರೆ ಎಂದರು.

ಶಿವಮೊಗ್ಗದಲ್ಲಿ ಮೇಲಿಂದ ಮೇಲೆ ಹಿಂದೂಗಳ ಮೇಲಿನ ಮುಸ್ಲಿಮ್ ಗೂಂಡಾಗಳ ದಾಳಿಯ ಬಗ್ಗೆ ಖುದ್ದಾಗಿ ಮುಖ್ಯಮಂತ್ರಿಗಳು ಗಮನಹರಿಸಬೇಕು ಹಾಗೂ ಗೃಹಮಂತ್ರಿಗಳು ನಗರಕ್ಕೆ ಬೇಟಿ ಕೊಟ್ಟು ಇಲ್ಲಿನ ಕಾನೂನು ಸುವ್ಯವಸ್ಥೆಯನ್ನು ಪರಿಶೀಲಿಸಿ ಕಟ್ಟು ನಿಟ್ಟಿನ ಕ್ರಮ ವಹಿಸಲು ಪೋಲೀಸ್ ಇಲಾಖೆಗೆ ಸೂಚಿಸಬೇಕೆಂದು ಆಗ್ರಹಿಸಿದರು.