ಕವಿಸಾಲು

Gm ಶುಭೋದಯ💐💐

*ಕವಿಸಾಲು*

1.
ಗಂಗೆಯಲ್ಲಿ
ಮುಳುಗೆದ್ದು
ಪಾಪಕರ್ಮ ತೊಳೆದುಕೊಂಡ
ಭ್ರಮೆಯಲ್ಲಿದ್ದ ಅವನು…

ಗಂಗಾಪುತ್ರ ಭೀಷ್ಮ
ಶರಶಯ್ಯೆಯಲ್ಲಿ ಮಲಗಿಯೇ
ಮುಗುಳ್ನಗುತ್ತಿದ್ದ!

2.
ಎಲ್ಲರಿಗೂ
ಜೊತೆಯಾಗಿ ನಿಂತೂ ನಿಂತೂ

ನಾನೀಗ
ಒಬ್ಬಂಟಿಯೂ!

3.
ಎಲ್ಲಿಂದಲೋ
ಹೊರಟು
ನಿನ್ನಲ್ಲಿಗೆ ಬಂದು ನಿಂತುಬಿಟ್ಟೆ

ಇಷ್ಟೇ
ಜೀವನದ ಪಯಣವು!

– *ಶಿ.ಜು.ಪಾಶ*
8050112067
(19/2/2026)