*1.08ಕೋಟಿ ರೂ.,ಗಳ ವೆಚ್ಚದಲ್ಲಿ ಶಿವಮೊಗ್ಗದ ಮಹಾತ್ಮ ಗಾಂಧಿ ಪಾರ್ಕ್ ಅಭಿವೃದ್ಧಿ* *ಸಾರ್ವಜನಿಕರಿಗೆ ಏನೆಲ್ಲ ಅನುಕೂಲಗಳಿವೆ ಎಂಬುದನ್ನು ವಿವರಿಸಿದ್ದಾರೆ ಶಾಸಕ ಚನ್ನಬಸಪ್ಪ*
*1.08ಕೋಟಿ ರೂ.,ಗಳ ವೆಚ್ಚದಲ್ಲಿ ಶಿವಮೊಗ್ಗದ ಮಹಾತ್ಮ ಗಾಂಧಿ ಪಾರ್ಕ್ ಅಭಿವೃದ್ಧಿ*
*ಸಾರ್ವಜನಿಕರಿಗೆ ಏನೆಲ್ಲ ಅನುಕೂಲಗಳಿವೆ ಎಂಬುದನ್ನು ವಿವರಿಸಿದ್ದಾರೆ ಶಾಸಕ ಚನ್ನಬಸಪ್ಪ*

ಶಿವಮೊಗ್ಗದ ದೊಡ್ಡ ಪಾರ್ಕ್ ಈ ಗಾಂಧಿ ಪಾರ್ಕ್. ಯಡಿಯೂರಪ್ಪ ಸಿಎಂ ಆಗಿದ್ದಾಗ ಈ ಪಾರ್ಕಿನ ಅಭಿವೃದ್ಧಿ. ನಿರ್ವಹಣೆಗೆ ಟೆಂಡರ್ ಕರೆಯುತ್ತಿದ್ದೆವು. ಆದರೂ ವ್ಯತ್ಯಾಸಗಳಾಗುತ್ತಿದ್ದವು.
ಸಂಪೂರ್ಣ ಅಭಿವೃದ್ಧಿ ಪಡಿಸಿ ಮಹಾನಗರ ಪಾಲಿಕೆಯಿಂದ ಸಾರ್ವಜನಿಕ ಉಪಯೋಗಕ್ಕೆ. ಕಾರಂಜಿ, ಐದು ಪಾಂಡ್ ಗಳು, ಸ್ಪಿಂಕ್ಲರ್ ಮೂಲಕ ಗಿಡಮರಗಳಿಗೆ ನೀರು ಒದಗಿಸುವ ಕೆಲಸ ಮಾಡಲಾಗುತ್ತಿದೆ.
ಎಸ್ಟಿಪಿ ಸರಿಪಡಿಸುವ ಕೆಲಸವೂ ಆಗುತ್ತಿದೆ. ವನ್ಯಜೀವಿ ವ್ಯಾಖ್ಯಾನ ಕೇಂದ್ರ ಸ್ಮಾರ್ಟ್ ಸಿಟಿಯಿಂದ ಆಗಿದ್ದು, ವೀಕ್ಷಣೆಗೆ ಇವತ್ತಿಂದ ತೆರೆದಿದೆ.
ಪಾರ್ಕಿನ ಅಭಿವೃದ್ಧಿ ಸವಾಲಾಗಿ ಸ್ವೀಕರಿಸಿದ್ದೇವೆ. ಪಾಲಿಕೆ ಅಧಿಕಾರಿಗಳ ತಂಡದಿಂದ ಇದೆಲ್ಲ ಅಭಿವೃದ್ಧಿ ಸಾಧ್ಯವಾಯ್ತು. ಇನ್ನೊಂದು ತಿಂಗಳಲ್ಲಿ ಸಂಪೂರ್ಣ ಅಭಿವೃದ್ಧಿ.
ಇದೇ ಮೊದಲ ಬಾರಿಗೆ ಅಧಿಕಾರಿಗಳನ್ನು ಒಳಗೊಂಡ ಸಮಿತಿ ಈ ಪಾರ್ಕಿನ ಉಸ್ತುವಾರಿ ವಹಿಸಿಕೊಂಡಿದೆ. ಶುಲ್ಕ( ವಯಸ್ಕರಿಗೆ 20₹, ಮಕ್ಕಳಿಗೆ 10₹) ಹಳೆಯದೇ ಮುಂದುವರೆಯಲಿದೆ. ಹೊರಗಿನಿಂದ ಇಲ್ಲಿಗೆ ಬರುವ ಶಾಲಾ ಮಕ್ಕಳಿಗೆ ರಿಯಾಯ್ತಿ ನೀಡುವ ಬಗ್ಗೆಯೂ ಚರ್ಚೆಗಳು ನಡೆದಿವೆ.
1.08ಕೋಟಿ ರೂ.,ಗಳ ಖರ್ಚಲ್ಲಿ ಅಭಿವೃದ್ಧಿ
ಮಕ್ಕಳ ಸ್ವಿಮ್ಮಿಂಗ್ ಪೂಲ್ ಕೂಡ ಅಭಿವೃದ್ಧಿ ಪಡಿಸಲಾಗಿದೆ. ರಕ್ಷಣೆಗಾಗಿ ಎರಡು ಪಾಳಿಯಲ್ಲಿ 14 ಜನ ಹೋಂ ಗಾರ್ಡ್ಸ್ ಕೆಲಸ ಮಾಡಲಿದ್ದಾರೆ. ಪಾರ್ಕ್ 32 ಸಿಸಿ ಕ್ಯಾಮರಾ ಕಣ್ಗಾವಲಲ್ಲಿದೆ.
ವನ್ಯಜೀವಿ ವ್ಯಾಖ್ಯಾನ ಕೇಂದ್ರ ಕೂಡ ಗಮನ ಸೆಳೆಯಲಿದೆ.


