ಗಾಂಧಿ ಪಾರ್ಕ್‌ನಲ್ಲಿ ವನ್ಯಜೀವಿ ವ್ಯಾಖ್ಯಾನ ಕೇಂದ್ರ ಹಾಗೂ ವಿಜ್ಞಾನ ಉದ್ಯಾನವನ ಉದ್ಘಾಟಿಸಿದ ಶಾಸಕ ಎಸ್.ಎನ್. ಚನ್ನಬಸಪ್ಪ
ಗಾಂಧಿ ಪಾರ್ಕ್‌ನಲ್ಲಿ ವನ್ಯಜೀವಿ ವ್ಯಾಖ್ಯಾನ ಕೇಂದ್ರ ಹಾಗೂ ವಿಜ್ಞಾನ ಉದ್ಯಾನವನ ಉದ್ಘಾಟಿಸಿದ ಶಾಸಕ ಎಸ್.ಎನ್. ಚನ್ನಬಸಪ್ಪ



ಶಿವಮೊಗ್ಗ: ನಗರದ ಜನಪ್ರಿಯ ಗಾಂಧಿ ಪಾರ್ಕ್‌ನಲ್ಲಿ ವಿದ್ಯಾರ್ಥಿಗಳಿಗೆ ಪರಿಸರ ಮತ್ತು ವಿಜ್ಞಾನದ ಕುರಿತು ಪ್ರಾಯೋಗಿಕ ಮಾಹಿತಿ ನೀಡುವ ಉದ್ದೇಶದಿಂದ ನಿರ್ಮಿಸಲಾಗಿರುವ ‘ವನ್ಯಜೀವಿ ವ್ಯಾಖ್ಯಾನ ಕೇಂದ್ರ’ ಹಾಗೂ ‘ವಿಜ್ಞಾನ ಉದ್ಯಾನವನ’ವನ್ನು ಶಾಸಕರಾದ ಶ್ರೀ ಎಸ್.ಎನ್. ಚನ್ನಬಸಪ್ಪ ಅವರು ಇಂದು ಲೋಕಾರ್ಪಣೆಗೊಳಿಸಿದರು
ಗಾಂಧಿ ಪಾರ್ಕ್ ಕೇವಲ ವಿಶ್ರಾಂತಿ ಪಡೆಯುವ ತಾಣವಾಗಿ ಉಳಿಯದೆ, ಜ್ಞಾನವಿಕಾಸದ ಕೇಂದ್ರವಾಗಬೇಕು ಎಂಬುದು ನಮ್ಮ ಆಶಯ. ಮಕ್ಕಳು ಪುಸ್ತಕದಲ್ಲಿ ಓದಿದ್ದನ್ನು ಇಲ್ಲಿ ಪ್ರಾಯೋಗಿಕವಾಗಿ ನೋಡಿ ಕಲಿಯಲು ಅವಕಾಶವಿದೆ. ಪರಿಸರ ಸಮತೋಲನ ಮತ್ತು ವನ್ಯಜೀವಿಗಳ ಸಂರಕ್ಷಣೆಯ ಮಹತ್ವವನ್ನು ಸಾರುವ ಕೇಂದ್ರಗಳು ಇಲ್ಲಿವೆ. ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು” ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಉಪಾಯುಕ್ತರಾದ ತುಷಾರ್, ಕಾರ್ಯಪಾಲಕ ಇಂಜಿನಿಯರ್ ಪ್ರಿಯಾ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಲಕ್ಷ್ಮಿ ಹಾಗೂ ಜ್ಯೋತಿ ಸೇರಿದಂತೆ ಪಾಲಿಕೆಯ ಅಧಿಕಾರಿಗಳು ಮತ್ತು ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.


