Gm ಶುಭೋದಯ💐💐 *ಕವಿಸಾಲು* 1. ಮೇಣದ ಬತ್ತಿಗೆ ಈಗಷ್ಟೇ ಗೊತ್ತಾಯ್ತು… ತನ್ನೊಳಗೆ ಅಡಗಿಸಿಟ್ಟ ದಾರವೇ ತನ್ನ ಸುಟ್ಟು ಕರಗಿಸಿತೆಂದು! 2. ಪರಸ್ಪರ ನೆನಪಿಸಿಕೊಳ್ಳುತ್ತಿರಿ… ಇದು ಒಮ್ಮೆಯಷ್ಟೇ ಸಿಗುವ ಬದುಕು, ಪದೇ ಪದೇ ತಯಾರಿಸಬಹುದಾದ ಚಹಾವಲ್ಲ! – *ಶಿ.ಜು.ಪಾಶ* 8050112067 (18/12/2025)
Gm ಶುಭೋದಯ💐💐 *ಕವಿಸಾಲು* 1. ದಾರಿ ಕಠಿಣವಿದ್ದರೆ… ಗುರಿಯೂ ಅದ್ಭುತವೂ 2. ಕನಸೇನೆಂದು ಗೊತ್ತಾ ನಿನಗೆ? ಅದೊಂದು ನೀನಷ್ಟೇ ಇರುವ ಅದ್ಭುತ ಜಗತ್ತು! 3. ನೀನು ಬರೀ ನೀನಲ್ಲ ಸುಂದರವಾದ ಅಭ್ಯಾಸವು! – *ಶಿ.ಜು.ಪಾಶ* 8050112067 (14/12/2025)
Gm ಶುಭೋದಯ💐💐 *ಕವಿಸಾಲು* 1. ಸಮಸ್ಯೆಗಳು ಬಂದರೆ Part of life ಅಂದು ಕೋ ಹೃದಯವೇ… ಆ ಸಮಸ್ಯೆಗಳಿಂದ ಮುಗುಳ್ನಕ್ಕು ಹೊರ ಬಂದುಬಿಡು Art of life ಆಗುವುದಾಗ! 2. ಒಂದಿಷ್ಟು ಖಾಲಿತನವಿರಲಿ ನಿನ್ನಲ್ಲಿ… ನೀನೇ ನಿನ್ನೊಳಗಿಂದ ಹೊರ ಹೋಗದ ಸ್ಥಿತಿ ಬರದಿರಲಿ – *ಶಿ.ಜು.ಪಾಶ* 8050112067 (13/12/2025)