ಕವಿಸಾಲು

Gm ಶುಭೋದಯ💐💐

*ಕವಿಸಾಲು*

1.
ನಂಬಿಕೆ ಒಳ್ಳೇದೇ

ಆದರೆ
ಎಲ್ಲರ ಮೇಲಲ್ಲ!

2.
ನಾನು
ಮಲಗುವ ಮುನ್ನವೇ
ಮಲಗಿಸಿಬಿಡುತ್ತೇನೆ
ನನ್ನೆಲ್ಲಾ ಆಸೆಗಳನ್ನು…

ಆದರೂ ಆಶ್ಚರ್ಯ

ನಾ ಏಳುವುದಕ್ಕಿಂತ
ಮುಂಚೆಯೇ ಎದ್ದಿರುತ್ತವೆ!

3.
ಕಣ್ಣು ಕುಕ್ಕುವ ಸೌಂದರ್ಯ

ತಾಜ್ ಮಹಲ್
ಗೋರಿ ಎಂಬುದನ್ನು
ಮುಚ್ಚಿಟ್ಟಿತು!

– *ಶಿ.ಜು.ಪಾಶ*
8050112067
(31/12/2025)