*ಶಿವಮೊಗ್ಗದ ಕೇಕ್ ಮನೆ ಮೇಲೆ ಎಸಿ ಸತ್ಯನಾರಾಯಣ್ ನೇತೃತ್ವದಲ್ಲಿ ದಾಳಿ* *ಕೇಕ್, ಸ್ವೀಟ್ ಸೆಂಟರ್ ಗಳ ಮೇಲೆಯೂ ಮುಂದುವರೆಯಲಿದೆಯೇ ಅಧಿಕಾರಿಗಳ ದಾಳಿ?*
*ಶಿವಮೊಗ್ಗದ ಕೇಕ್ ಮನೆ ಮೇಲೆ ಎಸಿ ಸತ್ಯನಾರಾಯಣ್ ನೇತೃತ್ವದಲ್ಲಿ ದಾಳಿ*
*ಕೇಕ್, ಸ್ವೀಟ್ ಸೆಂಟರ್ ಗಳ ಮೇಲೆಯೂ ಮುಂದುವರೆಯಲಿದೆಯೇ ಅಧಿಕಾರಿಗಳ ದಾಳಿ?*
ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾ ಅಂಕಿತ ಅಧಿಕಾರಿಗಳೂ ಆಗಿರುವ ಸತ್ಯನಾರಾಯಣ್ ನೇತೃತ್ವದ ತಂಡ ಮಂಗಳವಾರದಂದು ಶಿವಮೊಗ್ಗದ ರವೀಂದ್ರನಗರದ ಕೇಕ್ ತಯಾರಿಕಾ ಘಟಕವೊಂದರ ಮೇಲೆ ದಾಳಿ ನಡೆಸಿ ನೋಟಿಸ್ ನೀಡಿದೆ.
ರವೀಂದ್ರನಗರದ ಕೇಕ್ ಮನೆ ಎಂಬ ಕೇಕ್ ತಯಾರಿಕಾ ಘಟಕದ ಮೇಲೆ ಈ ದಾಳಿ ನಡೆದಿದ್ದು, ಕಾರಣ ಕೇಳಿ ನೋಟಿಸ್ ನೀಡಲಾಗಿದೆ.
ಆಹಾರ ಸುರಕ್ಷತಾ ಇಲಾಖೆ, ಉಪ ನಿರ್ದೇಶಕರಾದ ಅವಿನ್ (ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ) ಮತ್ತು ತಾಲೂಕು ವೈದ್ಯಾಧಿಕಾರಿ ಡಾ.ಚಂದ್ರಶೇಖರ್ ಒಳಗೊಂಡ ತಂಡವು ಇಂದು ಶಿವಮೊಗ್ಗ ನಗರದ ರವೀಂದ್ರನಗರದ ಕೇಕ್ ಮನೆ, ಕೇಕ್ ತಯಾರಿಕಾ ಕೇಂದ್ರದ ತಪಾಸಣೆ ನಡೆಸಿದ್ದು,ಈ ಸಮಯದಲ್ಲಿ ಕಂಡು ಬಂದ ನ್ಯೂನ್ಯತೆಗಳನ್ನು ಪರಿಶೀಲಿಸಿ ಮಾಲೀಕರಿಗೆ ನೋಟಿಸ್ ಜಾರಿ ಮಾಡಿದ್ದಾರೆ.


