*ಗಾಜನೂರಲ್ಲಿ ಕಲ್ಲು ಎತ್ತಿ ಹಾಕಿ ಭೀಕರ ಕೊಲೆ ಮಾಡಿದ್ದ ಇಬ್ಬರ ಬಂಧನ* *ಕುಡಿದ ಮತ್ತಲ್ಲಿ ಆದ ಜಗಳ ಕೊಲೆಯಲ್ಲಿ ಅಂತ್ಯ* *ದೂರು ದಾಖಲಾದ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿದ ಇನ್ಸ್ ಪೆಕ್ಟರ್ ಗುರುರಾಜ್ & ಟೀಂ*
*ಗಾಜನೂರಲ್ಲಿ ಕಲ್ಲು ಎತ್ತಿ ಹಾಕಿ ಭೀಕರ ಕೊಲೆ ಮಾಡಿದ್ದ ಇಬ್ಬರ ಬಂಧನ*
*ಕುಡಿದ ಮತ್ತಲ್ಲಿ ಆದ ಜಗಳ ಕೊಲೆಯಲ್ಲಿ ಅಂತ್ಯ*
*ದೂರು ದಾಖಲಾದ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿದ ಇನ್ಸ್ ಪೆಕ್ಟರ್ ಗುರುರಾಜ್ & ಟೀಂ*

ಕಲ್ಲು ಎತ್ತಿಹಾಕಿ ಸ್ನೇಹಿತನನ್ನೇ ಕೊಲೆ ಮಾಡಿದ್ದ ಇಬ್ಬರನ್ನು ತಡ ಮಾಡದೇ ಚಾಣಕ್ಯತನದ ತನಿಖೆ ನಡೆಸಿ ಶಿವಮೊಗ್ಗದ ತುಂಗಾನಗರ ಪೊಲೀಸರು ಬಂಧಿಸಿದ್ದಾರೆ.
ಫೆ.12 ರಾತ್ರಿ ಗಾಜನೂರಿನ ಸೊಸೈಟಿ ಬಳಿ ಸ್ನೇಹಿತನನ್ನು ಕುಡಿದ ಮತ್ತಿನಲ್ಲಿ ಕೊಲೆ ಮಾಡಿ ಪರಾರಿಯಾಗಿದ್ದ ಗಾಜನೂರಿನ ದೊಡ್ಡಕೇರಿ ನಿವಾಸಿ, ಬಟ್ಟೆ ಅಂಗಡಿ ಕೆಲಸಗಾರ ಕೃಷ್ಣಮೂರ್ತಿ ಬಿನ್ ಲೇಟ್ ಲಿಂಗಪ್ಪ(44) ಮತ್ತು ಗಾರೆ ಕೆಲಸಗಾರ ಮಾಲ್ತೇಶ ಬಿನ್ ಲೇಟ್ ಶಿವಪ್ಪ(21)ನನ್ನು ಪೊಲೀಸರು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.
ಕೊಲೆಗೆ ಸಂಬಂಧಿಸಿದಂತೆ ಶ್ರೀಧರ್ ನೀಡಿದ್ದ ದೂರಿನ ಮೇರೆಗೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೇಸು ದಾಖಲಾದ ಒಂದಿಷ್ಟು ಗಂಟೆಗಳಲ್ಲೇ ಆರೋಪಿಗಳನ್ನು ಪೊಲೀಸರು ಬಂಧಿಸಿ ಅಭಿನಂದನೆಗೆ ಪಾತ್ರರಾಗಿದ್ದಾರೆ.
ಎಸ್ ಪಿ ನಿಖಿಲ್ ಬಿ, ಅಡಿಷನಲ್ ಎಸ್ ಪಿ ಗಳಾದ ಎ.ಜಿ.ಕಾರಿಯಪ್ಪ, ರಮೇಶ್ ಕುಮಾರ್ ರವರ ಮಾರ್ಗದರ್ಶನದಲ್ಲಿ ತನಿಖೆ ನಡೆಸಿದ ತುಂಗಾನಗರ ಇನ್ಸ್ ಪೆಕ್ಟರ್ ಕೆ.ಟಿ.ಗುರುರಾಜ್, ಸಿಬ್ಬಂದಿಗಳಾದ ಕಿರಣ್ ಮೋರೆ, ಅರುಣ ಕುಮಾರ್, ನಾಗಪ್ಪ, ರಂಗನಾಥರಿದ್ದ ತಂಡ ಆರೋಪಿಗಳ ಹೆಡೆಮುರಿ ಕಟ್ಟಿದೆ.


