*ವಿವಾದದ ಕೇಂದ್ರಬಿಂದುವಾದ ಶಿವಮೊಗ್ಗ ಜಿಲ್ಲಾ ಡಿ.ದೇವರಾಜ್ ಅರಸು ಅಭಿವೃದ್ಧಿ ನಿಗಮ…* *ರೈತರಿಗೆ ಕೀಳು ಭಾಷೆಯಲ್ಲೇ ಸಂಬೋಧಿಸುತ್ತಿದ್ದಾರಾ ಅಧಿಕಾರಿ ಪ್ರದೀಪ್ ಕುಮಾರ್?…* *ಏನಿದು ಪ್ರಕರಣ?*

*ವಿವಾದದ ಕೇಂದ್ರಬಿಂದುವಾದ ಶಿವಮೊಗ್ಗ ಜಿಲ್ಲಾ ಡಿ.ದೇವರಾಜ್ ಅರಸು ಅಭಿವೃದ್ಧಿ ನಿಗಮ…*

*ರೈತರಿಗೆ ಕೀಳು ಭಾಷೆಯಲ್ಲೇ ಸಂಬೋಧಿಸುತ್ತಿದ್ದಾರಾ ಅಧಿಕಾರಿ ಪ್ರದೀಪ್ ಕುಮಾರ್?*

*ಏನಿದು ಪ್ರಕರಣ?*

ಶಿವಮೊಗ್ಗ ಜಿಲ್ಲಾ ಡಿ.ದೇವರಾಜ್ ಅರಸು ಅಭಿವೃದ್ಧಿ ನಿಗಮದಲ್ಲಿ ನ್ಯಾಯ ಕೇಳುವ ರೈತರಿಗೆ ತೀರಾ ಕೆಳಮಟ್ಟದ ಭಾಷೆಯಲ್ಲಿ ಅವಮಾನಿಸಿ ಕಳಿಸಲಾಗುತ್ತಿದೆಯೇ?

ಆ.10ರಂದು ಗಂಗಾ ಕಲ್ಯಾಣ ಯೋಜನೆಯ ಫಲಾನುಭವಿ ಆಗಿರುವ ರೈತಾಪಿ ಮಹಿಳೆ ರೇಣುಕಮ್ಮ ಸೂರನಗದ್ದೆಯವರ ಮಗ ಮಂಜುನಾಥ್, ಶಿವಮೊಗ್ಗದಲ್ಲಿರುವ ದೇವರಾಜ್ ಅರಸು ಅಭಿವೃದ್ಧಿ ನಿಗಮದ ಕಚೇರಿಗೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುವಂತೆ ಮೂಲತಃ ಎಫ್ ಡಿ ಎ ಆಗಿರುವ ಎಡಿಓ ಹಾಗೂ ಈ ಹಿಂದಿನವರೆಗೆ ಪ್ರಭಾರ ಜಿಲ್ಲಾ ವ್ಯವಸ್ಥಾಪಕ ಆಗಿದ್ದ ಕೆ.ಪಿ.ಪ್ರದೀಪ್ ಕುಮಾರ್ ರವರನ್ನು ಕೇಳಿಕೊಂಡಿದ್ದಾರೆ. ಆದರೆ, ಪ್ರದೀಪ್ ಕುಮಾರ್ ತೀರಾ ಬೇರೆ ಧ್ವನಿಯಲ್ಲಿಯೇ ಈ ರೈತರಿಗೆ ಮಾತಾಡಿದ್ದಾರೆಂಬ ವಿಚಾರ ಇದೀಗ ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ.

2021-22ನೇ ಸಾಲಿನಲ್ಲಿ ಶಾಸಕರ ಕೋಟಾದಿಂದ ಸಾಗರ ತಾಲ್ಲೂಕಿನ ಭೀಮೇರಿ ಗ್ರಾಮದ ಸೂರನಗದ್ದೆಯಲ್ಲಿರುವ ರೇಣುಕಮ್ಮ ರವರ ಜಮೀನಿಗೆ ಗಂಗಾ ಕಲ್ಯಾಣ ಯೋಜನೆಯಡಿ ಬೋರ್ ವೆಲ್ ಕೊರೆಯಲಾಗಿದೆ. ಆಗ ಅದರ ಎಸ್ಟಿಮೇಟನ್ನು ಅಧಿಕಾರಿಗಳು ತೋರಿಸಿರಲಿಲ್ಲ. ಈಗ ಫೈಲ್ ಕಳೆದು ಹೋಗಿದೆ. ಆಧಾರ್ ಕಾರ್ಡ್ ಕೊಡಿ ಎಂದು ಹೇಳುತ್ತಿದ್ದಾರೆ. ಮತ್ತೊಂದು ಕಡೆ ಮೋಟಾರ್ ಕೊಡುವ ಯೋಜನೆ ಇಲ್ಲ. ಟಿಸಿಯಿಂದಲೇ ವಿದ್ಯುತ್ ಪಡೆಯಬೇಕೆಂದು ಹೇಳುತ್ತಾರಾದರೂ ಅದಕ್ಕೂ ಸ್ಪಂದಿಸುತ್ತಿಲ್ಲ. ಕೈಯಿಂದ 25000₹ ಕಟ್ಟಿದೀನಿ. ಅದು ಕೊಡಿ ಎಂದು ದುಂಬಾಲು ಬೀಳುತ್ತಿದ್ದಾರೆ. ಗಂಗಾಕಲ್ಯಾಣ ಯೋಜನೆಯಲ್ಲಿ ಹಣ ಕಟ್ಟೋಕೆ ಬರಲ್ವಲ್ಲ ಎಂದರೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆಂದು ಫಲಾನುಭವಿ ರೇಣುಕಮ್ಮರವರ ಮಗ ಮಂಜುನಾಥ್ ಮಲೆನಾಡು ಎಕ್ಸ್ ಪ್ರೆಸ್ ಗೆ ವಿವರಣೆ ನೀಡಿದ್ದಾರೆ.

ಆ.10 ರಂದು ತೀರಾ ಉಚಿತವಲ್ಲದ ಭಾಷೆಯಲ್ಲಿ ಅಧಿಕಾರಿ ಪ್ರದೀಪ್ ಕುಮಾರ್ ಮಾತಾಡಿರುವುದು ಈಗ ರೈತಸಂಘಟನೆಗಳ ಕೆಂಗಣ್ಣಿಗೂ ಗುರಿಯಾಗುತ್ತಿದೆ. ಹೊಸ ಶಿವಮೊಗ್ಗ ಜಿಲ್ಲಾ ವ್ಯವಸ್ಥಾಪಕ ಕುಶಾಲ್ ಈ ಬಗ್ಗೆ ಏನು ಕ್ರಮ ಕೈಗೊಳ್ಳಲಿದ್ದಾರೆ? ನಿಗಮದ ಎಂ ಡಿ ನಟರಾಜ್ ಈ ಬಗ್ಗೆ ಏನಂತಾರೆ?