ಶಿವಮೊಗ್ಗದ ಟ್ರಾಫಿಕ್ ಪೊಲೀಸರು, ಶಿವಮೊಗ್ಗ ಮಹಾನಗರ ಪಾಲಿಕೆ ಮತ್ತು ಅವೈಜ್ಞಾನಿಕ ಹಂಪ್ ಗಳು!* *ಅವೈಜ್ಞಾನಿಕ ಹಂಪ್ ಗಳಿಂದಾಗುತ್ತಿರುವ ಸಾವುಗಳಿಗ್ಯಾರು ಜವಾಬ್ದಾರರು?!*

*ಶಿವಮೊಗ್ಗದ ಟ್ರಾಫಿಕ್ ಪೊಲೀಸರು, ಶಿವಮೊಗ್ಗ ಮಹಾನಗರ ಪಾಲಿಕೆ ಮತ್ತು ಅವೈಜ್ಞಾನಿಕ ಹಂಪ್ ಗಳು!*

*ಅವೈಜ್ಞಾನಿಕ ಹಂಪ್ ಗಳಿಂದಾಗುತ್ತಿರುವ ಸಾವುಗಳಿಗ್ಯಾರು ಜವಾಬ್ದಾರರು?!*

ಅಪಘಾತ ತಪ್ಪಿಸಲೆಂದು ರಸ್ತೆಗಳ ತುಂಬಾ ಹಂಪ್ಸ್ ಹಾಕಿಸಿದ‌ ಮತ್ತು ಆ ಹಂಪ್ ಗಳನ್ನು ಹಾಕಿದ ಪೊಲೀಸ್ ಇಲಾಖೆ ಮತ್ತು ಮಹಾನಗರ ಪಾಲಿಕೆ ಮಧ್ಯೆ ಶೀತಲ ಸಮರ ಶುರುವಾಗಿದೆ!

ಕಳೆದ ಒಂದಿಷ್ಟು ತಿಂಗಳುಗಳಲ್ಲಿ ಶಿವಮೊಗ್ಗದ ಬಹುತೇಕ ಕಡೆಗಳಲ್ಲಿ ಎತ್ತರೆತ್ತರದ ಹಂಪ್ ಗಳನ್ನು ಹಾಕುವ ಕೆಲಸ ನಡೆಯಿತು. ವೈಜ್ಞಾನಿಕ ಹಂಪ್ ಗಳನ್ನೇ ಹಾಕಿಸಿ ಅಪಘಾತ ತಪ್ಪಿಸುತ್ತಿದ್ದೇವೆಂದೇ ತನ್ನ ಖಾಕಿ ಮೀಸೆ ತಿರುವಿಕೊಂಡಿದ್ದ ಬಿಳಿ ಡ್ರೆಸ್ಸಿನ ಖಾಕಿ ಪೊಲೀಸರು ಇದೀಗ ಈ ಹಂಪ್ ಗಳಿಂದಾಗಿ ಆಗುತ್ತಿರುವ ಅಪಘಾತ, ಸಾವುಗಳಿಂದ ದಂಗೆ ಏಳುತ್ತಿರುವ ಜನರನ್ನು ಸಮಾಧಾನ ಮಾಡಲಾಗದೇ ಈ ಹಂಪ್ ಗಳೆಲ್ಲ ನಮ್ಮದಲ್ಲ- ನಗರ ಪಾಲಿಕೆ ಹಾಕಿದ್ದೆಂದು ಅತ್ತ ಬೆರಳು ತೋರಿಸುತ್ತಿದ್ದಾರೆ.

ಅಪಘಾತ ತಪ್ಪಲೆಂದು ಈ ಹಂಪ್ ಗಳನ್ನು ಹಾಕಿಸಿದ್ದು ನಾವೇ ಎಂದು ಹಂಪ್ ಗಳ ಬಳಿಯಲ್ಲೆಲ್ಲ ನಿಂತು, ಫೋಟೋಗಳನ್ನು ತೆಗೆಸಿಕೊಂಡು ದೊಡ್ಡವರಾಗಲು ಹೊರಟು ಫೋಟೋ ತೆಗೆಸಿಕೊಂಡ ಟ್ರಾಫಿಕ್ ಪೊಲೀಸರು ಇದೀಗ ಅಪಘಾತಗಳಿಗೆ ಕಾರಣ ಪಾಲಿಕೆಯ ಅವೈಜ್ಞಾನಿಕ ಹಂಪ್ ಗಳು ಎಂದು ಬೆರಳು ತೋರಿಸುತ್ತಿದ್ದಾರೆ.

ಒಳ್ಳೇದಾದರೆ ನಂದು…ಕೆಟ್ಟದ್ದಾದರೆ ನಿಂದು ಅನ್ನೋ ಪಾಲಿಸಿಗೆ ಟ್ರಾಫಿಕ್ ಪೊಲೀಸರು ಒಳಗಾಗಿದ್ದಾರಾ?