*ಆರ್ ಎಂ ಎಲ್ ನಗರದ ಯುವಕನ ಮೇಲೆ ಹಲ್ಲೆ;* *ಮನೆಗೆ ಭೇಟಿ ಮಾಡಿ ಎಸ್ ಪಿ ಗೆ ಒತ್ತಾಯಿಸಿದ ಕೆ.ಇ.ಕಾಂತೇಶ್*
*ಆರ್ ಎಂ ಎಲ್ ನಗರದ ಯುವಕನ ಮೇಲೆ ಹಲ್ಲೆ;*
*ಮನೆಗೆ ಭೇಟಿ ಮಾಡಿ ಎಸ್ ಪಿ ಗೆ ಒತ್ತಾಯಿಸಿದ ಕೆ.ಇ.ಕಾಂತೇಶ್*

ಇತ್ತೀಚೆಗೆ ಮತಾಂಧ ಯುವಕರಿಂದ ಮಾರಾಣಾಂತಿಕ ಹಲ್ಲೆಗೊಳಗಾದ ಹರೀಶ್ ಅವರ ಆರ್.ಎಮ್.ಎಲ್. ನಗರದ ನಿವಾಸಕ್ಕೆ ರಾಷ್ಟ್ರಭಕ್ತರ ಬಳಗದ ಮುಖಂಡರಾದ ಕೆ.ಇ.ಕಾಂತೇಶ್ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಆ ನಂತರ ಎಸ್ ಪಿ ಮಿಥುನ್ ಕುಮಾರ್ ರವರನ್ನು ಭೇಟಿ ಮಾಡಿ, ಮುಸ್ಲಿಂ ಗೂಂಡಾಗಳನ್ನು ತಕ್ಷಣ ಬಂಧಿಸಿ, ಸೂಕ್ತ ಕಾನೂನು ಕ್ರಮಕ್ಕೆ ಕಾಂತೇಶ್ ರವರ ನೇತೃತ್ವದಲ್ಲಿ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ರಾಷ್ಟ್ರಭಕ್ತರ ಬಳಗದ ಪ್ರಮುಖರಾದ ಬಾಲು, ಮೋಹನ್ ಜಾಗವ್, ಚನ್ನಬಸಪ್ಪ, ಮಣಿ, ಗುರು ಶೇಟ್, ಜಗದೀಶ್, ಕುಬೇರಪ್ಪ, ಶಂಕರ್ ನಾಯಕ್, ಪಾತ್ರೆ ಮಂಜಣ್ಣ, ರಾಜು, ಮುರುಗೇಶ್, ರಾಜು, ಚಿದಾನಂದ್, ಲತಾ ಶ್ರೀನಿವಾಸ್, ರಮೇಶ್ ಚಟ್ನಳ್ಳಿ, ಧರ್ಮರಾಜ್ ಮುಂತಾದವರು ಉಪಸ್ಥಿತರಿದ್ದರು.


