ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ವಾರದಲ್ಲಿ 3 ದಿನ ನರರೋಗ ತಜ್ಞರಿಲ್ಲ!* *ರೋಗಿ- ರೋಗಿಯ ಕುಟುಂಬದಿಂದ ಧರಣಿ*

*ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ವಾರದಲ್ಲಿ 3 ದಿನ ನರರೋಗ ತಜ್ಞರಿಲ್ಲ!*

*ರೋಗಿ- ರೋಗಿಯ ಕುಟುಂಬದಿಂದ ಧರಣಿ*

ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಬಾಗಿಲಲ್ಲಿ ರೋಗಿ ಮತ್ತು ರೋಗಿಯ ಸಂಬಂಧಿಕರು ಇಂದು ಧರಣಿ ಆರಂಭಿಸಿದರು.

ಸಾಗರ ಮೂಲದ ಪಾರ್ಶ್ವವಾಯು ಪೀಡಿತ ರೋಗಿ ಚಿಕಿತ್ಸೆಗೆ ಮೆಗ್ಗಾನ್ ಆಸ್ಪತ್ರೆಗೆ ಬಂದಿದ್ದು, ವಾರದಲ್ಲಿ ಮೂರು ದಿನ ಮಾತ್ರ ನರರೋಗ ತಜ್ಞರು ಸಿಗುತ್ತಾರೆಂದು ಹೇಳಿ ಸಿಬ್ಬಂದಿ ಮನೆಗೆ ಹಿಂದಿರುಗಲು ಹೇಳಿದ್ದಾರೆ.

ಖಾಸಗಿ ನರ್ಸಿಂಗ್ ಹೋಂಗೆ ಹೋಗುವಷ್ಟು ಶಕ್ತಿಯಿಲ್ಲದ ಈ ರೋಗಿ ವಕೀಲ, ಸಾಮಾಜಿಕ ಹೋರಾಟಗಾರ ಕೆ.ಪಿ.ಶ್ರೀಪಾಲರಿಗೆ ಫೋನ್ ಮಾಡಿದ್ದಾರೆ. ಶ್ರೀಪಾಲ್ ಸಂಬಂಧಿಸಿದ ಮುಖ್ಯಸ್ಥರಿಗೆ ಫೋನ್ ಮಾಡಿದ್ದಾರೆ. ಅವರದು ಸ್ವಿಚ್ ಆಫ್ ಎಂದು ಬಂದಾಗ ಜಿಲ್ಲಾ ಸರ್ಜನ್ ಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ನೋಡೋಣ, ಹೇಳೋಣ ಎಂದು ಅವರೂ ನಿರ್ಲಕ್ಷ್ಯಿಸಿದ್ದಾರೆಂದು ತಿಳಿದು ಬಂದಿದೆ.

ಸಿಮ್ಸ್ ಕಾಲೇಜು, ಮೆಗ್ಗಾನ್ ಆಸ್ಪತ್ರೆ ಖಾಸಗಿ ಆಸ್ಪತ್ರೆಗಳಿಗೆ ರೋಗಿಗಳನ್ನು ಕಳಿಸಿಕೊಡುವ ಏಜೆನ್ಸಿಯಾಗಿರುವುದು ಖಂಡನೀಯ. ಅನ್ಯಮಾರ್ಗ ತುಳಿದ ವೈದ್ಯರೇ ಇಲ್ಲಿ ತುಂಬಿಕೊಂಡಿದ್ದು, ಬಡವರ ಆರೋಗ್ಯ ಇವರಿಗೆ ಬೇಕಿಲ್ಲ. ಕೂಡಲೇ ಈ ಬಗ್ಗೆ ಜಿಲ್ಲಾ ಮಂತ್ರಿಗಳು,ಸಂಸದರು, ಶಾಸಕರು ಗಮನಹರಿಸಿ ಸಮಸ್ಯೆ ಬಗೆಹರಿಸಬೇಕೆಂದು ಕೆ.ಪಿ.ಶ್ರೀಪಾಲ್ ಒತ್ತಾಯಿಸಿದ್ದಾರೆ.