ಜನವರಿ 16-18; ನಾಣ್ಯ, ಅಂಚೆಚೀಟಿ, ನೋಟುಗಳ ರಾಷ್ಟ್ರೀಯ ಸಮ್ಮೇಳನ ಶಿವಮೊಗ್ಗದಲ್ಲಿ…* *ಸರ್ ಎಂ.ವಿ, ಕಿತ್ತೂರು ಚನ್ನಮ್ಮ, ಸಿದ್ಧಗಂಗಾ ಶ್ರೀ, ಕನಕದಾಸ, ಕೆಂಪೇಗೌಡರ ನಾಣ್ಯಗಳನ್ನು ಬಿಡುಗಡೆ ಮಾಡಲು ಮಲೆನಾಡು ನಾಣ್ಯ ಮತ್ತು ಅಂಚೆ ಚೀಟಿ ಸಂಗ್ರಾಹಕರ ಸಂಘ ಒತ್ತಾಯ* *ಗಾಂಧೀಜಿ ಜೊತೆಗೆ ಅಂಬೇಡ್ಕರ್, ಸ್ವಾಮಿ ವಿವೇಕಾನಂದ, ಬಸವೇಶ್ವರ, ಸರ್ ಎಂ ವಿ, ತಿಲಕ್, ಭಗತ್ ಸಿಂಗ್, ಲಜಪತರಾಯ್, ಶಿವಾಜಿ, ಭಾವಚಿತ್ರ ಮುದ್ರಿಸುವಂತೆಯೂ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ ಸಂಘ*
*ಜನವರಿ 16-18; ನಾಣ್ಯ, ಅಂಚೆಚೀಟಿ, ನೋಟುಗಳ ರಾಷ್ಟ್ರೀಯ ಸಮ್ಮೇಳನ ಶಿವಮೊಗ್ಗದಲ್ಲಿ…*
*ಸರ್ ಎಂ.ವಿ, ಕಿತ್ತೂರು ಚನ್ನಮ್ಮ, ಸಿದ್ಧಗಂಗಾ ಶ್ರೀ, ಕನಕದಾಸ, ಕೆಂಪೇಗೌಡರ ನಾಣ್ಯಗಳನ್ನು ಬಿಡುಗಡೆ ಮಾಡಲು ಮಲೆನಾಡು ನಾಣ್ಯ ಮತ್ತು ಅಂಚೆ ಚೀಟಿ ಸಂಗ್ರಾಹಕರ ಸಂಘ ಒತ್ತಾಯ*
*ಗಾಂಧೀಜಿ ಜೊತೆಗೆ ಅಂಬೇಡ್ಕರ್, ಸ್ವಾಮಿ ವಿವೇಕಾನಂದ, ಬಸವೇಶ್ವರ, ಸರ್ ಎಂ ವಿ, ತಿಲಕ್, ಭಗತ್ ಸಿಂಗ್, ಲಜಪತರಾಯ್, ಶಿವಾಜಿ, ಭಾವಚಿತ್ರ ಮುದ್ರಿಸುವಂತೆಯೂ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ ಸಂಘ*
ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ, ವೀರರಾಣಿ ಕಿತ್ತೂರು ಚನ್ನಮ್ಮ, ಸಿದ್ದಗಂಗಾ ಮಠ ಪೂಜ್ಯಶ್ರೀ ಶಿವಕುಮಾರ ಸ್ವಾಮೀಜಿ, ಭಕ್ತ ಕನಕದಾಸ ಹಾಗೂ ಕೆಂಪೇಗೌಡರ ನಾಣ್ಯಗಳನ್ನು ಬಿಡುಗಡೆ ಮಾಡುವಂತೆ ಮಲೆನಾಡು ನಾಣ್ಯ ಮತ್ತು ಅಂಚೆಚೀಟಿ ಸಂಗ್ರಾಹಕರ ಸಂಘ ಪ್ರಧಾನಿ ನರೇಂದ್ರಮೋದಿ ಹಾಗೂ ಕೇಂದ್ರ ಸರ್ಕಾರವನ್ನು ದೇವದಾಸ್ ನಾಯಕ್, ವಿ.ಕೆ.ಜೈನ್ ಮತ್ತು ಎಸ್.ಚಂದ್ರಕಾಂತ್ ಒತ್ತಾಯಿಸಿದರು.
ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,
ಅದೇ ರೀತಿ ಈವರೆಗೆ ದೇಶದ ವಿವಿಧೆಡೆಗಳ ಮಹಾನ್ ವ್ಯಕ್ತಿಗಳ ವಿಶೇಷ ನಾಣ್ಯಗಳನ್ನು ಬಿಡುಗಡೆ ಮಾಡಿದ್ದು, ಅವುಗಳಲ್ಲಿ 5 ಮತ್ತು 10 ರೂ. ನಾಣ್ಯಗಳನ್ನು ಚಲಾವಣೆಗೆ ಬಿಡುಗಡೆ ಮಾಡುವಂತೆ ಸಂಘವು ಕೇಂದ್ರವನ್ನು ಆಗ್ರಹಿಸುತ್ತದೆ ಎಂದರು.
ಈ ಹಿಂದೆ ಯಾವುದೇ ವಿಶೇಷ ನಾಣ್ಯಗಳನ್ನು ಬಿಡುಗಡೆ ಮಾಡಿದ ಸಂದರ್ಭದಲ್ಲಿ 5 ಅಥವಾ 10 ರೂ. ನಾಣ್ಯಗಳನ್ನು ಚಲಾವಣೆಗೆ ಬಿಡಲಾಗುತ್ತಿತ್ತು. ಆದರೆ ಈಗ ಈ ನಿಯಮ ಕೈಬಿಟ್ಟಿರುವುದರಿಂದ ಇಂತಹ ಮಹಾನ್ ವ್ಯಕ್ತಿಗಳ ನಾಣ್ಯಗಳನ್ನು ಸಂಗ್ರಹಿಸುವುದು ದುಬಾರಿಯಾಗಿ ಪರಿಣಮಿಸಿದೆ. ಹೀಗಾಗಿ ಕೇಂದ್ರ ಸರ್ಕಾರ ಮಹಾನ್ ವ್ಯಕ್ತಿಗಳು ಸೇರಿದಂತೆ ಇತರೆ ವಿಶೇಷ ನಾಣ್ಯಗಳ ಜೊತೆಗೆ ಚಲಾವಣೆ ನಾಣ್ಯಗಳನ್ನು ಬಿಡುಗಡೆ ಮಾಡುವ ಮೂಲಕ ನಾಣ್ಯ ಸಂಗ್ರಾಹಕರಿಗೆ ಅನುಕೂಲ ಕಲ್ಪಿಸುವಂತೆ ಮನವಿ ಮಾಡಲಾಗಿದೆ ಎಂದರು.
ಪ್ರಪಂಚದ ಬಹುತೇಕ ದೇಶಗಳಲ್ಲಿ ನೋಟುಗಳ ಮೇಲೆ ಅಲ್ಲಿನ ವಿವಿಧ ಪ್ರಮುಖ ವ್ಯಕ್ತಿಗಳ ಚಿತ್ರಗಳನ್ನು ಮುದ್ರಿಸಲಾಗುತ್ತಿದೆ. ಆದರೆ ಭಾರತದಲ್ಲಿ ಮಹಾತ್ಮಗಾಂಧಿ ಹೊರತುಪಡಿಸಿದರೆ ಇತರೆ ಮಹಾನ್ ವ್ಯಕ್ತಿಗಳ ಭಾವಚಿತ್ರಗಳ ನೋಟುಗಳು ಮುದ್ರಣಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರವು ನೋಟುಗಳ ಮೇಲೆ ಸ್ವಾಮಿ ವಿವೇಕಾನಂದ, ಜಗಜ್ಯೋತಿ ಬಸವೇಶ್ವರ, ಸರ್ ಎಂ.ವಿಶ್ವೇಶ್ವರಯ್ಯ, ಬಾಲಗಂಗಾಧರ ತಿಲಕ್, ಭಗತ್ ಸಿಂಗ್, ಲಾಲಾ ಲಜಪತರಾಯ್, ಛತ್ರಪತಿ ಶಿವಾಜಿ, ಡಾ। ಅಂಬೇಡ್ಕರ್ರವರಂತಹ ಮಹಾನ್ ವ್ಯಕ್ತಿಗಳ ಭಾವಚಿತ್ರ ಮುದ್ರಿಸುವಂತೆ ಸಂಘವು ಆಗ್ರಹಿಸುತ್ತದೆ ಎಂದು ಹೇಳಿದರು.
ನಾಣ್ಯಗಳ ಮುದ್ರಣದಲ್ಲಿ ಕೇಂದ್ರಸರ್ಕಾರವು ತಾರತಮ್ಯ ನೀತಿ ಅನುಸರಿಸುತ್ತಿದ್ದು, ಕರ್ನಾಟಕದ ಬಸವೇಶ್ವರ, ಕವಿ ಮುದ್ದಣ ಮತ್ತು ಮೈಸೂರು ವಿವಿ ಜೊತೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಭಾವಚಿತ್ರದ ನಾಣ್ಯಗಳನ್ನು ಮಾತ್ರವೇ ಬಿಡುಗಡೆ ಮಾಡಿದ್ದು, ಬೇರೆ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಮಹಾನ್ ವ್ಯಕ್ತಿಗಳ ನಾಣ್ಯಗಳ ಬಿಡುಗಡೆ ಬೆರಳೆಣಿಕೆಯಷ್ಟು ಇಲ್ಲ ಎಂದು ಸಂಘವು ಆತಂಕ ವ್ಯಕ್ತಪಡಿಸಿದೆ.
ಕೂಡಲೇ ಮಹಾನ್ ವ್ಯಕ್ತಿಗಳ ನಾಣ್ಯಗಳನ್ನು ಚಲಾವಣೆಗೆ ಬಿಡುಗಡೆ ಮಾಡುವ ಮೂಲಕ ಕರ್ನಾಟಕ ರಾಜ್ಯಕ್ಕೆ ನ್ಯಾಯವೊದಗಿಸುವಂತೆ ಆಗ್ರಹಿಸುತ್ತದೆ ಎಂದರು.
ಜನವರಿ 16-18ರವರೆಗೆ ಸಂಘದಿಂದ ನಾಣ್ಯ, ಅಂಚೆಚೀಟಿ, ನೋಟುಗಳರಾಷ್ಟ್ರೀಯ ಸಮ್ಮೇಳನ ನಡೆಯಲಿದೆ. ಅಪರೂಪದ ನಾಣ್ಯಗಳು ಈ ಸಮ್ಮೇಳನದಲ್ಲಿ ಪ್ರದರ್ಶನಕ್ಕೆ ಇಡಲಿದ್ದು, ಪ್ರದರ್ಶನಕಾರರು, ಮಾರಾಟಗಾರರು ಸಹ ಭಾಗವಹಿಸಲಿದ್ದಾರೆ ಎಂದು ಸುಬ್ರಹ್ಮಣ್ಯ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸುಬ್ರಹ್ಮಣ್ಯ, ನಾಗರಾಜ್, ಮಹೇಂದ್ರ ಕುಮಾರ್ ಜೈನ್ ಉಪಸ್ಥಿತರಿದ್ದರು.