ಜುಲೈ 20 ರಂದು ಜಿಲ್ಲಾ ಯೋಗಾಸನ ಕ್ರೀಡಾಸ್ಪರ್ಧೆ*

*ಜುಲೈ 20 ರಂದು ಜಿಲ್ಲಾ ಯೋಗಾಸನ ಕ್ರೀಡಾಸ್ಪರ್ಧೆ*

ಆಗಸ್ಟ್ 23 ಮತ್ತು 24 – 2025 ರಂದು ಚಿತ್ರದುರ್ಗ ಜಿಲ್ಲೆಯಲ್ಲಿ ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆಯು ತನ್ನ 6ನೇ ವರ್ಷದ ರಾಜ್ಯ ಮಟ್ಟ ಯೋಗಾಸನ ಕ್ರೀಡಾ ಸ್ಪರ್ಧೆ ನಡೆಯಲಿದ್ದು ಈ ಸ್ಪರ್ಧೆಗೆ ಶಿವಮೊಗ್ಗ ಜಿಲ್ಲೆಯ ಯೋಗಾಪಟುಗಳನ್ನು ಆಯ್ಕೆ ಮಾಡಲು ಜುಲೈ 20ರ ಭಾನುವಾರ ನೆಹರೂ ಕ್ರೀಡಾಂಗಣದಲ್ಲಿ ಬೆಳಗ್ಗೆ 8 ಗಂಟೆಗೆ ಯೋಗಾಸನ ಸ್ಪರ್ಧೆ ಪ್ರಾರಂಭವಾಗಲಿದೆ ಎಂದು ಮುಖ್ಯ ಕಾರ್ಯದರ್ಶಿ ಬಿ.ಆರ್.ಮಹೇಂದ್ರ, ಅಧ್ಯಕ್ಷೆ ಅನ್ನಪೂರ್ಣ ಸತೀಶ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆಯು, ಯೋಗಾಸನ ಭಾರತ್, ವಿಶ್ವ ಯೋಗಾಸನ, ಭಾರತೀಯ ಒಲಿಂಪಿಕ್ ಅಸೋಸಿಯೇಷನ್‌ಗಳೊಂದಿಗೆ ಈ ಸ್ಪರ್ಧೆ ಸಂಯೋಜಿತವಾಗಿದೆ ಎಂದರು.

6 ವಯೋಮಿತಿಯ ವಿಭಾಗಗಳಲ್ಲಿ ಸ್ಪರ್ಧೆ ನಡೆಸಲಾಗುತ್ತಿದೆ. ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ಸ್ಪರ್ಧೆಗಳಿವೆ ಎಂದರು.

> ಸಬ್ ಜೂನಿಯರ್ ವಿಭಾಗ (10+ ರಿಂದ 14 ವರ್ಷಗಳು).

> ಜೂನಿಯರ್ ವಿಭಾಗ (14+ ರಿಂದ 18 ವರ್ಷಗಳು),

> ಸೀನಿಯರ್ ವಿಭಾಗ (18+ ರಿಂದ 28 ವರ್ಷಗಳು).

> ಸೀನಿಯರ್ ವಿಭಾಗ (28+ ರಿಂದ 35 ವರ್ಷಗಳು).

> ಸೀನಿಯರ್ B ವಿಭಾಗ (35+ ರಿಂದ 45 ವರ್ಷಗಳು).

> ಸೀನಿಯರ್ ವಿಭಾಗ (45+ ರಿಂದ 55 ವರ್ಷಗಳು

ಹೆಚ್ಚಿನ ಮಾಹಿತಿಗಾಗಿ 9901331588/8217803576
ಗೆ ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದು.