*ಮಾನಭಂಗ ಪ್ರಕರಣ* *ಆರೋಪಿ ಖುಲಾಸೆ* *ಮಾನಭಂಗದಿಂದ ಮಗು ಜನನ ಆಗಿದೆ ಎಂದು ಆರೋಪಿಸಿ ದೂರು ನೀಡಿದ್ದ ಯುವತಿ*

*ಮಾನಭಂಗ ಪ್ರಕರಣ*
*ಆರೋಪಿ ಖುಲಾಸೆ*

*ಮಾನಭಂಗದಿಂದ ಮಗು ಜನನ ಆಗಿದೆ ಎಂದು ಆರೋಪಿಸಿ ದೂರು ನೀಡಿದ್ದ ಯುವತಿ*

ಸಾಗರ : ತನಗೆ ಆರೋಪಿಯು ಮಾನಭಂಗ ಮಾಡಿ ಮಗುವಿನ ಜನ್ಮಕ್ಕೆ ಕಾರಣವಾಗಿದ್ದು, ಆರೋಪಿಗೆ ಸೂಕ್ತ ಶಿಕ್ಷೆ ನೀಡಬೇಕೆಂದು ಯುವತಿಯೋರ್ವಳು ದೂರು ನೀಡಿದ್ದ ಪ್ರಕರಣವನ್ನು ಮಾನ್ಯ ನ್ಯಾಯಾಧೀಶರು ವಜಾಗೊಳಿಸಿ ಆರೋಪಿಯನ್ನು ಬಿಡುಗಡೆಗೊಳಿಸಿದ್ದಾರೆ.
ತಾಲ್ಲೂಕಿನ ಸಿಗಂದೂರು ಸಮೀಪದ ಆವಿನಹಳ್ಳಿ ರಸ್ತೆಯ ಯುವತಿಯೋರ್ವಳು ಆರೋಪಿಯು ತನ್ನ ಮೇಲೆ ಅತ್ಯಾಚಾರ ಎಸಗಿ ಮಗುವಿನ ಜನನಕ್ಕೆ ಕಾರಣವಾಗಿದ್ದು, ತನಗೆ ಜೀವ ಬೆದರಿಕೆ ಹಾಕಲಾಗಿತ್ತು ಎಂದು ಸಾಗರ ಗ್ರಾಮಾಂತರ ಠಾಣೆ ಪೊಲೀಸರಿಗೆ ದಿನಾಂಕ 09-09-2020ರಂದು ದೂರು ನೀಡಿದ್ದಳು.
ಆರೋಪಿಯ ವಿರುದ್ದ ಐಪಿಸಿ ಸೆಕ್ಷನ್ 376(2)(ಎನ್) ಮತ್ತು 506ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣೆ ನಡೆಸಿದ ಶಿವಮೊಗ್ಗ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮತ್ತು 1ನೇ ಶೀಘ್ರ ವಿಲೇವಾರಿ ನ್ಯಾಯಾಲಯದ ನ್ಯಾಯಾಧೀಶರಾದ ನಿಂಗನಗೌಡ ಪಾಟೀಲ ಅವರು ಆರೋಪ ಸಾಬೀತಾಗದೆ ಇರುವುದರಿಂದ ಪ್ರಕರಣಗಳನ್ನು ವಜಾಗೊಳಿಸಿ ಆರೋಪಿಯನ್ನು ಬಿಡುಗಡೆಗೊಳಿಸಿದ್ದಾರೆ. ಆರೋಪಿಯ ಪರವಾಗಿ ಸಾಗರದ ಹಿರಿಯ ನ್ಯಾಯವಾದಿ ವಿ.ಶಂಕರ್ ವಾದ ಮಂಡಿಸಿದ್ದರು.