*ಅರ್ಹ ಮತದಾರರು ಎಸ್ ಐ ಆರ್ ನಲ್ಲುಳಿಸಲು ಕಾಂಗ್ರೆಸ್ ನಿಂದ ಯುದ್ಧೋಪಾದಿ ಕೆಲಸ;* *ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಮಾಜಿ ಎಂ ಎಲ್ ಸಿ ಆರ್.ಪ್ರಸನ್ನ ಕುಮಾರ್*
*ಅರ್ಹ ಮತದಾರರು ಎಸ್ ಐ ಆರ್ ನಲ್ಲುಳಿಸಲು ಕಾಂಗ್ರೆಸ್ ನಿಂದ ಯುದ್ಧೋಪಾದಿ ಕೆಲಸ;*
*ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಮಾಜಿ ಎಂ ಎಲ್ ಸಿ ಆರ್.ಪ್ರಸನ್ನ ಕುಮಾರ್*

ಶಿವಮೊಗ್ಗ ಜಿಲ್ಲೆಯಲ್ಲಿ ಎಸ್‌ಐಆರ್ ಜಾಗೃತಿ ಕಾರ್ಯಕ್ರಮ ಕಾಂಗ್ರೆಸ್ ಪಕ್ಷದಿಂದ ಯಶಸ್ವಿಯಾಗಿ ನಡೆಯುತ್ತಿದ್ದು, ಅರ್ಹ ಮತದಾರರು `ಕೈ’ಬಿಟ್ಟು ಹೋಗದಂತೆ ಪಕ್ಷದ ಬಿಎಲ್‌ಎಗಳು ಕೆಲಸ ಮಾಡುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ಏಳುಲಕ್ಷ ಎಮ್ಯೂನರೇಷನ್ ಫಾರಂಗಳನ್ನು ಮತದಾರರಿಗೆ ಅರ್ಜಿ ಕೊಡುವ ಕಾರ್ಯ ಶೇ.೯೫ರಷ್ಟು ಮುಗಿದಿದೆ. ಮತದಾರರ ಪಟ್ಟಿಯಿಂದ ಅರ್ಹರು ಹೊರಗೆ ಉಳಿಯಬಾರದು ಎಂಬ ಉದ್ದೇಶದಿಂದ ಕಾಂಗ್ರೆಸ್ ಹೈಕಮಾಂಡಿನ ಆದೇಶದಂತೆ ಕೆಲಸ ಮಾಡುತ್ತಿದ್ದೇವೆ. ನಮ್ಮ ಉದ್ದೇಶ ಅರ್ಹ ಮತದಾರರನ್ನು ಪಟ್ಟಿಯಲ್ಲಿ ಸೇರ್ಪಡೆಯಾಗುವಂತೆ ಮಾಡುವುದೇ ಆಗಿದೆ. ಆದರೆ ವಿರೋಧ ಪಕ್ಷಗಳು ಬಾಯಿ ಚಪಲಕ್ಕಾಗಿ ನಾವೇನೋ ಮಾಡುತ್ತಿದ್ದೇವೆ ಎಂಬಂತೆ ಮಾತನಾಡುತ್ತಿದ್ದಾರೆ. ಇದು ಖಂಡನೀಯ ಎಂದರು.
ಬಿಜೆಪಿ ಮತ್ತು ಚುನಾವಣಾ ಆಯೋಗ ಅವಸರದಲ್ಲಿ ಈ ನಿರ್ಧಾರವನ್ನು ಗೊಂಡಿತ್ತು. ಕಾಂಗ್ರೆಸ್ ಪಕ್ಷಕ್ಕೆ ಮತಹಾಕುವವರನ್ನೇ ಗುರಿಯಾಗಿಟ್ಟುಕೊಂಡು ಅವರನ್ನು ಹೊರಗಿಡುವಂತೆ ನೋಡಿಕೊಳ್ಳಲಾಗುತ್ತಿತ್ತು. ಆದರೆ ಕಾಂಗ್ರೆಸ್ ಪಕ್ಷ ಈಗ ಎಚ್ಚೆತ್ತುಕೊಂಡಿದೆ. ಅವರ ಯೋಚನೆ ಈಗ ಸಫಲವಾಗುವುದಿಲ್ಲ ಅದು ಅವರಿಗೆ ಈಗಾಗಲೇ ಕಸಿವಿಸಿ ತಂದಿದೆ. ಇನ್ನು ಕೇವಲ ೧೬ ದಿನಗಳು ಬಾಕಿ ಉಳಿದಿವೆ. ಅಷ್ಟರೊಳಗೆ ಎಸ್.ಐ.ಆರ್. ಪ್ರಕ್ರಿಯೆಯನ್ನು ಸಮರ್ಪಕವಾಗಿ ಮುಗಿಸಬೇಕಾಗಿದೆ. ಈಗ ನೀಡಿರುವ ಸಮಯ ಸಾಲದು ಅದನ್ನು ವಿಸ್ತರಿಸಬೇಕೆಂದು ನಾವು ಕೂಡ ಆಯೋಗಕ್ಕೆ ಮನವಿ ಮಾಡಿದ್ದೇವೆ ಎಂದರು.
ಎಸ್‌ಐಆರ್ ಪ್ರಕ್ರಿಯೆಗೆ ಬೇಕಾದ ದಾಖಲೆಗಳಲ್ಲಿ ಖಾಯಂ ನಿವಾಸಿ ಪತ್ರವೂ ಒಂದಾಗಿದ್ದು, ರಾಜ್ಯ ಸರ್ಕಾರ ಕೊಡುವ ಈ ಪತ್ರಕ್ಕೆ ಕೇಂದ್ರ ಸರ್ಕಾರ ಮಾನ್ಯತೆ ಕೊಡುತ್ತಿಲ್ಲ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಜವಳಿ ನಿಗಮದ ಅಧ್ಯಕ್ಷ ಕೆ.ಚೇತನ್‌ಗೌಡ, ಅಲೆಮಾರಿ ನಿಗಮದ ಅಧ್ಯಕ್ಷ ಜಿ.ಪಲ್ಲವಿ, ಪ್ರಮುಖರಾದ ಡಾ.ಶ್ರೀನಿವಾಸ್ ಕರಿಯಣ್ಣ, ದಕ್ಷಿಣ ಬ್ಲಾಕ್ ಅಧ್ಯಕ್ಷ ಕಲೀಂಪಾಷಾ, ಶಿವಾನಂದ್, ಶಿವಣ್ಣ ಸೇರಿದಂತೆ ಹಲವರು ಇದ್ದರು.


