*ಶಿವಮೊಗ್ಗದಲ್ಲೂ ಬಿಡಾಡಿ ವಾಹನಗಳ ವಿರುದ್ಧ ಪೊಲೀಸ್ ಕಾರ್ಯಾಚರಣೆ* *ನೋಟಿಸ್ ಅಂಟಿಸಿ ಗಡುವು ನೀಡಿದ ಎಸ್ ಪಿ ನಿಖಿಲ್.ಬಿ.*
*ಶಿವಮೊಗ್ಗದಲ್ಲೂ ಬಿಡಾಡಿ ವಾಹನಗಳ ವಿರುದ್ಧ ಪೊಲೀಸ್ ಕಾರ್ಯಾಚರಣೆ*
*ನೋಟಿಸ್ ಅಂಟಿಸಿ ಗಡುವು ನೀಡಿದ ಎಸ್ ಪಿ ನಿಖಿಲ್.ಬಿ.*
ಶಿವಮೊಗ್ಗದ ಆಲ್ಕೊಳ ಸರ್ಕಲ್ಲಿನ ಸುತ್ತಮುತ್ತ ನಿಂತಿರುವ ಬಿಡಾಡಿ ವಾಹನಗಳ ವಿರುದ್ಧ ಎಸ್ ಪಿ ನಿಖಿಲ್ ಬಿ. ರವರ ನೇತೃತ್ವದಲ್ಲಿಂದು ಬೆಳಿಗ್ಗೆ ಪೊಲೀಸ್ ಇಲಾಖೆ ಕಾರ್ಯಾಚರಣೆ ನಡೆಸಿತು.
ಒಟ್ಟು 59 ಬಿಡಾಡಿ ವಾಹನಗಳನ್ನು ಗುರುತಿಸಿ, ಆ ವಾಹನಗಳ ಮೇಲೆ ನೋಟಿಸ್ ಅಂಟಿಸಿದ ಎಸ್ ಪಿ ನಿಖಿಲ್, ನೀಡಿದ ಗಡುವಿನ ಒಳಗೆ ವಾಹನ ಸ್ಥಳಾಂತರಗೊಳ್ಳದಿದ್ದರೆ ಪೊಲೀಸ್ ಇಲಾಖೆಯೇ ಆ ವಾಹನಗಳನ್ನು ತನ್ನ ಸುಪರ್ದಿಗೆ ಪಡೆದು, ಕಾನೂನಾತ್ಮಕ ಕ್ರಮ ಕೈಗೊಳ್ಳುವುದೆಂದು ಹೇಳಿದರು.
ಈ ಕಾರ್ಯಾಚರಣೆಯಲ್ಲಿ ಟ್ರಾಫಿಕ್ ಇನ್ಸ್ ಪೆಕ್ಟರ್ ದೇವರಾಜ್ ಸೇರಿದಂತೆ ಹಲವು ಅಧಿಕಾರಿಗಳಿದ್ದರು.


