*ಶಿವಮೊಗ್ಗ ಟ್ರಾಫಿಕ್ ಪೊಲೀಸ್ ಇನ್ಸ್ ಪೆಕ್ಟರ್ ದೇವರಾಜ್ ನೇತೃತ್ವದಲ್ಲಿ ಸಿಟಿ ಬಸ್ ಗಳ ವಿರುದ್ಧ ಸ್ಪೆಷಲ್ ಡ್ರೈವ್* *ಕುಡಿದು ಸಿಟಿಬಸ್ ಚಲಾಯಿಸುತ್ತಿದ್ದ ಮೂವರ ವಿರುದ್ಧ ಕೇಸ್ ದಾಖಲು*

*ಶಿವಮೊಗ್ಗ ಟ್ರಾಫಿಕ್ ಪೊಲೀಸ್ ಇನ್ಸ್ ಪೆಕ್ಟರ್ ದೇವರಾಜ್ ನೇತೃತ್ವದಲ್ಲಿ ಸಿಟಿ ಬಸ್ ಗಳ ವಿರುದ್ಧ ಸ್ಪೆಷಲ್ ಡ್ರೈವ್*

*ಕುಡಿದು ಸಿಟಿಬಸ್ ಚಲಾಯಿಸುತ್ತಿದ್ದ ಮೂವರ ವಿರುದ್ಧ ಕೇಸ್ ದಾಖಲು*

ಶಿವಮೊಗ್ಗ ಟ್ರಾಫಿಕ್ ಪೊಲೀಸ್ ಇನ್ಸ್ ಪೆಕ್ಟರ್ ದೇವರಾಜ್ ನೇತೃತ್ವದಲ್ಲಿ ಇಂದು ಬೆಳಿಗ್ಗೆಯಿಂದ ಸಿಟಿ ಬಸ್ ಗಳ ವಿರುದ್ಧ ಸ್ಪೆಷಲ್ ಡ್ರೈವ್ ನಡೆದು ಗಮನ ಸೆಳೆಯಿತು.

ಶಿವಮೊಗ್ಗದ 45 ಸಿಟಿ ಬಸ್ ಗಳ ಮೇಲೆ ಪೊಲೀಸರು ಕಾರ್ಯಾಚರಣೆ ನಡೆಸಿದರು. ಇವುಗಳಲ್ಲಿ ಸುಸ್ಥಿತಿಯಲ್ಲಿಲ್ಲದ ಸಿಟಿ ಬಸ್ ಗಳಿಗೆ ಎಚ್ಚರಿಕೆ ನೀಡಿದ್ದಲ್ಲದೇ, ಮಹಿಳಾ ಸುರಕ್ಷತೆ ಬಗ್ಗೆಯೂ ಪಬ್ಲಿಕ್ ಐ ಕುರಿತ ಜಾಗೃತಿ ಮೂಡಿಸಲಾಯಿತು.

ಕುಡಿದು ಸಿಟಿ ಬಸ್ ಚಲಾಯಿಸುತ್ತಿದ್ದ ಮೂವರು ಚಾಲಕರ ವಿರುದ್ಧ ಡ್ರಂಕ್ ಆ್ಯಂಡ್ ಡ್ರೈವ್(DD) ಪ್ರಕರಣ ಕೂಡ ದಾಖಲಿಸಲಾಗಿದೆ ಎಂದು ಸಿಪಿಐ ದೇವರಾಜ್ ತಿಳಿಸಿದ್ದಾರೆ.