ಛೇರ್ಮನ್ ಡಾ!! ಬಿ. ಸಿ. ಪೃಥ್ವಿ ಪತ್ರಿಕಾಗೋಷ್ಠಿಯಲ್ಲಿ ವಿವರಣೆ ನ. 29: ಮಾತೃವಾತ್ಸಲ್ಯ ಮಲ್ಟಿ ಸ್ಪೆಷಲಿಟಿ ಆಸ್ಪತ್ರೆ ಉದ್ಘಾಟನೆ

ಛೇರ್ಮನ್ ಡಾ!! ಬಿ. ಸಿ. ಪೃಥ್ವಿ ಪತ್ರಿಕಾಗೋಷ್ಠಿಯಲ್ಲಿ ವಿವರಣೆ

ನ. 29: ಮಾತೃವಾತ್ಸಲ್ಯ ಮಲ್ಟಿ ಸ್ಪೆಷಲಿಟಿ ಆಸ್ಪತ್ರೆ ಉದ್ಘಾಟನೆ

ಶಿವಮೊಗ್ಗ : ನಗರದ ಪಾರ್ಕ್ ಬಡಾವಣೆಯಲ್ಲಿರುವ ಮಾತೃವಾತ್ಸಲ್ಯ ಹೆಲ್ತ್‌ಕೇರ್ ಆಸ್ಪತ್ರೆಯು ನೂರು ಹಾಸಿಗೆಗಳ ಮಲ್ಟಿ ಸ್ಪೆಷಲಿಟಿ ಆಸ್ಪತ್ರೆಯಾಗಿ ಪರಿವರ್ತಿತವಾಗಿದ್ದು ನ. 29ನೇ ಭಾನುವಾರದಂದು ಉದ್ಘಾಟನೆಯಾಗಲಿದೆ.

ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಆಸ್ಪ ತ್ರೆಯ ಛೇರ್ಮನ್ ಡಾ!! ಬಿ. ಸಿ. ಪೃಥ್ವಿ, ಶಿವಮೊಗ್ಗ ಹಿರಿಯ ವೈದ್ಯರುಗಳಾದ ಡಾ. ಪಿ. ನಾರಾಯಣ, ಡಾ. ಎಸ್. ಐ. ಬಿರಾದರ್, ಡಾ. ನಿರ್ಮಲ ಹೆಚ್.ಟಿ., ಡಾ. ರಜನಿ ಎ. ಪೈ, ಡಾ. ಎ. ಶಿವರಾಮಕೃಷ್ಣ, ಡಾ. ಪಿ. ಲಕ್ಷ್ಮೀನಾರಾಯಣ ಆಚಾರ್, ಡಾ. ಧನಂಜಯ್‌ ಸರ್ಜಿ ಇವರುಗಳಿಂದ ಉದ್ಘಾಟನೆಯ ಸಮಾರಂಭವನ್ನು ಏರ್ಪಡಿಸಲಾಗಿದೆ. ಬೆಳಿಗ್ಗೆ 11:30ಕ್ಕೆ ಉದ್ಘಾಟನೆ ಆಯೋಜಿಸಲಾಗಿದೆ ಎಂದರು.
ನಮ್ಮ ಆಸ್ಪತ್ರೆಯಲ್ಲಿ “ಜನರಲ್ ಮೆಡಿಸಿನ್, ಹೃದಯರೋಗ, ಜನರಲ್ ಹಾಗೂ ಲ್ಯಾಪ್ರೋಸ್ಕೋಪಿಕ್ ಸರ್ಜರಿ, ಮೂಳೆ ರೋಗ, ಮಕ್ಕಳ ಚಿಕಿತ್ಸಾ, ಪ್ರಸೂತಿ ಮತ್ತು ಸ್ತ್ರೀರೋಗ, ಮೂತ್ರರೋಗ, ಚರ್ಮರೋಗ, ನರರೋಗ, ಮೆದುಳು ಶಸ್ತ್ರಚಿಕಿತ್ಸೆ ವಿಭಾಗಗಳು ಹಾಗೂ 24×7 ಅಪಘಾತ ಆರೈಕೆ, 24×7 ತುರ್ತಚಿಕಿತ್ಸಾ ಸೇವೆ, 24×7 ಕ್ಯಾತ್‌ಲ್ಯಾಬ್, 24×7 ಆಂಬುಲೆನ್ಸ್ ಸೇವೆ, 24×7 ಸಿಟಿಸ್ಕ್ಯಾನ್ / ಎಕ್ಸ್-ರೇ / ಇಕೋ ಸ್ಕ್ಯಾನ್, 24×7 ಫಾರ್ಮಸಿ, ಲ್ಯಾಬೋರೇಟರಿ ಮತ್ತು ಡಯಾಗೋಸ್ಟಿಕ್ ಸೇವೆಗಳು” ಲಭ್ಯವಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಮಾತೃವಾತ್ಸಲ್ಯ ಹೆಲ್ತ್‌ರ್‌ನ ಛೇರ್‌ಮನ್ ಆದ ಡಾ. ಪೃಥ್ವಿ ಬಿ.ಸಿ. ಹಾಗೂ ಹೃದಯ ವಿಭಾಗದ ನಿರ್ದೇಶಕರಾದ ಡಾ. ಮಹೇಶ್‌ ಮೂರ್ತಿ ಬಿ. ಆರ್., ಆಸ್ಪತ್ರೆಯ ತಜ್ಞ ವೈದ್ಯರುಗಳಾದ ಡಾ. ಅಮಿತ ಹೆಗ್ಡೆ, ಡಾ. ಗೀತಾ ರವಿ, ಡಾ. ನಾಗಮಣಿ ಎಂ. ಸಿ., ಡಾ. ಮಿಥುನ್ ಎನ್. ಕಗಲ್ಕರ್, ಡಾ. ಸಂತೋಷ್ ಕೊಪ್ಪಳ್, ಡಾ. ಪಿಯೂಷ್ ಎಂ. ಕವಾಡ್, ಡಾ. ಸಚಿನ್ ಉತ್ನಾಳ್, ಡಾ. ಭರತ್ ಜಿ. ಓ.. ಡಾ. ನಿತಿನ್ ಎಸ್. ಶಾಗಲೆ, ಡಾ. ವಿದ್ಯಾ ಬಿ. ಯು. ಡಾ. ಸಿಂಧು ರಶ್ಮಿ ಜಿ. ಎ., ಡಾ. ಪ್ರಾಂಜಲ್ ಮರ್ಲೇಚಾ ಅವರು ಉಪಸ್ಥಿತರಿದ್ದರು.