*ಬೈಕ್ ಕಳ್ಳನನ್ನು ಬಂಧಿಸಿ 3 ಬೈಕ್ ವಶಕ್ಕೆ ಪಡೆದ ಪೊಲೀಸರು* *ದೊಡ್ಡಪೇಟೆ ಇನ್ಸ್ ಪೆಕ್ಟರ್ ವೈ.ಸತ್ಯನಾರಾಯಣ್ ತಂಡಕ್ಕೆ ಅಭಿನಂದಿಸಿದ ಎಸ್ ಪಿ*
*ಬೈಕ್ ಕಳ್ಳನನ್ನು ಬಂಧಿಸಿ 3 ಬೈಕ್ ವಶಕ್ಕೆ ಪಡೆದ ಪೊಲೀಸರು*
*ದೊಡ್ಡಪೇಟೆ ಇನ್ಸ್ ಪೆಕ್ಟರ್ ವೈ.ಸತ್ಯನಾರಾಯಣ್ ತಂಡಕ್ಕೆ ಅಭಿನಂದಿಸಿದ ಎಸ್ ಪಿ*
ಬೈಕ್ ಕಳ್ಳನನ್ನು ಬಂಧಿಸಿರುವ ಶಿವಮೊಗ್ಗದ ದೊಡ್ಡಪೇಟೆ ಪೊಲೀಸರು, 1.14 ಲಕ್ಷ ರೂ.,ಗಳ ಮೌಲ್ಯದ 3 ಬೈಕ್ ಗಳನ್ನು ವಶ ಪಡಿಸಿಕೊಂಡಿದ್ದಾರೆ.
ಬಂಧಿತ ಕಳ್ಳ ಶಿವಮೊಗ್ಗ ಸಮೀಪದ ಪಿಳ್ಳಂಗಿರಿ ಹೊಸಮನೆ ತಾಂಡಾದ ಆರ್ ರಂಗನಾಥ್ ಆಗಿದ್ದು, ಕಳೆದ ಜುಲೈ 30ರಂದು ಮನೆಯ ಗೇಟ್ ಬಳಿ ನಿಲ್ಲಿಸಿದ್ದ ಪ್ಯಾಷನ್ ಪ್ಲಸ್ ಬೈಕ್ ಕಳ್ಳತನದ ಸಂಬಂಧ ಹೆಚ್.ಚಂದ್ರಶೇಖರ್ ದೂರು ದಾಖಲಿಸಿದ್ದರು.
ಇನ್ಸ್ ಪೆಕ್ಟರ್ ವೈ.ಸತ್ಯನಾರಾಯಣ್ ಮಾರ್ಗದರ್ಶನದಲ್ಲಿ ಕ್ರೈಂ ಪಿಎಸ್ ಐ ಮಂಜುನಾಥ್, ಅಂಬಿಗೇರ್, ಎ ಎಸ್ ಐ ನಾಗರಾಜ್, ಹೆಚ್ ಸಿ ಸಂದೀಪ, ಸಿ ಹೆಚ್ ಸಿ ಬಸವರಾಜ್ ಹೊರಗಿ, ಸಿಪಿಸಿ ಗುರುನಾಯ್ಕ, ಮನೋಹರ್, ಪುನೀತ್ ರಾವ್ ಒಳಗೊಂಡಂತೆ ತಂಡ ರಚಿಸಲಾಗಿತ್ತು.
ಈ ತಂಡ ಪ್ಯಾಷನ್ ಪ್ಲಸ್ ಬೈಕ್ ಜೊತೆ ಎರಡು ಸ್ಪ್ಲೆಂಡರ್ ಬೈಕ್ ಗಳನ್ನು ಕೂಡ ಅಮಾನತು ಪಡಿಸಿಕೊಂಡಿದೆ. ಎಸ್ ಪಿ ನಿಖಿಲ್ ಈ ತಂಡವನ್ನು ಅಭಿನಂದಿಸಿದ್ದಾರೆ.


