ಮೇ1ರಿಂದ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಸೇವೆ ಸ್ಥಗಿತಗೊಳಿಸಲಿದೆಯೇ ಇಂಡಿಗೋ ವಿಮಾನ?!* *ಸಿಬ್ಬಂದಿಗಳಿಗೆ ಬೇರೆ ಕೆಲಸ ನೋಡಿಕೊಳ್ಳಿ ಎನ್ನಲಾಗಿದೆಯೇ?*
*ಮೇ1ರಿಂದ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಸೇವೆ ಸ್ಥಗಿತಗೊಳಿಸಲಿದೆಯೇ ಇಂಡಿಗೋ ವಿಮಾನ?!*
*ಸಿಬ್ಬಂದಿಗಳಿಗೆ ಬೇರೆ ಕೆಲಸ ನೋಡಿಕೊಳ್ಳಿ ಎನ್ನಲಾಗಿದೆಯೇ?*
ಶಿವಮೊಗ್ಗದಿಂದ ಬೆಂಗಳೂರಿಗೆ ಪ್ರಯಾಣಿಸುವ ಪ್ರಯಾಣಿಕರ ಕುಚ್ಚಿಕ್ಕೂ ಆಗಿರುವ ಇಂಡಿಗೋ ಕಂಪನಿಯ ವಿಮಾನಗಳ ಹಾರಾಟ ಮೇ1 ರಿಂದ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ರದ್ದಾಗಲಿದೆಯೇ?!
ಹಾಗೊಂದು ಸುದ್ದಿ ಹೊರ ಬಿದ್ದಿದ್ದು, ಈ ಇಂಡಿಗೋ ವಿಮಾನ ನಂಬಿಕೊಂಡು ಕೆಲಸ ಮಾಡುತ್ತಿರುವ ಸಿಬ್ಬಂದಿಗಳನ್ನು ಜಾಬ್ ನಿಂದ ಹೊರ ಹೋಗುವಂತೆ ಸೂಚಿಸಲಾಗಿದೆ ಎಂಬ ಆತಂಕದ ಸುದ್ದಿ ಚರ್ಚೆಯಲ್ಲಿದೆ.
ರಾಜಕೀಯ ಕಾರಣಗಳಿಂದಾಗಿ ಇಂಡಿಗೋ ವಿಮಾನಗಳ ಹಾರಾಟ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಸ್ಥಗಿತಗೊಳ್ಳುತ್ತಿರುವುದು ದೊಡ್ಡ ಆತಂಕಕ್ಕೆ ಕಾರಣವಾಗಬಹುದು.
ಈವರೆಗೂ ಸಂಸ್ಥೆಗಳ ಅಧಿಕೃತ ಸುದ್ದಿ ಹೊರಬಿದ್ದಿಲ್ಲವಾದರೂ ಮೇ1 ರಿಂದ ಬೇರೆ ಕೆಲಸ ನೋಡಿಕೊಳ್ಳಿ ಎಂಬ ಎಚ್ಚರಿಕೆ ನೀಡಲಾಗಿದೆ ಎಂದೇ ಹೇಳಲಾಗುತ್ತಿದೆ.
ಕಳೆದ ವರ್ಷ ಲಾಭದಾಯಕವಾಗಿಯೇ ಇದ್ದ ಇಂಡಿಗೋ ವಿಮಾನಗಳ ಹಾರಾಟ (ಅಂದರೆ, ಕೋಟಿ ರೂ.,ಗಳಿಗೂ ಹೆಚ್ಚಿನ ಕಮಾಯಿ ಮಾಡಿಕೊಟ್ಟಿದ್ದ ) ಏಕಾಏಕಿ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಸೇವೆ ಸ್ಥಗಿತಗೊಳಿಸಿದರೆ ನೂರಾರು ಸಿಬ್ಬಂದಿಗಳ ಜೀವನಕ್ಕೆ ತೊಂದರೆಯಾಗುವುದಲ್ಲದೇ ಸುಖ ಪ್ರಯಾಣ ಮಾಡುವ ಪ್ರಯಾಣಿಕರೂ ಕಣ್ಣೀರು ಹಾಕುವುದು ಗ್ಯಾರಂಟಿ…


