ಇ-ಸ್ವತ್ತು ಹೆಸರಲ್ಲಿ ಅವಾಂತರ;**ಡಾಟಾ ಎಂಟ್ರಿ ಆಪರೇಟರ್ ಗಳದ್ದೇ ಇಲ್ಲಿ ಸ್ವರ್ಗ!**ಏನೇನು ನಡೆಯುತ್ತಿದೆ ಇಲ್ಲಿ?**ಬಟಾ ಬಯಲಾದ ಅಣ್ತಂಗೀಸ್!*

*ಇ-ಸ್ವತ್ತು ಹೆಸರಲ್ಲಿ ಅವಾಂತರ;*

*ಡಾಟಾ ಎಂಟ್ರಿ ಆಪರೇಟರ್ ಗಳದ್ದೇ ಇಲ್ಲಿ ಸ್ವರ್ಗ!*

*ಏನೇನು ನಡೆಯುತ್ತಿದೆ ಇಲ್ಲಿ?*

*ಬಟಾ ಬಯಲಾದ ಅಣ್ತಂಗೀಸ್!*

ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಇ-ಸ್ವತ್ತು ಮೊದಲೇ ಸಾರ್ವಜನಿಕ ಆಪತ್ತುಗಳನ್ನು ಸೃಷ್ಟಿಸಿದೆ. ಜನ ಇ- ಸ್ವತ್ತಿನ ಕಾರಣಕ್ಕಾಗಿ ಕಂಗಾಲಾಗಿದ್ದರೆ, ಇ- ಸ್ವತ್ತು ಆಗೇ ಬಿಟ್ಟಿತೆಂಬ ಸಂತೋಷದಲ್ಲಿದ್ದಾಗಲೇ ಗೊತ್ತಾಗುತ್ತೆ- ತಮ್ಮ ಕೈ ಸೇರಿದ ಇ- ಸ್ವತ್ತಿನ ಖಾತೆಯ ಹಾಳೆಯಲ್ಲಿ ತಪ್ಪು ತಪ್ಪು ಎಂಟ್ರಿ!

ಶಿವಮೊಗ್ಗ ಮಹಾನಗರ ಪಾಲಿಕೆಯ ಕಂದಾಯ ವಿಭಾಗದಲ್ಲಿ ಇ- ಸ್ವತ್ತಿನ ಸಾರ್ವಜನಿಕ ಪರದಾಟವನ್ನೂ ಇ- ಸ್ವತ್ತು ಮಾಡಿಕೊಡುವ ಮಧ್ಯವರ್ತಿಗಳು ಹಾಗೂ ಡಾಟಾ ಎಂಟ್ರಿ ಕಂಪ್ಯೂಟರ್ ಆಪರೇಟರ್ ಗಳ ಏಕಕಾಲದಲ್ಲಿ ಇಲ್ಲಿ ಕಾಣಬಹುದು.

ದಿನನಿತ್ಯ ರೊಚ್ಚಿಗೇಳುತ್ತಿರುವ ಸಾರ್ವಜನಿಕರು ಆಗೇ ಹೋಯ್ತು ಇ- ಖಾತೆ ಅಂದುಕೊಂಡಾಗ ಡಾಟಾ ಆಪರೇಟರ್ ಗಳ ತಪ್ಪು ತಪ್ಪು ಮಾಹಿತಿ ಟೈಪಿಸುವುದರಿಂದ ಮತ್ತೆ ಮತ್ತೆ ಮಹಾ ತೊಂದರೆಗೆ ಒಳಗಾಗುತ್ತಿದ್ದಾರೆ.

ಇ- ಸ್ವತ್ತಿನ ಕೆಲಸ ಮಾಡಲೆಂದೇ ರೆವಿನ್ಯೂ ವಿಭಾಗದಲ್ಲಿ ಲೀಲಾ, ಶಿಲ್ಪಾ, ರಾಧಾ, ಭವ್ಯಾ, ಕಾವ್ಯ, ಗೀತಾ, ದೀಪಾ, ಕವಿತಾ, ಸಂಧ್ಯಾ, ಅರಕೇಶ ಎಂಬ ಡಾಟಾ ಎಂಟ್ರಿ ಆಪರೇಟರ್ ಗಳ ದೊಡ್ಡ ದಂಡೇ ಇದೆ. ಇವರಲ್ಲಿ ಕೆಲವರಿಗೆ ನೆಟ್ಟಗೆ ಕೆಲಸ ಬರುವುದಿಲ್ಲವೋ ಅಥವಾ ಬೇಕಂತಲೇ ಸಾರ್ವಜನಿಕರಿಗೆ ತೊಂದರೆ ಕೊಡಲು ಫೋಟೋ ಹಾಕುವ ಜಾಗದಲ್ಲಿ ಆಧಾರ್ ಕಾರ್ಡ್, ಅಳತೆ ಜಾಗದಲ್ಲಿ ಮತ್ತೇನೇನೋ ಟೈಪಿಸಿ ಸಾರ್ವಜನಿಕರಿಗೆ ನೀಡುತ್ತಿದ್ದಾರೆ. ಮತ್ತೆ ಮತ್ತೆ ಉಗಿಸಿಕೊಳ್ಳುತ್ತಿದ್ದಾರೆ.

ಕೊಡಬೇಕಿರುವುದನ್ನು ಕೊಟ್ಟರೂ ಕೆಲವರು ಅತಿ ಆಸೆಗೆ ಬಿದ್ದಿದ್ದಾರೆ. ಯಾವ ಹೆದರಿಕೆಯೂ ಇಲ್ಲದೇ ಯುಪಿಐ ಮುಖಾಂತರವೂ ಹಣ ಹಾಕಿಸಿಕೊಳ್ಳುತ್ತಿದ್ದಾರೆ. ಇಲ್ಲಿ ಹೇಳೋರು, ಕೇಳೋರು ಯಾರೂ ಇಲ್ಲ ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ ಸಾರ್ವಜನಿಕರು.

ಕೆಲ ಡಾಟಾ ಆಪರೇಟರ್ ಗಳ ಗಂಡಂದಿರೇ ಇ- ಖಾತಾ ದಲ್ಲಾಳಿಗಳಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಮಾಹಿತಿಯೂ ಇದೆ. ಆಡಳಿತ ಶಾಖೆಯಿಂದ ಬಹಳಷ್ಟು ಜನರ ಪ್ರಭಾವ ಹಾಕಿಸಿ ಇತ್ತೀಚೆಗಷ್ಟೇ ರೆವಿನ್ಯೂ ವಿಭಾಗಕ್ಕೆ ಬಂದು ಕುಳಿತ ಮಹಿಳೆ ಈಗಾಗಲೇ ಅಂಗಡಿ ಓಪನ್ ಮಾಡಿ ಕುಳಿತಿದ್ದಾರೆ!

ಇವತ್ತು ಇದೇ ರೆವಿನ್ಯೂ ವಿಭಾಗದಲ್ಲಿರೋ ಡಾಟಾ ಎಂಟ್ರಿ ಆಪರೇಟರ್ ಮತ್ತು ಎಲೆಕ್ಟ್ರಿಕಲ್ ವಿಭಾಗದ ಲವ್ವಿಡವ್ವಿಯೋ ಅಣ್ತಂಗೀಸೋ ಪ್ರಕರಣ ಸಾರ್ವಜನಿಕರೆದುರೇ ಬಟಾ ಬಯಲಾಗಿರುವುದು ದುರಂತವೇ ಸೈ…