ರಾಜ್ಯ ಕಾಂಗ್ರೆಸ್ ವಕ್ತಾರರೂ ಮಾಜಿ ಸಂಸದ, ಶಾಸಕರೂ ಆದ ಆಯನೂರು ಮಂಜುನಾಥ್ ಪತ್ರಿಕಾಗೋಷ್ಠಿ ದ್ವೇಷ ಭಾಷಣದಿಂದ ಆರಗ- ಈಶ್ವರಪ್ಪ- ಚನ್ನಿಗಷ್ಟೇ ಸಮಸ್ಯೆ ಪೊಲೀಸ್ ಇಲಾಖೆಗೆ 13 ತಿಂಗಳ ಸಂಬಳ-ಸ್ವಾಗತಾರ್ಹ ಔರಾದ್ಕರ್ ವರದಿಯಿಂದ ಪೊಲೀಸರಿಗೆ ತೊಂದರೆ ರಿಸ್ಕ್ ಅಲೋಯನ್ಸ್ ಸರಿ ಸಮಾನವಾಗಿ ಜಾರಿಗೊಳಿಸಿ
ರಾಜ್ಯ ಕಾಂಗ್ರೆಸ್ ವಕ್ತಾರರೂ ಮಾಜಿ ಸಂಸದ, ಶಾಸಕರೂ ಆದ ಆಯನೂರು ಮಂಜುನಾಥ್ ಪತ್ರಿಕಾಗೋಷ್ಠಿ
ದ್ವೇಷ ಭಾಷಣದಿಂದ ಆರಗ- ಈಶ್ವರಪ್ಪ- ಚನ್ನಿಗಷ್ಟೇ ಸಮಸ್ಯೆ
ಪೊಲೀಸ್ ಇಲಾಖೆಗೆ 13 ತಿಂಗಳ ಸಂಬಳ-ಸ್ವಾಗತಾರ್ಹ
ಔರಾದ್ಕರ್ ವರದಿಯಿಂದ ಪೊಲೀಸರಿಗೆ ತೊಂದರೆ
ರಿಸ್ಕ್ ಅಲೋಯನ್ಸ್ ಸರಿ ಸಮಾನವಾಗಿ ಜಾರಿಗೊಳಿಸಿ

ರಾಜ್ಯ ಸರ್ಕಾರ ಕಳೆದ ಅಧಿವೇಶನದಲ್ಲಿ ಸಾಮಾಜಿಕ ಸ್ವಾಸ್ಥ್ಯ ಗಮನದಲ್ಲಿಟ್ಟುಕೊಂಡು ದ್ವೇಷ ಭಾಷಣ ಮಾಡುವವರ ವಿರುದ್ಧ ಮಸೂದೆ ಪಾಸ್ ಮಾಡಿದೆ. ಬಿಜೆಪಿ ಪಕ್ಷ ಹೊರತುಪಡಿಸಿ ಎಲ್ಲರೂ ಮೌನವಾಗಿ ಸ್ವಾಗತಿಸಿದ್ದಾರೆ.
ದ್ವೇಷಭಾಷಣ ಮಾಡುವುದೇ ನಮ್ಮ ಹಕ್ಕು ಎಂಬಂತೆ ಬಿಜೆಪಿ ಪ್ರತಿಭಟನೆ ಮಾಡುತ್ತಿದೆ. ದ್ವೇಷ ಭಾಷಣ ಮಾಡುವುದೇ ತಮ್ಮ ಮೂಲಭೂತ ಹಕ್ಕು ಎಂದು ರಾಷ್ಟ್ರೀಯ ಪಕ್ಷವಾಗಿ ಪ್ರತಿಭಟಿಸುತ್ತಿರುವುದು ಖಂಡನೀಯ
ಮಸೂದೆಯಿಂದ ಬಿಜೆಪಿಯ ಕೆಲ ನಾಯಕರಿಗೆ, ಸಿದ್ದರಾಮಯ್ಯರ ರುಂಡ ಚೆಂಡಾಡ್ತೇನೆ, ಕತ್ತಿ ಕೊಡಿ ಕಡಿದು ಬಿಡ್ತೇನೆ ಎಂದವರಿಗೆ, ಸದನದಲ್ಲಿ ಪ್ರಾಸ್ಟಿಟ್ಯೂಟ್ ಎನ್ನುವವರಿಗೆ ತೊಂದರೆಯಾಗಿದೆ. ಲಂಗು ಲಗಾಮಿಲ್ಲದ ನಾಲಿಗೆಗೆ ಬೀಗಬಿದ್ದಿದೆ. ಹೊಸ ಕನ್ನಡ ಟೀಚರ್ ಗಳನ್ನು ಹುಡುಕುತ್ತಿದ್ದಾರೆ ಕೆಲವರು.
ದ್ವೇಷ ಪ್ರಚೋದಕರಿಗೆ ಕಾನೂನಿನ ಶಿಕ್ಷೆ ಖಚಿತ. ಗಲಭೆ ನಿಯಂತ್ರಿಸಲು, ಅನ್ಯೋನ್ಯ ವಾತಾವರಣ ನಿರ್ಮಿಸಲು ಈ ಮಸೂದೆ ಬಂದಿದೆ. ಇಂಥ ಮಸೂದೆ ತರಲು ಕೆಟ್ಟವಾತಾವರಣ ಸೃಷ್ಟಿಯಾಗಿದ್ದೇ ಬೇಸರದ ಸಂಗತಿ. ಇಂಥ ಮಸೂದೆ ಸ್ವಾಗತಾರ್ಹ.
ರಕ್ತದ ಅಭಿಷೇಕ ಮಾಡಿ ಕಾರ್ಯಕ್ರಮ ಮಾಡ್ತೀನಿ ಅಂತ ಶಾಸಕರೊಬ್ಬರು ಮಾತಾಡ್ತಿದ್ದರು. ಜಾತಿನಿಂದನೆ, ಧರ್ಮನಿಂದನೆ ಈ ಶತಮಾನದಲ್ಲಿ ಮಾತಾಡಿದ್ರೆ ತಲೆತಗ್ಗಿಸುವ ವಿಚಾರ. ಇಂಥ ಮಸೂದೆಯನ್ನು ಸ್ವಾಗತಿಸಬೇಕು. ಅಪಪ್ರಚಾರ ನಿಲ್ಲಿಸಬೇಕು. ಮತ್ತೆ ಮತ್ತೆ ದ್ವೇಷ ಭಾಷಣ ಮಾಡುವಂಥ ಪ್ರಯತ್ನ ನಿಲ್ಲಿಸಬೇಕು.
ಆರಗ ಜ್ಞಾನೇಂದ್ರ, ಕೆ.ಎಸ್.ಈಶ್ವರಪ್ಪ, ಶಾಸಕ ಚನ್ನಿಯಂಥವರಿಗೆ ಈ ಮಸೂದೆಯಿಂದ ತೊಂದರೆಯಾಗಿದೆಯಷ್ಟೇ.ಯಾರೇ ಇಂಥ ದ್ವೇಷ ಭಾಷಣ ಮಾಡಿದರೂ ಕ್ರಮ ಜರುಗೇ ಜರುಗುತ್ತೆ.
ಪೊಲೀಸ್ ಇಲಾಖೆಗೆ ರಾಜ್ಯ ಸರ್ಕಾರ ಕೊಡುಗೆ ಕೊಟ್ಟಿದೆ. ವಾರ್ಷಿಕ 13 ತಿಂಗಳ ಸಂಬಳ ಘೋಷಿಸಿದೆ. ಹಬ್ಬ ಹರಿದಿನಗಳಲ್ಲೂ ರಜೆ ಮಾಡದೇ ಕರ್ತವ್ಯ ನಿರ್ವಹಿಸುವ ಕಾರಣಕ್ಕಾಗಿ ಒಂದು ತಿಂಗಳ ಹೆಚ್ಚುವರಿ ವೇತನ ಘೋಷಣೆ ಸ್ವಾಗತಾರ್ಹ. ದಿನಕ್ಕೆ 14 ಗಂಟೆ ಒತ್ತಡದ ಕೆಲಸ ಮಾಡುವುದೇ ಪೊಲೀಸ್ ಇಲಾಖೆ. ಹಲವು ಬಾರಿ ಬಿಜೆಪಿ ಸರ್ಕಾರದಲ್ಲಿ ಈ ನ್ಯೂನತೆ ಶಾಸಕನಾಗಿ ಗಮನಕ್ಕೆ ತಂದಿದ್ದೆ. ಆಗ ಸುಧಾರಣೆ ಆಗಿರಲಿಲ್ಲ.ಈಗ ಆಗಿದೆ.
ಔರಾದ್ಕರ್ ವರದಿಯಿಂದ ಹಾಲಿ ತಾರತಮ್ಯ ಪೊಲೀಸರಿಗೆ ಆಗಿದೆ. ಸಮಸ್ಯೆ ಪರಿಹರಿಸುವ ಪ್ರಯತ್ನ ಮಾಡಬೇಕು. ಗಲಭೆ ಸಂದರ್ಭಗಳಲ್ಲಿ ನೀಡುವ ಹಾರ್ಡ್ ಶಿಪ್ ಅಲೋಯನ್ಸ್ ನಲ್ಲಿ ತಾರತಮ್ಯ ಇದೆ. ಗಲಾಟೆಯಾಗುವಾಗ ಬೀಳುವ ಕಲ್ಲುಗಳು ಅಪಾಯಕಾರಿ ಎಲ್ಲರಿಗೂ ಆಗಿರುತ್ತೆ. ಒಂದೇ ಸ್ವರೂಪದ ರಿಸ್ಕ್ ಅಲೋಯನ್ಸ್ ಜಾರಿಗೆ ತರಬೇಕಿದೆ.
ಸೇವಾ ಹಿರಿತನದ ಉಲ್ಲಂಘನೆ ಪೊಲೀಸ್ ಇಲಾಖೆಯಲ್ಲಾಗಿದೆ. ಈಗ ಆಯ್ಕೆಯಾದ ಪೊಲೀಸ್ ವೇತನವೂ ಒಂದೇ ಹತ್ತು ವರ್ಷದ ಹಿಂದೆ ಆಯ್ಕೆಯಾದವರ ವೇತನವೂ ಒಂದೇ ಆದಾಗ ತಾರತಮ್ಯದ ಸಮಸ್ಯೆ ಎದುರಾಗುತ್ತೆ. ಶಾಸಕ ಹಿರಿತನದಂತೆ ಪೊಲೀಸ್ ಇಲಾಖೆಯಲ್ಲೂ ಸೇವಾ ಹಿರಿತನ ನೀಡಬೇಕು. ಬ್ರಿಟೀಷ್ ಜಮಾನದಲ್ಲಿ ಹುತಾತ್ಮರಾದವರ ಧ್ವಜ ದಿನಾಚರಣೆ ಮಾಡಲು ಸರ್ಕಾರ 10 ಸಾವಿರ ನೀಡುತ್ತೆ. ಈ ಓಬಿರಾಯನ ಕಾಲದ ನಿಯಮಗಳನ್ನು ಕೈಬಿಟ್ಟು ಯೋಚಿಸಬೇಕು.
ಕಾರ್ಮಿಕ ಕಾಯ್ದೆಯ ವ್ಯಾಪ್ತಿಗೆ ಪೊಲೀಸರು ಬರುವುದಿಲ್ಲ. ಬಂದಿದ್ದರೆ ಡಬಲ್ ವೇಜಸ್ ನೀಡಬೇಕಾಗುತ್ತಿತ್ತು. ಸ್ವಂತ ಬದುಕಿಗೆ ಅವಕಾಶ ಮಾಡಿಕೊಡಲು ಗೃಹ ಸಚಿವ ಪರಮೇಶ್ವರ್ ಪ್ರಯತ್ನ ಮಾಡುತ್ತಾರೆಂಬ ನಂಬಿಕೆ ಇದೆ.
ಪೊಲೀಸರ ಮೇಲೆ ಪ್ರೀತಿಯೂ ಇದೆ. ಅವರ ಬಗ್ಗೆ ಮಾತಾಡಿದ ಶಾಸನ ಸಭೆಯಲ್ಲಿ ಮಾತನಾಡಿದ ಏಕೈಕ ಶಾಸಕ ನಾನೇ. ಒತ್ತಡದ ಮಧ್ಯೆ ಇರುವ ಪೊಲೀಸ್ ಇಲಾಖೆಗೆ ಸಹಕಾರದ, ಸಹಾಯದ ಅವಶ್ಯಕತೆ ಇದೆ.
ಬಹಳ ವರ್ಷಗಳಿಂದ ಇಲ್ಲಿರುವ ಕೆಲ ಪೊಲೀಸರನ್ನು ಕೂರಿಸಿಕೊಂಡು ಕೇಳಿದರೆ ಗಾಂಜಾದ ಎಲ್ಲಾ ವ್ಯವಹಾರಗಳ ಸಂಪೂರ್ಣ ಮಾಹಿತಿ ಸಿಕ್ಕೇ ಸಿಗುತ್ತೆ. ಇಂಥ ಪೊಲೀಸರನ್ನು ಹಿಡಿದರೆ ಸಾಕು ಗಾಂಜಾದವರು ಸಿಕ್ಕಿ ಬೀಳ್ತಾರೆ.


