ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಅವ್ಯವಸ್ಥೆ; ಸರಿಪಡಿಸಲು ಎನ್ ಕೆ ಶ್ಯಾಮಸುಂದರ್ ಒತ್ತಾಯ*

*ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಅವ್ಯವಸ್ಥೆ; ಸರಿಪಡಿಸಲು ಎನ್ ಕೆ ಶ್ಯಾಮಸುಂದರ್ ಒತ್ತಾಯ*

ಶಿವಮೊಗ್ಗದ ಮೆಗ್ಗಾನ್ ಬೋಧನಾ ಆಸ್ಪತ್ರೆಯಲ್ಲಿ ಇಂದು 12 ಗಂಟೆ ವೇಳೆಗೆ ಚೀಟಿ ಮಾಡುವ ಕೌಂಟರ್ ಹಾಗೂ ಹಣ ಕಟ್ಟುವ ಕೌಂಟರ್ ಬಳಿ ಔಷಧಿ ಪಡೆಯುವ ಕೌಂಟರ್ ಬಳಿ ಜನ ಜಾತ್ರೆ ಉಂಟಾಗಿದ್ದು, ಇಲ್ಲಿ ಕಳ್ಳತನ, ನೂಕು ನುಗ್ಗಲು ತಡೆಯಲು ಯಾರೂ ಇಲ್ಲದ ಪರಿಸ್ಥಿತಿ ಇದೆ. ಏನೇ ಅನಾಹುತ ಸಂಭವಿಸಿದರೂ ಯಾರೂ ಕೇಳುವ ಪರಿಸ್ಥಿತಿಯಲ್ಲಿ ಇಲ್ಲ.

ಓಡಾಡುವುದೇ ಇಲ್ಲಿ ಕಷ್ಟಕರವಾಗಿತ್ತು.ಆಸ್ಪತ್ರೆಯ ಆಡಳಿತ ಮಂಡಳಿ ವೈದ್ಯರು ನಮಗೆ ಸಂಬಂಧಿಸಿದಲ್ಲದಂತೆ ಓಡಾಡುತ್ತಿದ್ದರು. ಇನ್ನು ಆಸ್ಪತ್ರೆಯಲ್ಲಿನ ರೋಗಿಗಳ ಪರಿಸ್ಥಿತಿ ಏನು? ದಿನಾ ಸಾಯುವವರಿಗೆ ಅಳುವವರು ಯಾರು? ಎಂಬ ಧೋರಣೆಗೆ ಆಸ್ಪತ್ರೆಯವರು ಬಂದಂತಿದೆ. ಸಾರ್ವಜನಿಕರು, ರೋಗಿಗಳ ಕಡೆಯವರು ಆಸ್ಪತ್ರೆಯಲ್ಲಿ ಕೆಲಸ ಕಾರ್ಯ ಮಾಡಿಕೊಳ್ಳಲು ಮುಕ್ತವಾಗಿ ಓಡಾಡಲು ಅನುವು ಮಾಡಿಕೊಡಬೇಕು.

ಇನ್ನೂ ಹೆಚ್ಚಿನ ಕೌಂಟರ್ ಗಳಲ್ಲಿ ಕೆಲಸ ನಿರ್ವಹಿಸುವಂತೆ ಒತ್ತಡ ಕಡಿಮೆ ಮಾಡುವ ಪ್ರಯತ್ನ ಆಡಳಿತ ಮಂಡಳಿ ಮಾಡಲಿ…

*ಎನ್.ಕೆ ಶ್ಯಾಮಸುಂದರ್* ಮಾಜಿ ನಗರಸಭಾ ಸದಸ್ಯರು ಪ್ರಧಾನ ಕಾರ್ಯದರ್ಶಿ ಜಿಲ್ಲಾ ಕಾಂಗ್ರೆಸ್ ಶಿವಮೊಗ್ಗ