*ಶಿವಮೊಗ್ಗ ಹೊಸಮನೆ ಕಾರು ಧ್ವಂಸ ಪ್ರಕರಣ- ಮೂವರನ್ನು ಬಂಧಿಸಿದ ಪೊಲೀಸರು* *ಶರತ್- ಪ್ರಶಾಂತ್- ಸತೀಶ್ ಬಂಧಿತರು* *ಏನಿದು ಪ್ರಕರಣ? ಪೊಲೀಸರ ವಿವರಣೆ ಏನು? ಕಾರು ಧ್ವಂಸದ ಹಿಂದಿನ ರೋಚಕ ಸ್ಟೋರಿ ಇಲ್ಲಿದೆ…*
*ಶಿವಮೊಗ್ಗ ಹೊಸಮನೆ ಕಾರು ಧ್ವಂಸ ಪ್ರಕರಣ- ಮೂವರನ್ನು ಬಂಧಿಸಿದ ಪೊಲೀಸರು*
*ಶರತ್- ಪ್ರಶಾಂತ್- ಸತೀಶ್ ಬಂಧಿತರು*
*ಏನಿದು ಪ್ರಕರಣ? ಪೊಲೀಸರ ವಿವರಣೆ ಏನು? ಕಾರು ಧ್ವಂಸದ ಹಿಂದಿನ ರೋಚಕ ಸ್ಟೋರಿ ಇಲ್ಲಿದೆ…*

ಶಿವಮೊಗ್ಗದ ಶರಾವತಿ ನಗರದ ಹಂದಿಜೋಗಿ ಬೀದಿಯಲ್ಲಿ ಮನೆ ಮುಂಭಾಗದಲ್ಲಿ ನಿಲ್ಲಿಸಿದ್ದ ಕಾರನ್ನು ಮನೋಯಿಚ್ಛೆ ಧ್ವಂಸ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶರತ್, ಪ್ರಶಾಂತ್ ಮತ್ತು ಸತೀಶರವರನ್ನು ದೊಡ್ಡಪೇಟೆ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಏನಿದು ಪ್ರಕರಣ? ಪೊಲೀಸರ ವಿವರಣೆ ಏನು? ಕಾರು ಧ್ವಂಸದ ಹಿಂದಿನ ರೋಚಕ ಸ್ಟೋರಿ ಇಲ್ಲಿದೆ…
ದಿನಾಂಕ:04-03-2026 ರಂದು *ಸುರೇಶ ಆರ್ ಬಿನ್ ರಾಮಣ್ಣ* ವಾಸ ಹಂದಿಜೋಗಿ ಬೀದಿ ಶರಾವತಿ ನಗರ, ಶಿವಮೊಗ್ಗ ರವರು ಠಾಣೆಗೆ ಹಾಜರಾಗಿ ದಿನಾಂಕ:03-03-2026 ರಂದು ತನ್ನ ಕಾರನ್ನು ಮನೆ ಮುಂಭಾಗದಲ್ಲಿ ನಿಲ್ಲಿಸಿದ್ದು ರಾತ್ರಿ ಸುಮಾರು 11-40 ಗಂಟೆಗೆ ಯಾರೋ 2 ಜನ ಅಪರಿಚಿತರು ಬಂದು *ತನ್ನ ಕಾರ್ ನಂ KA 14 MC 0553 ರ ಮುಂಭಾಗದ ಗ್ಲಾಸ್,* ಬಲಬದಿಯ 2 ಗ್ಲಾಸ್, ಹಿಂದಿನ ಗ್ಲಾಸ್ ಗಳನ್ನು ಒಡೆದು ಸುಮಾರು 2 ರಿಂದ 2.5 ಲಕ್ಷ ರೂ ಮೊತ್ತದ ನಷ್ಟ ಮಾಡಿರುತ್ತಾರೆ ಎಂದು ದೂರು ನೀಡಿದ ಮೇರೆಗೆ ಠಾಣಾ ಗುನ್ನೆ ನಂ: 89/2026 ಕಲಂ 324(5) ಸಹಿತ 3(5) BNS-2023 ರೀತ್ಯ ಪ್ರಕರಣ ದಾಖಲಾಗಿ *ತನಿಖೆ ಕೈಗೊಂಡಿರುತ್ತದೆ.*
2 ಜನ ಅಪರಿಚಿತರ ಪತ್ತೆಗಾಗಿ ದೊಡ್ಡಪೇಟೆ ಪೊಲೀಸ್ ಠಾಣಾ *ಪಿ.ಐ ಸತ್ಯನಾರಾಯಣ,* ಹೆಚ್.ಸಿ 433 ಸಂದೀಪ್, ಪಿ.ಸಿ 1070 ಗಣೇಶ್, ಪಿ.ಸಿ 1224 ಗುರುನಾಯ್ಕ,ಪಿ.ಸಿ 1110 ಮನೋಹರ್ ರವರ ವಿಷೇಶ ತಂಡ ರಚನೆ ಮಾಡಿ ಆರೋಪಿ ಪತ್ತೆಗಾಗಿ ನೇಮಿಸಿದ್ದು, ಸದರಿ ತಂಡ ಕೃತ್ಯ ನಡೆದ ಸ್ಥಳದಲ್ಲಿ *ಅಳವಡಿಸಿದ್ದ C.C ಕ್ಯಾಮರಾಗಳನ್ನು ಪರಿಶೀಲನೆ ಮಾಡಿ* ಪ್ರಕರಣದ ಹಿನ್ನೆಲೆ ತಿಳಿದು ಆರೋಪಿ ಚಹರೆ ಗುರುತಿನ ಮೇಲೆ ಕೆಳಕಂಡ ಆರೋಪಿಗಳನ್ನು ಪತ್ತೆ ಮಾಡಿರುತ್ತದೆ.
*1) ಶರತ್ ಕೆ ತಂದೆ ಕೃಷ್ಣಪ್ಪ,* ವಾಸ ಚಾನಲ್ ಏರಿಯಾ 6 ನೇ ಕ್ರಾಸ್ ವಿನೋಬನಗರ, ಶಿವಮೊಗ್ಗ
*2) ಪ್ರಶಾಂತ್ ಎ ತಂದೆ ಅಶೋಕ* ವಾಸ 2 ನೇ ಕ್ರಾಸ್ ಮೇದಾರ ಕೇರಿ ವಿನೋಬನಗರ ಶಿವಮೊಗ್ಗ
*3) ಸತೀಶ ಡಿ ಬಿನ್ ದುರ್ಗಪ್ಪ ಡಿ* ವಾಸ, ವೀಣಾ ಶಾರದಾ ಶಾಲೆ ಹಿಂಭಾಗ 2 ನೇ ಕ್ರಾಸ್, ‘ಬಿ’ ಬ್ಲಾಕ್ ಶರಾವತಿ ನಗರ, ಶಿವಮೊಗ್ಗ
ಆರೋಪಿ ವಿಚಾರಣೆ ನಡೆಸಿದಾಗ, ಪಿರ್ಯಾದಿ *ಸುರೇಶ್ ಖರೀದಿ ಮಾಡಬೇಕಾಗಿದ್ದ ಮನೆಯನ್ನು 3 ನೇ ಆರೋಪಿ ಸತೀಶನು ಖರೀದಿ ಮಾಡಿರುತ್ತಾನೆ.* ಮನೆ ಖರೀದಿ ಮಾಡಿದ ವಿಷಯದಲ್ಲಿ *ಆರೋಪಿ ಸತೀಶನಿಗೂ, ಪಿರ್ಯಾದಿ ಸುರೇಶ್ ನೀಗೂ* ಜಗಳವಾಗುತ್ತಿದ್ದು, ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಕೇಸು, ಪ್ರತಿಕೇಸು ದಾಖಲಾಗಿರುತ್ತದೆ. ಈ ವಿಷಯವನ್ನು *ಸತೀಶ ತನ್ನ ಸ್ನೇಹಿತ ಶರತ್, ಪ್ರಶಾಂತ್ ಬಳಿ ಹೇಳಿಕೊಳ್ಳುತ್ತಿದ್ದನು* ಈ ಹಿನ್ನಲೆಯಲ್ಲಿ *ಶರತ್, ಪ್ರಶಾಂತ್, ಸತೀಶ* ಸೇರಿ ಸುರೇಶನಿಗೆ ಸಂಬಂಧಿಸಿದ *ಕಾರಿನ ಗ್ಲಾಸ್ ಅನ್ನು ಕುಡಿದ ಮತ್ತಿನಲ್ಲಿ ಒಡೆದು ಸುಮಾರು 2.5 ಲಕ್ಷ ರೂ ಮೊತ್ತದ ನಷ್ಟ ಮಾಡಿರುತ್ತಾರೆ* ಎಂಬ ವಿಷಯ ತನಿಖೆಯಲ್ಲಿ ತಿಳಿದಿರುತ್ತದೆ.


